ಕರ್ನಾಟಕ

karnataka

ETV Bharat / state

ತುಕಾಲಿ ಸಂತೋಷ್ ಕಾರು ಅಪಘಾತ: ಆಟೋ ಚಾಲಕ ಸಾವು - tukali santhosh car accident

ಕುಣಿಗಲ್ ತಾಲೂಕಿನ ಹೊನ್ನೇನಹಳ್ಳಿ ಬಳಿ ಕಳೆದ ರಾತ್ರಿ ನಡೆದ ಅಪಘಾತದಲ್ಲಿ ಆಟೋ ಚಾಲಕ ಜಗದೀಶ್ ಸಾವನ್ನಪ್ಪಿದ್ದಾರೆ.

Auto driver dies after accident in tumkur
ತುಕಾಲಿ ಸಂತೋಷ್ ಕಾರು ಅಪಘಾತ

By ETV Bharat Karnataka Team

Published : Mar 14, 2024, 1:36 PM IST

ತುಮಕೂರು: ಬಿಗ್‌ ಬಾಸ್ ಖ್ಯಾತಿಯ ಹಾಸ್ಯನಟ ತುಕಾಲಿ ಸಂತೋಷ್ ಪ್ರಯಾಣಿಸುತ್ತಿದ್ದ ಕಾರಿಗೆ ಡಿಕ್ಕಿಯಾಗಿ ಗಾಯಗೊಂಡಿದ್ದ ಆಟೋ ಚಾಲಕ ಜಗದೀಶ್ (42) ಇಂದು ಬೆಳಗ್ಗೆ ಸಾವನ್ನಪ್ಪಿದ್ದಾರೆ. ಕುಣಿಗಲ್ ತಾಲೂಕಿನ ಹೊನ್ನೇನಹಳ್ಳಿ ಬಳಿ ಕಳೆದ ರಾತ್ರಿ ಘಟನೆ ಸಂಭವಿಸಿತ್ತು.

ನಿನ್ನೆ ರಾತ್ರಿ ಕಾರು-ಆಟೋ ನಡುವೆ ಅಪಘಾತ ಸಂಭವಿಸಿದೆ. ಆಟೋ ಚಾಲಕ ಜಗದೀಶ್ ಅವರ ಎದೆ ಭಾಗ ಹಾಗೂ ಮುಖದ ಭಾಗಕ್ಕೆ ಗಂಭೀರ ಗಾಯಗಳಾಗಿದ್ದವು. ಇವರನ್ನು ಕುಣಿಗಲ್ ತಾಲೂಕಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿತ್ತು. ಆದ್ರೆ ಜಗದೀಶ್ ಅವರ ಸಂಬಂಧಿಕರು ಯಾರೂ ಕೂಡ ಬಂದಿರಲಿಲ್ಲ. ಈಗಾಗಲೇ ಕೆಲ ಬಾರಿ ಜಗದೀಶ್ ಇಂತಹ ಅಪಘಾತಗಳಿಗೆ ಒಳಗಾಗಿ ಚೇತರಿಸಿಕೊಂಡಿದ್ದರು. ಈ ಬಾರಿಯೂ ಸಾಮಾನ್ಯ ಅಪಘಾತ, ಚೇತರಿಸಿಕೊಳ್ಳಲಿದ್ದಾರೆ ಎಂಬ ನಂಬಿಕೆ ಕುಟುಂಬಸ್ಥರದ್ದಾಗಿತ್ತು. ಆದ್ರೆ ದುರಾದೃಷ್ಟವಶಾತ್ ಇಂದು ಮುಂಜಾನೆ 3 ಗಂಟೆ ಹೊತ್ತಿಗೆ ಮೃತಪಟ್ಟಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಕಾರನ್ನು ತುಕಾಲಿ ಸಂತೋಷ್ ಖರೀದಿ ಮಾಡಿದ್ದರು. ಹೊಸ ಕಾರು ಮನೆಗೆ ಬಂದು ಎರಡು ವಾರ ಕಳೆಯುವಷ್ಟರಲ್ಲೇ ಅಪಘಾತ ಸಂಭವಿಸಿದೆ. ಕುಣಿಗಲ್ ಮಾರ್ಗವಾಗಿ ತುಕಾಲಿ ಸಂತೋಷ್ ದಂಪತಿ ಹಾಸನ ಜಿಲ್ಲೆಯ ಹೊಳೆನರಸೀಪುರ ಕಡೆಗೆ ಪ್ರಯಾಣಿಸುತ್ತಿದ್ದರು. ಇದೇ ವೇಳೆ ಕುಣಿಗಲ್ ಕಡೆಯಿಂದ ಕುರುಡಿಹಳ್ಳಿಗೆ ಆಟೋ ಬರುತ್ತಿತ್ತು. ಈ ಸಂಬಂಧ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಬಿಗ್‌ ಬಾಸ್ ಖ್ಯಾತಿಯ ತುಕಾಲಿ ಸಂತೋಷ್ ಕಾರು ಅಪಘಾತ: ಆಟೋ ಚಾಲಕನಿಗೆ ಗಾಯ

ABOUT THE AUTHOR

...view details