ಬೆಂಗಳೂರು:ಹೊಸ ವರ್ಷಾಚರಣೆಗೆ ಸ್ನೇಹಿತನೊಂದಿಗೆ ಪಬ್‌ಗೆ ತೆರಳಿದ್ದ ಯುವತಿಯನ್ನು ಅಪರಿಚಿತನೋರ್ವ ಅಸಭ್ಯವಾಗಿ ಸ್ಪರ್ಶಿಸಿರುವ ಆರೋಪ ಕೇಳಿಬಂದಿದೆ. ತಡರಾತ್ರಿ ಕಾಡುಬೀಸನಹಳ್ಳಿಯ ಪಬ್‌ನಲ್ಲಿ ಘಟನೆ ನಡೆದಿದ್ದು, ಮಾರತ್ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ನೇಹಿತನೊಂದಿಗೆ ರಾತ್ರಿ ಪಬ್‌ಗೆ ಬಂದಿದ್ದ ಯುವತಿಯನ್ನ ಅಪರಿಚಿತನೋರ್ವ ಅಸಭ್ಯವಾಗಿ ಸ್ಪರ್ಶಿಸಿದ್ದಾನೆ ಎನ್ನಲಾಗಿದೆ. ಈ ವೇಳೆ, ಸ್ಥಳದಲ್ಲೇ ಯುವತಿ ಕಿರುಚಿಕೊಂಡ ಪ್ರತಿರೋಧವೊಡ್ಡಿದ್ದಾರೆ. ಅಷ್ಟರಲ್ಲಾಗಲೇ ಸ್ಥಳದಿಂದ ಆರೋಪಿ ಕಾಲ್ಕಿತ್ತಿದ್ದಾನೆ. ಸೂಕ್ತ ಭದ್ರತೆ ಒದಗಿಸದ ಪಬ್ ಸಿಬ್ಬಂದಿ ವಿರುದ್ಧ ಯುವತಿ ಮತ್ತು ಆಕೆಯ ಸ್ನೇಹಿತ ಆಕ್ರೋಶ ವ್ಯಕ್ತಪಡಿಸಿದ್ದಾರೆ.