ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಲು ಬಂದಿದ್ದ ವೃದ್ಧರೊಬ್ಬರು, ತಾನು ತಂದಿರುವ ಬ್ಯಾಗ್ನಲ್ಲಿ ಬಾಂಬ್ ಇದೆ ಎಂದು ಪೊಲೀಸರಿಗೆ ಹೆದರಿಸಿರುವ ಪ್ರಸಂಗ ಶನಿವಾರ ಮಧ್ಯಾಹ್ನ ಕುಮಾರಕೃಪ ರಸ್ತೆಯಲ್ಲಿರುವ ಮುಖ್ಯಮಂತ್ರಿ ಅಧಿಕೃತ ನಿವಾಸ ಕಾವೇರಿ ಬಳಿ ನಡೆದಿದೆ.
ಸಿಎಂ ಭೇಟಿಯಾಗಲು ಬಂದಿದ್ದ ಹಾಸನದ ವೃದ್ಧ; ಬ್ಯಾಗ್ನಲ್ಲಿ ಬಾಂಬ್ ಇರೋದಾಗಿ ಪೊಲೀಸರನ್ನೇ ಬೆಚ್ಚಿಬೀಳಿಸಿದ! - OLD MAN THREATS POLICE - OLD MAN THREATS POLICE
ಹಾಸನ ಜಿಲ್ಲೆಯಿಂದ ಸಿಎಂ ಭೇಟಿಗೆ ಬಂದಿದ್ದ ವೃದ್ಧನೋರ್ವ ಪೊಲೀಸ್ ಸಿಬ್ಬಂದಿಯನ್ನು ಒಂದು ಕ್ಷಣ ಬೆಚ್ಚಿಬೀಳಿಸಿದ ಘಟನೆ ಬೆಂಗಳೂರಲ್ಲಿ ಶನಿವಾರ ನಡೆದಿದೆ.
Published : Aug 24, 2024, 10:32 PM IST
|Updated : Aug 24, 2024, 10:51 PM IST
ಹಾಸನದಿಂದ ಬಂದಿದ್ದ 65 ವರ್ಷದ ವೃದ್ಧರೊಬ್ಬರು, ಸಿಎಂ ಭೇಟಿಯಾಗಬೇಕೆಂದು ಪೊಲೀಸರ ಬಳಿ ಕೇಳಿಕೊಂಡಿದ್ದಾರೆ. ಆಗ ಪೊಲೀಸರು, ಸಿಎಂ ದೆಹಲಿಗೆ ತೆರಳಿದ್ದಾರೆ. ಮತ್ತೊಮ್ಮೆ ಬನ್ನಿ ಎಂದು ಹೇಳಿದ್ದಾರೆ. ಈ ವೇಳೆ ಪೊಲೀಸರು ಮತ್ತು ವೃದ್ಧನ ನಡುವೆ ಸಣ್ಣ ವಾಗ್ವಾದ ನಡೆದಿದೆ. ಆಗ ಪೊಲೀಸರು, ಬ್ಯಾಗ್ನಲ್ಲಿ ಏನಿದೆ? ಎಂದು ಪ್ರಶ್ನಿಸಿದ್ದಾರೆ. ಆಗ ವೃದ್ಧ ಕೋಪಗೊಂಡು, ಬಾಂಬ್ ಇದೆ ಎಂದಿದ್ದಾರೆ. ಅದರಿಂದ ಒಂದು ಕ್ಷಣ ಗಾಬರಿಗೊಂಡ ಪೊಲೀಸರು ವೃದ್ಧನ ಬ್ಯಾಗ್ ಪಡೆದು ಪರಿಶೀಲಿಸಿದ್ದು, ಯಾವುದೇ ಸ್ಫೋಟಕ ವಸ್ತು ಪತ್ತೆಯಾಗಿಲ್ಲ. ನಂತರ ಠಾಣೆಗೆ ಕರೆದೊಯ್ದು ಬುದ್ಧಿವಾದ ಹೇಳಿ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ಮುಂದುವರಿದ ಮಳೆ ಆರ್ಭಟ: 7 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ - karnataka rain alert