ಕರ್ನಾಟಕ

karnataka

ETV Bharat / state

ಬಯೋಟೆಕ್​​ ಕ್ಷೇತ್ರ: ಸ್ವಿಟ್ಜರ್ಲೆಂಡ್ ಮೈಕ್ರೋಬ್ ಇನ್ವೆಸ್ಟಿಗೇಷನ್ಸ್​​ ಸ್ವಾಧೀನಪಡಿಸಿಕೊಂಡ ಅನಾಬಿಯೋ ಟೆಕ್ನಾಲಜೀಸ್

ಅನಾಬಿಯೋ ಟೆಕ್ನಾಲಜೀಸ್ ಪ್ರೈ ಲಿಮಿಟೆಡ್ ಕಂಪೆನಿಯು ಸ್ವಿಟ್ಜರ್ಲೆಂಡ್​​ನ ಜುರಿಚ್ ಮೂಲದ ಮೈಕ್ರೋಬ್ ಇನ್ವೆಸ್ಟಿಗೇಷನ್ಸ್​​​ ಅನ್ನು ಸ್ವಾಧೀನಪಡಿಸಿಕೊಂಡಿದೆ.

ಸಚಿವ ಪ್ರಿಯಾಂಕ್ ಖರ್ಗೆ ಅವರ ನೇತೃತ್ವದಲ್ಲಿ ನಡೆದ ತಂತ್ರಜ್ಞಾನ ಕಾರ್ಯಕ್ರಮ
ಬೆಂಗಳೂರಿನ ಎಲೆಕ್ಟ್ರಾನಿಕ್​​ ಸಿಟಿಯ ಸ್ವಿಸ್ನೆಕ್ಸ್​ನಲ್ಲಿ ನಡೆದ ಕಾರ್ಯಕ್ರಮ (ETV Bharat)

By ETV Bharat Karnataka Team

Published : 4 hours ago

ಬೆಂಗಳೂರು:ಬಯೋಟೆಕ್​​ ಕ್ಷೇತ್ರದಲ್ಲಿ ಪ್ರಾಬಲ್ಯ ಮೆರೆಯಲು ಭಾರತ ಮತ್ತು ಸ್ವಿಟ್ಜರ್ಲೆಂಡ್‌‌ ದೇಶಗಳು ಸಹಭಾಗಿತ್ವಕ್ಕೆ ಮುಂದಾಗಿದೆ. ನಾವಿನ್ಯತೆಯಲ್ಲಿ ಪ್ರವರ್ಧಮಾನದಲ್ಲಿರುವ ಅನಾಬಿಯೋ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್, ಸೂಕ್ಷ್ಮಜೀವಿ ಸಂಶೋಧನೆ ಮತ್ತು ರೋಗನಿರ್ಣಯದಲ್ಲಿ ಮುಂಚೂಣಿಯಲ್ಲಿರುವ ಸ್ವಿಟ್ಜರ್ಲೆಂಡ್​​ನ ಜುರಿಚ್ ಮೂಲದ ಮೈಕ್ರೋಬ್ ಇನ್ವೆಸ್ಟಿಗೇಷನ್ಸ್​​​ ಅನ್ನು ಸ್ವಾಧೀನಪಡಿಸಿಕೊಳ್ಳುವ ನಿರ್ಣಯ ಕೈಗೊಂಡಿದೆ.

ನಗರದ ಎಲೆಕ್ಟ್ರಾನಿಕ್​​ ಸಿಟಿಯ ಸ್ವಿಸ್ನೆಕ್ಸ್​ನಲ್ಲಿ ಬುಧವಾರ ಐಟಿ, ಜೈವಿಕ ತಂತ್ರಜ್ಞಾನ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ನೇತೃತ್ವದಲ್ಲಿ ನಡೆದ ಸಮಾರಂಭದಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಇಒ ಮತ್ತು ಸ್ವಿಸ್ನೆಕ್ಸ್‌ನ ಕಾನ್ಸುಲ್ ಜನರಲ್ ಜೊನಸ್ ಬ್ರುನ್ಸ್‌ವಿಗ್, ನಾಬಿಯೊ ಟೆಕ್ನಾಲಜೀಸ್‌ನ ಸಿಇಒ ಮಿಥುನ್ ಶಾ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಒಪ್ಪಂದದ ಅನುಕೂಲವೇನು?: ಕಾರ್ಯಕ್ರಮದಲ್ಲಿ ಒಪ್ಪಂದದ ಲೋಗೋ ಮತ್ತು ವೆಬ್‌ಸೈಟ್ ಸೇರಿದಂತೆ ಹೊಸ ಬ್ರ್ಯಾಂಡ್ ಲಾಂಛನವನ್ನು ಬಿಡುಗಡೆ ಮಾಡಲಾಯಿತು. ಈ ಒಪ್ಪಂದ ಜೈವಿಕ ತಂತ್ರಜ್ಞಾನದಲ್ಲಿ ಇಂಡೋ- ಸ್ವಿಸ್ ಪಾಲುದಾರಿಕೆಯನ್ನು ಬಲಪಡಿಸುವಲ್ಲಿ ಮಹತ್ವದ ಮೈಲುಗಲ್ಲಾಗಲಿದೆ. ಸೂಕ್ಷ್ಮಜೀವಿಗಳ ರೋಗನಿರ್ಣಯ, ಸಂಶೋಧನೆ ಮತ್ತು ಸುಸ್ಥಿರ ನಾವೀನ್ಯತೆಗಳಲ್ಲಿ ಭಾರತ ಮತ್ತು ಸ್ವಿಟ್ಜರ್ಲೆಂಡ್ ನಡುವೆ ಹೆಚ್ಚಿನ ಸಹಯೋಗವನ್ನು ಉತ್ತೇಜಿಸಲಿದೆ.

ಸ್ವಿಟ್ಜರ್ಲೆಂಡ್ ಮೈಕ್ರೋಬ್ ಇನ್ವೆಸ್ಟಿಗೇಷನ್ಸ್​​ ಸ್ವಾಧೀನಪಡಿಸಿಕೊಂಡ ಅನಾಬಿಯೋ ಟೆಕ್ನಾಲಜೀಸ್ (ETV Bharat)

ಅನಾಬಿಯೊ ಟೆಕ್ನಾಲಜೀಸ್‌ಗೆ ಕೀಟಶಾಸ್ತ್ರ, ಸೂಕ್ಷ್ಮಜೀವಿ ಸಂಶೋಧನೆ ಮತ್ತು ಪರಿಸರ ರಕ್ಷಣೆಯ ಕ್ಷೇತ್ರಗಳಲ್ಲಿ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಅನುವು ಮಾಡಿಕೊಡಲಿದೆ. ನವೀಕರಿಸಿದ ಬ್ರ್ಯಾಂಡ್‌ನೊಂದಿಗೆ ಜಾಗತಿಕವಾಗಿ ಹಲವು ಕಾರ್ಯಾಚರಣೆಗಳು ನಡೆಯಲಿವೆ. ಸೂಕ್ಷ್ಮಜೀವಿಯ ರೋಗನಿರ್ಣಯದಲ್ಲಿ ನಾವೀನ್ಯತೆ ಕೂಡ ಮುಂದುವರೆಯಲಿದೆ. ಭಾರತ ಮತ್ತು ಸ್ವಿಟ್ಜರ್ಲೆಂಡ್ ನಡುವಿನ ಸಹಯೋಗದ ಹೊಸ ಯುಗವನ್ನು ಸಂಕೇತಿಸಲಿದೆ. ಜಾಗತಿಕ ಜೈವಿಕ ತಂತ್ರಜ್ಞಾನದಲ್ಲಿ ಎರಡೂ ದೇಶಗಳ ಪ್ರಾಬಲ್ಯತೆಯನ್ನು ಹೆಚ್ಚಿಸಲಿದೆ ಎಂದು ಒಪ್ಪಂದದ ಅನುಕೂಲತೆಗಳನ್ನು ವಿಶ್ಲೇಷಿಸಲಾಗುತ್ತಿದೆ.

ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, "ಮಹತ್ವದ ನಿರ್ಣಯ ಕರ್ನಾಟಕದ ಜೈವಿಕ ತಂತ್ರಜ್ಞಾನದ ಅಭಿವೃದ್ಧಿಗೆ ಸಾಕ್ಷಿಯಾಗಲಿದೆ. ಎಲಿವೇಟೆಡ್ ಬೆಂಗಳೂರು ಬಯೋಇನೋವೇಶನ್ ಸೆಂಟರ್​​ನಂತಹ ವಿಶ್ವದರ್ಜೆಯ ಸಂಸ್ಥೆಗಳೊಂದಿಗೆ ಕೈಜೋಡಿಸಿ ನಾವೀನ್ಯತೆಗೆ ಅನುಕೂಲಕರ ವಾತಾವರಣವನ್ನು ಒದಗಿಸಲು ಕರ್ನಾಟಕ ಮುಂದಾಗಿದೆ" ಎಂದು ಹೇಳಿದರು.

"ಭಾರತದ ಬಯೋಟೆಕ್ ಪ್ರಗತಿಯನ್ನು ಜಾಗತಿಕ ಹಂತಕ್ಕೆ ಕೊಂಡೊಯ್ಯುತ್ತಿರುವ ಅನಾಬಿಯೊ ಟೆಕ್ನಾಲಜೀಸ್‌ನಂತಹ ಕಂಪನಿಗಳನ್ನು ಬೆಂಬಲಿಸಲು ನಾವು ಬದ್ಧ. ಬಯೋಟೆಕ್ ಸಂಶೋಧನೆಗಳನ್ನು ಮುಂದುವರೆಸುವಲ್ಲಿ ಮತ್ತು ಜಾಗತಿಕ ಸವಾಲುಗಳನ್ನು ಎದುರಿಸುವಲ್ಲಿ ಭಾರತ ಮತ್ತು ಸ್ವಿಟ್ಜರ್ಲೆಂಡ್ ನಡುವಿನ ಸಹಯೋಗ ನಿರ್ಣಾಯಕ ಪಾತ್ರ ವಹಿಸಲಿದೆ" ಎಂದರು.

ಇದನ್ನೂ ಓದಿ:ಜನವರಿಗೆ ಏಕಗವಾಕ್ಷಿ ವ್ಯವಸ್ಥೆ ಸಿದ್ಧ: ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಲೋಕಾರ್ಪಣೆ ಎಂದ ಸಚಿವ ಎಂ.ಬಿ.ಪಾಟೀಲ್

ABOUT THE AUTHOR

...view details