ಮಂಡ್ಯ: ಸಕ್ಕರೆನಾಡಲ್ಲಿ ಪ್ರವಾಸಿ ತಾಣಗಳಿಗೇನು ಕೊರತೆ ಇಲ್ಲ. ಕೆ.ಆರ್.ಎಸ್ನ ಬೃಂದಾವನ, ರಂಗನತಿಟ್ಟು ಪಕ್ಷಿಧಾಮ ವಿಶ್ವ ಪ್ರಸಿದ್ಧಿ ಸ್ಥಾನ ಪಡೆದಿದ್ದರೆ ಇವುಗಳ ಜೊತೆಗೆ ಇದೀಗ ಮತ್ತೊಂದು ತಾಣ ಜಿಲ್ಲೆಯಲ್ಲಿ ಪ್ರವಾಸಿಗರ ಹಾಟ್ಸ್ಪಾಟ್ ಆಗಿದ್ದು, ಪ್ರವಾಸಿಗರ ಕಣ್ಮನ ತಣಿಸುತ್ತಿದೆ. ಯಾವುದು ಆ ಪ್ರವಾಸಿ ತಾಣ? ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್.
ಶ್ರೀರಂಗಪಟ್ಟಣದ ಹೊರ ವಲಯದ ಮೈಸೂರು-ಬೆಂಗಳೂರು ದಶಪಥ ಹೆದ್ದಾರಿ ಪಕ್ಕದಲ್ಲಿರುವ ಪಯಣ ಹೆಸರಿನ ವಿಂಟೇಜ್ ಮ್ಯೂಸಿಯಂ ಎಲ್ಲರನ್ನೂ ಕೈ ಬೀಸಿ ಕರೆಯುತ್ತಿದೆ. ಹೌದು, ಈ ವಿಂಟೇಜ್ ಮ್ಯೂಸಿಯಂಗೆ ಇದೀಗ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಆಗಮಿಸಿ ಇಲ್ಲಿನ ಪಾರಂಪರಿಕ ಸೊಬಗನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಪಯಣ ಹೆಸರಿನ ಈ ಮ್ಯೂಸಿಯಂನ್ನು ಧರ್ಮಸ್ಥಳ ಸಂಸ್ಥೆಯ ಸಹಯೋಗದಲ್ಲಿ ನಿರ್ಮಿಸಲಾಗಿದೆ. ಸದ್ಯ ಮ್ಯೂಸಿಯಂನಲ್ಲಿ ವಿವಿಧ ದೇಶಗಳ ಹಳೇ ಕಾಲದ ವಿಂಟೇಜ್ ಕಾರುಗಳನ್ನು ಸಾಲಾಗಿ ನಿಲ್ಲಿಸಲಾಗಿದೆ.