ಬೆಂಗಳೂರು:ಮುಂದಿನ ಹೋಳಿ ಹಬ್ಬದಲ್ಲಿ ನೀರು ನಿರುಪಯುಕ್ತವಾಗುವುದನ್ನು ತಡೆಯುವಂತೆ ಕಾವೇರಿ ಮತ್ತು ಬೋರ್‌ವೆಲ್ ನೀರನ್ನು ಬಳಸದಂತೆ ಸಾರ್ವಜನಿಕರಿಗೆ ಸಲಹೆ ರೂಪದಲ್ಲಿ ಪ್ರಕಟಣೆಯನ್ನು ಮಂಡಳಿ ಬಿಡುಗಡೆ ಮಾಡಿದೆ. ಹೋಳಿ ಹಬ್ಬ ಸಾಂಸ್ಕೃತಿಕ ಆಚರಣೆಯ ಹಬ್ಬವಾಗಿದೆ. ಇದನ್ನು ತಮ್ಮ ಮನೆಗಳಲ್ಲಿ, ವಾಸಸ್ಥಳಗಳಲ್ಲಿ ಆಚರಿಸುವುದಕ್ಕೆ ಯಾವುದೇ ಅಭ್ಯಂತರ ಇಲ್ಲ ಎಂದು ಬೆಂಗಳೂರು ಜಲಮಂಡಳಿಯ ಅಧ್ಯಕ್ಷ ಡಾ.ವಿ.ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.
ರೈನ್ ಡ್ಯಾನ್ಸ್, ಪೂಲ್ ಡ್ಯಾನ್ಸ್: ಹೋಳಿಹಬ್ಬದಲ್ಲಿ ಕಾವೇರಿ ನೀರು,ಬೋರ್‌ವೆಲ್ ನೀರು ಬಳಕೆಯ ಕುರಿತು ಮಾಹಿತಿ ನೀಡಿರುವ ಅವರು, ಸಾಂಸ್ಕೃತಿವಾಗಿ ಆಚರಣೆ ಮಾಡುವುದಕ್ಕೆ ಯಾವುದೇ ನಿಷೇಧ ಹೇರುವುದಿಲ್ಲ. ಆದರೆ, ಈ ಸಂದರ್ಭದಲ್ಲಿ ಮನೋರಂಜನೆಯಾಗಿ ವಾಣಿಜ್ಯ ಉದ್ದೇಶದಿಂದ ರೈನ್ ಡ್ಯಾನ್ಸ್, ಪೂಲ್ ಡ್ಯಾನ್ಸ್ ಆಯೋಜಿಸುವುದು ಸಮಂಜಸವಲ್ಲ ಎಂದು ಹೇಳಿದ್ದಾರೆ.