ಬೆಂಗಳೂರು:ಬೇರೆ ಯುವತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದನ್ನು ಪ್ರಶ್ನಿಸಿದ ಪತ್ನಿಗೆ ಚಾಕುವಿನಿಂದ ಇರಿದು ಗಾಯಗೊಳಿಸಿದ ಆರೋಪ ಕನ್ನಡ ಕಿರುತೆರೆ ನಟನ ವಿರುದ್ಧ ಕೇಳಿಬಂದಿದೆ.
ಪತ್ನಿಯ ಆರೋಪ: ಸನ್ನಿ ಮಹಿಪಾಲ್ ಹಾಗು ನಾನು ಫೆಬ್ರವರಿಯಿಂದ ಪರಿಚಿತರು. ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಸನ್ನಿ ಮಹಿಪಾಲ್, ಧಾರಾವಾಹಿಯೊಂದರಲ್ಲಿ ನಟಿಸುತ್ತಿದ್ದರು. ಜನವರಿಯಲ್ಲಿ ಫೇಸ್‌ಬುಕ್ ಮೂಲಕ ನನಗೆ ಪರಿಚಯವಾದರು. ನಂತರ ಪ್ರೀತಿಸುತ್ತಿರುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದರು. ಗರ್ಭಿಣಿಯಾಗಿದ್ದ ನಾನು ಮದುವೆಯಾಗುವಂತೆ ಒತ್ತಾಯಿಸಿದೆ. ಜೂನ್ 15ರಂದು ದೇವಸ್ಥಾನವೊಂದರಲ್ಲಿ ನಮ್ಮಿಬ್ಬರ ವಿವಾಹ ನಡೆಯಿತು.
ಮದುವೆಯಾದ ಬಳಿಕ ಒಂದು ವಾರವೂ ಜೊತೆಗಿರದ ಪತಿ ತನ್ನ 'ಪೋಷಕರನ್ನು ಒಪ್ಪಿಸಿ ಬರುತ್ತೇನೆ, ಅಲ್ಲಿಯವರೆಗೂ ಇಬ್ಬರೂ ಸ್ನೇಹಿತರಂತೆಯೇ ಇರಬೇಕು, ಸ್ನೇಹಿತರಂತೆಯೇ ಮೆಸೇಜ್ ಮಾಡಬೇಕು' ಎಂದು ಷರತ್ತು ಹಾಕಿದ್ದರು. ನಂತರ ಅವರು ಮಂಗಳೂರಿಗೆ ತೆರಳಿದ್ದು, ಕೆಲ ದಿನಗಳ ಹಿಂದೆ ಪೋಷಕರ ಸಮ್ಮುಖದಲ್ಲಿ ಬೇರೆ ಯುವತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.