ಹಾವೇರಿ: ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಬುಧವಾರ ತಮ್ಮ ಶಕ್ತಿಪ್ರದರ್ಶನ ಮಾಡಿದರು. ಏಲಕ್ಕಿ ನಗರಿಯಲ್ಲಿ ಬೃಹತ್ ರೋಡ್ ಶೋ ನಡೆಸಿದರು. ಹಾವೇರಿಯ ಎಂ.ಜಿ.ರೋಡ್. ಹಳೇ ಪಿಬಿರಸ್ತೆ ಜೆಪಿ ಸರ್ಕಲ್, ಜೆ.ಹೆಚ್.ಪಟೇಲ್ ವೃತ್ತದಿಂದ ದುಂಡಿಬಸವೇಶ್ವರ ದೇವಸ್ಥಾನದವರೆಗೆ ರೋಡ್ ಶೋ ನಡೆಸಿದರು. ತೆರೆದ ವಾಹನದಲ್ಲಿ ನಡೆದ ರೋಡ್ ಶೋನಲ್ಲಿ ಆನಂದಸ್ವಾಮಿ ಗಡ್ಡದೇವರಮಠಗೆ ಸಚಿವರಾದ ಹೆಚ್.ಕೆ.ಪಾಟೀಲ್, ಶಿವಾನಂದಪಾಟೀಲ್ ವಿಧಾನಪರಿಷತ್ ಸದಸ್ಯ ಸಲೀಂ ಅಹ್ಮದ್, ರುದ್ರಪ್ಪ ಲಮಾಣಿ, ಬಸವರಾಜ್ ಶಿವಣ್ಣನವರ್, ಯು.ಬಿ.ಬಣಕಾರ್ ಸೇರಿದಂತೆ ಪ್ರಮುಖ ನಾಯಕರು ಸಾಥ್ ನೀಡಿದರು.
ಮೆರವಣಿಗೆ ಉದ್ದಕ್ಕೂ ವಿವಿಧ ಜಾನಪದ ಕಲಾತಂಡಗಳ ತಮ್ಮ ಕಲಾಪ್ರದರ್ಶನ ಮಾಡಿದವು. ಡೊಳ್ಳುಕುಣಿತ ಕುದುರೆ ಕುಣಿತ, ಮದ್ದಲೆ, ಜಾಂಜ್ ಬೃಹತ್ ಗೊಂಬೆಗಳ ಪ್ರದರ್ಶನ ಸೇರಿದಂತೆ ವಿವಿಧ ಕಲಾತಂಡಗಳು ಕಲಾಪ್ರದರ್ಶನ ನಡೆಸಿದವು. ಮೆರವಣಿಗೆ ಉದ್ದಕ್ಕೂ ನಾಯಕರಿಗೆ
ಪುಷ್ಪಗಳ ಸುರಿಮಳೆಯನ್ನೇ ಹರಿಸಲಾಯಿತು.