ಕರ್ನಾಟಕ

karnataka

ETV Bharat / state

ಹಾವೇರಿ: ಭಾರಿ ಮಳೆಗೆ ಮನೆ ಕುಸಿತ, ಸಾವಿನ ಸಂಖ್ಯೆ ನಾಲ್ಕಕ್ಕೆ ಏರಿಕೆ - House Collapse - HOUSE COLLAPSE

ಸವಣೂರ ತಾಲೂಕಿನ ಮಾದಾಪುರ ಗ್ರಾಮದಲ್ಲಿ ಸತತ ಮಳೆಗೆ ಮನೆ ಕುಸಿದು ಬಿದ್ದು ಮೃತಪಟ್ಟವರ ಸಂಖ್ಯೆ ಇದೀಗ ಹೆಚ್ಚಾಗಿದೆ.

HOUSE COLLAPSE
ಮೃತ ಯಲ್ಲವ್ವ ಹರಕುಣಿ (ETV Bharat)

By ETV Bharat Karnataka Team

Published : Jul 27, 2024, 2:08 PM IST

ಹಾವೇರಿ: ಜಿಲ್ಲೆಯ ಸವಣೂರು ತಾಲೂಕಿನ ಮಾದಾಪುರದ ಗ್ರಾಮದ ಮನೆ ಕುಸಿತದ ಪ್ರಕರಣದಲ್ಲಿ ಮೃತಪಟ್ಟವರ ಸಂಖ್ಯೆ ನಾಲ್ಕಕ್ಕೇರಿದೆ. ಘಟನೆಯಲ್ಲಿ ತೀವ್ರ ಗಾಯಗೊಂಡಿದ್ದ 60 ವರ್ಷದ ಯಲ್ಲವ್ವ ಹರಕುಣಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಯಲ್ಲವ್ವ ಚಿಕಿತ್ಸೆ ಫಲಿಸದೇ ಇಂದು ಮೃತಪಟ್ಟಿದ್ದಾರೆ.

ಜುಲೈ 19 ರಂದು ಮಾದಾಪುರ ಗ್ರಾಮದಲ್ಲಿ ಸತತ ಮಳೆಗೆ ಮನೆ ಕುಸಿದು ಬಿದ್ದು ಮೂವರು ಮೃತಪಟ್ಟು, ಇಬ್ಬರು ಗಾಯಗೊಂಡಿದ್ದರು. ತೀವ್ರ ಗಾಯಗೊಂಡಿದ್ದ ಮಹಿಳೆ ಯಲ್ಲವ್ವ ಕೂಡ ಇಂದು ಮೃತಪಟ್ಟಿದ್ದರಿಂದ ಸಾವಿನ ಸಂಖ್ಯೆ ನಾಲ್ಕಕ್ಕೇರಿದೆ.

ಅಂದು ನಡೆದ ದುರಂತದಲ್ಲಿ 18 ತಿಂಗಳಿನ ಅವಳಿ ಹೆಣ್ಣು ಮಕ್ಕಳು, 30 ವರ್ಷದ ಓರ್ವ ಮಹಿಳೆ ಅಂದೇ ಮೃತಪಟ್ಟಿದ್ದರು. ಘಟನೆಯಲ್ಲಿ ಮುತ್ತಪ್ಪ, ಸುನೀತಾ ಮತ್ತು ಯಲ್ಲಮ್ಮ ಗಾಯಗೊಂಡಿದ್ದರು. ಇಂದು ಯಲ್ಲವ್ವ ಕೂಡ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಸವಣೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿತ್ತು.

ಇದನ್ನೂ ಓದಿ:ಹಾವೇರಿ: ಮಳೆಗೆ ಮನೆ ಮೇಲ್ಚಾವಣಿ ಕುಸಿದು ಮೂವರು ಸಾವು, ಮೃತರ ಕುಟುಂಬಸ್ಥರಿಗೆ ತಲಾ ₹5 ಲಕ್ಷ ಪರಿಹಾರ - Haveri House Collapse

ABOUT THE AUTHOR

...view details