ಕರ್ನಾಟಕ

karnataka

ETV Bharat / state

ಬೇಳೆ ಕಾಳು ಅಭಿವೃದ್ಧಿ ಮಂಡಳಿ ಮಾರುಕಟ್ಟೆ ವಿಸ್ತರಣೆಗೆ ಕೃಷಿ ಸಚಿವರ ಸೂಚನೆ - Minister N Cheluvarayaswamy

ವಿಕಾಸಸೌಧದಲ್ಲಿ ನಡೆದ ಸಭೆಯಲ್ಲಿ ತೊಗರಿಬೇಳೆ ಜೊತೆಗೆ ಹೆಸರು ಕಾಳು, ಉದ್ದು ಹಾಗೂ ಕಡಲೆ ಕಾಳುಗಳನ್ನು ಭೀಮಾ ಫಲ್ಸ್ ಮಾದರಿಯಲ್ಲಿ ಬ್ರ್ಯಾಂಡಿಂಗ್ ಮಾಡಿ ಮಾರುಕಟ್ಟೆಗೆ ಬಿಡುಗಡೆ ಮಾಡುವಂತೆ ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದರು.

Minister N Cheluvarayaswamy held a meeting of officials.
ಬೆಂಗಳೂರು ವಿಕಾಸಸೌಧದಲ್ಲಿ ಸಚಿವ ಎನ್ ಚಲುವರಾಯಸ್ವಾಮಿ ಅಧಿಕಾರಿಗಳ ಸಭೆ ನಡೆಸಿದರು.

By ETV Bharat Karnataka Team

Published : Mar 15, 2024, 5:06 PM IST

ಬೆಂಗಳೂರು:ಕರ್ನಾಟಕ ರಾಜ್ಯ ಬೇಳೆ ಕಾಳು ಅಭಿವೃದ್ಧಿ ಮಂಡಳಿಯು ದ್ವಿದಳ ಧಾನ್ಯಗಳ ಮೌಲ್ಯವರ್ಧನೆ ಹಾಗೂ ಬ್ರ್ಯಾಂಡಿಂಗ್ ಬಗ್ಗೆ ಹೆಚ್ಚು ಆದ್ಯತೆ ನೀಡಿ ಸಂಸ್ಥೆಯನ್ನು ಇನ್ನಷ್ಟು ಲಾಭದಾಯಕವಾಗಿ ಸುಸ್ಥಿರಗೊಳಿಸುವಂತೆ ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಇಂದು ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿದ ಅವರು, ತೊಗರಿಬೇಳೆ ಜೊತೆಗೆ ಹೆಸರುಕಾಳು , ಉದ್ದು ಹಾಗೂ ಕಡಲೆ ಕಾಳುಗಳನ್ನು ಭೀಮಾ ಫಲ್ಸ್ ಮಾದರಿಯಲ್ಲಿ ಬ್ರ್ಯಾಂಡಿಂಗ್ ಮಾಡಿ ಮಾರುಕಟ್ಟೆಗೆ ಬಿಡುಗಡೆ ಮಾಡುವಂತೆ ಸೂಚಿಸಿದರು.

ಮಂಡಳಿಯ ಕಾರ್ಯ ಚಟುವಟಿಕೆಯನ್ನು ವಿಸ್ತರಿಸಿ ಸಂಸ್ಥೆಯ ಆರ್ಥಿಕ ಶಕ್ತಿ ಹೆಚ್ಚಿಸುವಂತೆ ಹಾಗೂ ರೈತರಿಗೆ ಆರಿವು ,ನೆರವು ನೀಡುವ ಚಟುವಟಿಕೆಗಳನ್ನು ವಿಸ್ತರಿಸುವಂತೆ ಸಲಹೆ ನೀಡಿದರು. ಮಾರುಕಟ್ಟೆ ವಿಸ್ತರಣೆಯಲ್ಲಿ ತೊಡಗಿರುವ ಸಿಬ್ಬಂದಿಗೆ ವಿಶೇಷ ವೇತನ ನೀಡಬಹುದಾಗಿದೆ. ಅವರ ಸಾಮರ್ಥ್ಯ, ಸಾಧನೆ ಪರಿಗಣಿಸಿ ನಂತರ ವಾರ್ಷಿಕ ವರಮಾನ ವೃದ್ದಿ ಆಧರಿಸಿ ಬೋನಸ್ ನೀಡುವಂತೆ ಸಚಿವರು ನಿರ್ದೇಶನ ನೀಡಿದರು.

ಕೃಷಿ ಆಯುಕ್ತ ವೈ ಎಸ್ ಪಾಟೀಲ್, ನಿರ್ದೇಶಕ ಡಾ ಜಿ ಟಿ ಪುತ್ರ ಕರ್ನಾಟಕ ರಾಜ್ಯ ಬೇಳೆ ಕಾಳು ಅಭಿವೃದ್ಧಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಅಂಥೋಣಿ ಇಮ್ಯಾನ್ಯುವೆಲ್, ಕೃಷಿ ಸಚಿವರ ಆಪ್ತ ಕಾರ್ಯದರ್ಶಿ ಪ್ರಭಾಕರ್ ಮತ್ತಿತರರು ಹಾಜರಿದ್ದರು.

ಇದನ್ನೂ ಓದಿ:ಕಾಂಗ್ರೆಸ್​ಗೆ ಭಿಕ್ಷೆ ಬೇಡುವ ಪರಿಸ್ಥಿತಿ ಬಂದಿದೆ: ಗತಿಗೆಟ್ಟ ಪಾರ್ಟಿಯಾಗಿ ಮಾರ್ಪಟ್ಟಿದೆ - ವಿಪಕ್ಷ ನಾಯಕ ಆರ್ ಅಶೋಕ್

ABOUT THE AUTHOR

...view details