ಕರ್ನಾಟಕ

karnataka

ETV Bharat / state

ಈಶ್ವರಪ್ಪನವರು ಪಕ್ಷದಿಂದ ಉಚ್ಚಾಟನೆಯಾಗಿರುವ ನೋವಿದೆ: ಬಿ.ವೈ.ರಾಘವೇಂದ್ರ - B Y Raghavendra - B Y RAGHAVENDRA

ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಕೆ.ಎಸ್‌.ಈಶ್ವರಪ್ಪ ಪಕ್ಷದಿಂದ ಉಚ್ಚಾಟನೆಯಾಗಿರುವ ಬಗ್ಗೆ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಪ್ರತಿಕ್ರಿಯಿಸಿದ್ದಾರೆ.

ಈಶ್ವರಪ್ಪ ನಮ್ಮ ಪಕ್ಷದಲ್ಲಿಯೇ ಇರಬೇಕಿತ್ತು: ಬಿ.ವೈ.ರಾಘವೇಂದ್ರ
ಈಶ್ವರಪ್ಪ ನಮ್ಮ ಪಕ್ಷದಲ್ಲಿಯೇ ಇರಬೇಕಿತ್ತು: ಬಿ.ವೈ.ರಾಘವೇಂದ್ರ

By ETV Bharat Karnataka Team

Published : Apr 23, 2024, 4:38 PM IST

Updated : Apr 23, 2024, 8:07 PM IST

ಬಿ.ವೈ.ರಾಘವೇಂದ್ರ ಹೇಳಿಕೆ

ಶಿವಮೊಗ್ಗ: ಈಶ್ವರಪ್ಪನವರು ಪಕ್ಷದಿಂದ ಉಚ್ಚಾಟನೆಯಾಗಿರುವ ನೋವಿದೆ. ಅವರು ನಮ್ಮ ಜೊತೆಗಿರಬೇಕಿತ್ತು ಎಂದು ಶಿವಮೊಗ್ಗ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ತಿಳಿಸಿದರು.

ಶಿಕಾರಿಪುರದಲ್ಲಿಂದು ಮಾತನಾಡಿದ ಅವರು, ಪ್ರತಿ ಚುನಾವಣೆಯಲ್ಲೂ ನಮಗೆ ಅವರ ಆಶೀರ್ವಾದ ಸಿಗುತ್ತಿತ್ತು. ಈ ಬಾರಿ ಅವರ ಆಶೀರ್ವಾದ ನನಗೆ ಸಿಗುತ್ತಿಲ್ಲ ಎಂಬುದೇ ನೋವು ಎಂದರು.

ನಮ್ಮ ರಾಜ್ಯ ಮತ್ತು ಜಿಲ್ಲೆಯಲ್ಲಿ ಒಳ್ಳೆಯ ವಾತಾವರಣ ಸೃಷ್ಟಿಯಾಗಿದ್ದು ಬಿಜೆಪಿ ಗೆಲುವಿಗೆ ಸಹಾಯಕವಾಗಲಿದೆ. ನಮ್ಮ ಜಿಲ್ಲೆಯ ಜನ ಮೋದಿ ಅವರಿಗೆ ಒಳ್ಳೆಯ ಕೊಡುಗೆ ಕೊಡುತ್ತಾರೆ. ಕಾಂಗ್ರೆಸ್ ತುಷ್ಟೀಕರಣ ರಾಜಕಾರಣ ಮಾಡುತ್ತಿದೆ. ಈ ನಾಡಿಗೆ, ದೇಶಕ್ಕೆ ಕಾಂಗ್ರೆಸ್ ಚೊಂಬು‌ ಕೊಟ್ಟಿದೆ. ಆ ಚೊಂಬನ್ನೇ ಮೋದಿ ಅಕ್ಷಯ ಪಾತ್ರೆಯಾಗಿ ಪರಿವರ್ತನೆ ಮಾಡಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷ ವಿಧಾನಸಭೆ ಚುನಾವಣೆಪೂರ್ವ ಹೇಳಿದ್ದ ಗ್ಯಾರಂಟಿಗಳೇ ಬೇರೆ, ಚುನಾವಣೆಯ ನಂತರ ಗ್ಯಾರಂಟಿ ವಿಷಯದಲ್ಲಿ ಸರ್ಕಾರ ನಡೆದುಕೊಳ್ಳುತ್ತಿರುವ ರೀತಿಯೇ ಬೇರೆ. ಹಾಗಾಗಿ ಈ ಬಾರಿಯ ಚುನಾವಣೆಯಲ್ಲಿ ಜನ ಕಾಂಗ್ರೆಸ್​ಗೆ ಬುದ್ಧಿ ಕಲಿಸಲಿದ್ದಾರೆ ಎಂದು ಟೀಕಿಸಿದರು.

ಆರಗ ಜ್ಞಾನೇಂದ್ರ ಪ್ರತಿಕ್ರಿಯೆ:ಕ್ಷೇತ್ರದಲ್ಲಿ ರಾಘವೇಂದ್ರರ ಗೆಲುವು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಅಭಿವೃದ್ಧಿ ಕೆಲಸ ಮೂಲೆಮೂಲೆಗೂ ತಲುಪಿದೆ. ಕಾಂಗ್ರೆಸ್ ಸರಕಾರ ಬಂದ ಮೇಲೆ ದುಷ್ಟ ಮತ್ತು ವಿಕೃತ ಶಕ್ತಿಗಳ ಉಪದ್ರವ ಮೀತಿ ಮೀರಿದೆ. ಜನ ಈ ಬಾರಿ ಕಾಂಗ್ರೆಸ್​ಗೆ ಚೊಂಬು‌ ಕೊಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ:ಪಕ್ಷಕ್ಕೆ ಸೆಡ್ಡು ಹೊಡೆದು ಕಣದಲ್ಲುಳಿದ ಈಶ್ವರಪ್ಪ: ಶಿವಮೊಗ್ಗ ಗೆಲ್ಲಲು ಏನೆಲ್ಲಾ ಲೆಕ್ಕಾಚಾರ? - Eshwarappa

Last Updated : Apr 23, 2024, 8:07 PM IST

ABOUT THE AUTHOR

...view details