ಕರ್ನಾಟಕ

karnataka

ETV Bharat / state

ಚಿಕ್ಕೋಡಿ: ಶಾಲೆ ಬಳಿಯೇ ವಿದ್ಯಾರ್ಥಿನಿಯ ಕಿಡ್ನಾಪ್​ ಯತ್ನ; ಅಪರಿಚಿತರ ಬಗ್ಗೆ ನಿಗಾವಹಿಸುವಂತೆ ಪೊಲೀಸರ ಸೂಚನೆ - chikkodi

ಶಾಲೆಯ ಬಳಿಯಿಂದಲೇ ಎರಡನೇ ತರಗತಿ ವಿದ್ಯಾರ್ಥಿನಿಯ ಅಪಹರಣಕ್ಕೆ ಯತ್ನಿಸಿರುವ ಘಟನೆ ನಡೆದಿದೆ.

an-unsuccessful-attempt-was-made-to-abduct-a-student-near-the-school-in-chikkodi
ಚಿಕ್ಕೋಡಿ: ಶಾಲೆ ಬಳಿಯೇ ವಿದ್ಯಾರ್ಥಿನಿ ಅಪಹರಣಕ್ಕೆ ವಿಫಲ ಯತ್ನ, ಅಪರಿಚಿತರ ಬಗ್ಗೆ ನಿಗಾವಹಿಸುವಂತೆ ಪೊಲೀಸರ ಸೂಚನೆ

By ETV Bharat Karnataka Team

Published : Feb 7, 2024, 4:35 PM IST

ಚಿಕ್ಕೋಡಿ(ಬೆಳಗಾವಿ): ಕಿಡಿಗೇಡಿಯೊಬ್ಬ ಶಾಲೆಯ ಬಳಿಯಿಂದಲೇ ವಿದ್ಯಾರ್ಥಿನಿಯನ್ನು ಅಪಹರಿಸಲು ಯತ್ನಿಸಿರುವ ಆಘಾತಕಾರಿ ಘಟನೆ ಚಿಕ್ಕೋಡಿಯಲ್ಲಿ ನಡೆದಿದೆ. ಪಟ್ಟಣದ ವಿದ್ಯಾನಗರ ಬಡಾವಣೆಯಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯ ಎರಡನೇ ತರಗತಿಯ ವಿದ್ಯಾರ್ಥಿನಿಯನ್ನು ಅಪಹರಿಸಲು ಕಿಡಿಗೇಡಿ ಪ್ರಯತ್ನಿಸಿದ್ದಾನೆ.

ನಿನ್ನೆ(ಮಂಗಳವಾರ) ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ದ ಅಪರಿಚಿತ ವ್ಯಕ್ತಿಯೊಬ್ಬ, ಶಾಲೆಯಿಂದ ವಿದ್ಯಾರ್ಥಿನಿ ಹೊರಗಡೆ ಬರುತ್ತಿದ್ದಂತೆ ಆಕೆಯ ಮುಖಕ್ಕೆ ಬಟ್ಟಿ ಕಟ್ಟಿ ಎರಡು ನೂರು ಮೀಟರ್ ಓಡಿದ್ದಾನೆ. ವಿದ್ಯಾರ್ಥಿನಿ ಹಾಗೂ ಇತರೆ ವಿದ್ಯಾರ್ಥಿಗಳ ಕೂಗಾಟದಿಂದ ಭಯಕೊಂಡ ವ್ಯಕ್ತಿ ವಿದ್ಯಾರ್ಥಿನಿಯನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಸ್ಥಳಕ್ಕೆ ಚಿಕ್ಕೋಡಿ ಪೊಲೀಸರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಭೇಟಿ ಪರಿಶೀಲನೆ ನಡೆಸಿದ್ದಾರೆ. ಶಾಲಾ ಆವರಣದಲ್ಲಿ ಹಾಗೂ ಸುತ್ತಮುತ್ತಲು ಇರುವ ಸಿಸಿಟಿವಿ ದೃಶ್ಯವನ್ನು ಪೊಲೀಸರು ಪರಿಶೀಲಿಸಿದ್ದಾರೆ. ಈ ಕುರಿತು ಚಿಕ್ಕೋಡಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೊಲೀಸ್​ ಪ್ರಕಟಣೆ

ಅಪರಿಚಿತ ವ್ಯಕ್ತಿಗಳು ಚಾಕಲೇಟ್, ಹಣ ಕೊಟ್ಟು ಪುಸಲಾಯಿಸಿ ಮಕ್ಕಳನ್ನು ಅಪಹರಿಸಬಹುದು. ಹೀಗಾಗಿ ಅಪರಿಚಿತರ ಮೇಲೆ ನಿಗಾವಹಿಸುವಂತೆ ಶಾಲೆಯ ಶಿಕ್ಷಕರಿಗೆ ಮತ್ತು ಪೋಷಕರಿಗೆ ಪೊಲೀಸರು ಸೂಚನೆ ನೀಡಿದ್ದಾರೆ. ಅಪರಿಚಿತ ವ್ಯಕ್ತಿಗಳು ಏನಾದರೂ ಕೊಟ್ಟರೆ ತೆಗೆದುಕೊಳ್ಳಬೇಡಿ ಎಂದು ಮಕ್ಕಳಿಗೆ ಪೋಷಕರು ತಿಳುವಳಿಕೆ ನೀಡುವಂತೆ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ:ಚಿಕ್ಕೋಡಿ ಅಂಕಲಿ ಗ್ರಾಮದಲ್ಲಿ ಅಗ್ನಿ ಅವಘಡ: ಐದು ಮನೆಗಳು ಒಂದು ಅಂಗಡಿ ಭಸ್ಮ

ABOUT THE AUTHOR

...view details