ಬೆಂಗಳೂರು:ಸಂಸದ ಪ್ರಜ್ವಲ್ ರೇವಣ್ಣ ಎಲ್ಲರನ್ನು ಬಿಟ್ಟು ಕೇವಲ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಬಗ್ಗೆ ಮಾತನಾಡಿದ್ದಾರೆ. ಅಂದ್ರೆ ಇದರ ನಿರ್ದೇಶಕರಾಗಿ ಅಮಿತ್ ಶಾ ಇದ್ದಿರಬಹುದೆಂದು ಸಚಿವ ಪ್ರಿಯಾಂಕ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಸದಾಶಿವನಗರ ಸರ್ಕಾರಿ ನಿವಾಸದಲ್ಲಿ ಮಾತನಾಡಿದ ಅವರು, ಮೊನ್ನೆ ಪ್ರಜ್ವಲ್ ವಿಡಿಯೋ ರಿಲೀಸ್ ಮಾಡಿದ್ದು ನೋಡಿ ಆಶ್ಚರ್ಯವಾಯ್ತು. ಆರೇಳು ಹಂತದ ಚುನಾವಣೆ ಮುಗಿದ ಮೇಲೆ ಹೊರ ಬಂದ್ರಾ? 30 ದಿನಗಳ ಹಿಂದೆ ನಿಮ್ಮ ಸ್ವಾಭಿಮಾನ ಮರ್ಯಾದೆ ನೆನಪಿರಲಿಲ್ವಾ? ಸಲೂನ್ಗೆ ಹೋಗಿ ಕ್ಲೀನ್ ಆಗಿ ಬಂದು ವಿಡಿಯೋ ಮಾಡಿದ್ದಾರೆ. ಅದರಲ್ಲಿ ಖಿನ್ನತೆ ಏನಾದ್ರೂ ಕಾಣ್ತಾ ಇದೆಯಾ? ಇವರಿಗೆ ಖಿನ್ನತೆ ಆದ್ರೆ ಸಂತ್ರಸ್ತೆಯರ ಪರಿಸ್ಥಿತಿ ಏನು? ಎಂದು ಪ್ರಶ್ನಿಸಿದರು.
ಅಮಿತ್ ಶಾ ಅಥವಾ ಬಿಜೆಪಿಯವರೇ ವಿಡಿಯೋ ಮಾಡಿ ಹೊರಗೆ ಬಾ ಅಂದಿರಬೇಕು. ಇವರಿಗೆ ಫಾರಿನ್ ಕಂಟ್ರಿಯಲ್ಲಿ ಉಳಿದುಕೊಳ್ಳುವಂಥದ್ದು ಏನಿದೆ? ಇದೆಲ್ಲವೂ ಕೂಡ ಬಿಜೆಪಿ ನಾಯಕರ ನಿರ್ದೇಶನದ ಮೇರೆಗೆ ನಡೆದಿದೆ. ಇವರು ಸ್ಪಂದಿಸೋದಕ್ಕೆ30 ದಿನ ಬೇಕಾ? ಪ್ರಜ್ವಲ್ ಅಷ್ಟು ಕ್ಲೀನ್ ಆಗಿದ್ರೆ ಮೊದಲ ದಿನವೇ ರಿಯಾಕ್ಟ್ ಮಾಡಬೇಕಿತ್ತು! ಕುಂಭಕರ್ಣ ನಿದ್ರೆಯಿಂದ ಎದ್ದಮೇಲೆ ರಾಹುಲ್ ಗಾಂಧಿ.. ರಾಹುಲ್ ಗಾಂಧಿ.. ಅಂದ್ರೆ ಹೇಗೆ ಎಂದು ಟೀಕಿಸಿದರು.
ಪ್ರಜ್ವಲ್ಗೆ ಹೀಗೆ ಮಾಡು ಅಂತಾ ರಾಹುಲ್ ಗಾಂಧಿ ಅವರು ಹೇಳಿಕೊಟ್ಟರಾ? ಇಡೀ ದೇಶದ ರಾಜಕಾರಣಿಗಳು ಪ್ರಜ್ವಲ್ ಬಗ್ಗೆ ಮಾತನಾಡಿದ್ರು. ಅವರೆಲ್ಲರನ್ನು ಬಿಟ್ಟು ಕೇವಲ ರಾಹುಲ್ ಗಾಂಧಿ ಬಗ್ಗೆ ಯಾಕೆ ಮಾತಾಡ್ತಿದ್ದೀರಿ? ಅಂದ್ರೆ ಇದರ ನಿರ್ದೇಶಕರು ಅಮಿತ್ ಶಾ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ:ನಿರೀಕ್ಷಣಾ ಜಾಮೀನು ಕೋರಿ ಪ್ರಜ್ವಲ್ ರೇವಣ್ಣ ಅರ್ಜಿ; ತುರ್ತು ವಿಚಾರಣೆ ಸಾಧ್ಯವಿಲ್ಲ ಎಂದ ಕೋರ್ಟ್ - Prajwal Seeks For Anticipatory Bail