ಕರ್ನಾಟಕ

karnataka

ETV Bharat / state

ಅಂಬೇಡ್ಕರ್ ಕುರಿತ ಹೇಳಿಕೆ ಹಿಂಪಡೆದು ಕ್ಷಮೆಯಾಚಿಸಿದ ಅಜ್ಜಂಪೀರ್ ಖಾದ್ರಿ - AJJAMPIR KHADRI

ಬಾಬಾಸಾಹೇಬ ಅಂಬೇಡ್ಕರ್ ಕುರಿತ ಹೇಳಿಕೆ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ಅವರು ಕ್ಷಮೆಯಾಚಿಸಿ, ಹೇಳಿಕೆ ಹಿಂಪಡೆದಿದ್ದಾರೆ.

ಅಜ್ಜಂಪೀರ್ ಖಾದ್ರಿ
ಅಜ್ಜಂಪೀರ್ ಖಾದ್ರಿ (ETV Bharat)

By ETV Bharat Karnataka Team

Published : Nov 12, 2024, 3:36 PM IST

ಹಾವೇರಿ:ಬಾಬಾಸಾಹೇಬ ಅಂಬೇಡ್ಕರ್ ಅವರು ಬೌದ್ಧ ಧರ್ಮ ಸ್ವೀಕರಿಸುವ ಮುನ್ನ ಮುಸ್ಲಿಂ ಧರ್ಮ ಸ್ವೀಕರಿಸಲು ಸಿದ್ಧತೆ ನಡೆಸಿದ್ದರು ಎಂಬ ಹೇಳಿಕೆ ಚರ್ಚೆಗೆ ಗ್ರಾಸವಾಗುತ್ತಿದಂತೆ ಕಾಂಗ್ರೆಸ್ ಮುಖಂಡ ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ಅವರು ತಮ್ಮ ಹೇಳಿಕೆ ವಾಪಸ್ ಪಡೆದು, ಕ್ಷಮೆ ಕೋರಿದ್ದಾರೆ. ಶಿಗ್ಗಾಂವ್ ಉಪಚುನಾವಣೆ ಹಿನ್ನೆಯಲ್ಲಿ ಆದಿಜಾಂಬವ ಜಾಗೃತಿ ಸಮಾವೇಶದಲ್ಲಿ ಸೋಮವಾರ ಅಜ್ಜಂಪೀರ್ ಖಾದ್ರಿ ನೀಡಿದ್ದ ಹೇಳಿಕೆ ಚರ್ಚೆ ಹುಟ್ಟುಹಾಕಿತ್ತು.

ಹಾವೇರಿ ಜಿಲ್ಲೆ ಶಿಗ್ಗಾಂವಿಯಲ್ಲಿ ಮಾತನಾಡಿದ ಅವರು ಅಂಬೇಡ್ಕರ್ ಬಗ್ಗೆ ಮಾತನಾಡುವಷ್ಟು ದೊಡ್ಡ ವ್ಯಕ್ತಿ ನಾನಲ್ಲ. ಅವರ ಬಗ್ಗೆ ಮತ್ತು ಸಂವಿಧಾನದ ಬಗ್ಗೆ ನಮಗೆ ಅಪಾರ ಗೌರವ ಇದೆ. ಈಗ ಚುನಾವಣೆಗೆಯಿಂದ ನನ್ನ ಹೇಳಿಕೆ ಚರ್ಚೆ ಆಗುತ್ತಿದೆ. ಯಾರ ಭಾವನೆಗಳಿಗೂ ಧಕ್ಕೆ ತರುವ ಉದ್ದೇಶ ಇಲ್ಲ. ತಮ್ಮ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ವಿಷಾದಿಸುತ್ತೇನೆ ಮತ್ತು ಕ್ಷಮೆಯಾಚಿಸುತ್ತೇನೆ ಎಂದು ತಿಳಿಸಿದ್ದಾರೆ.

ಅಜ್ಜಂಪೀರ್ ಖಾದ್ರಿ (ETV Bharat)

ಅಜ್ಜಂಪೀರ್ ಖಾದ್ರಿ ಹೇಳಿದ್ದೇನು?ಶಿಗ್ಗಾಂವಿಯ ಹನುಮಂತ ಪಾಟೀಲ ಕಲ್ಯಾಣ ಮಂಟಪದಲ್ಲಿ ನಡೆದಿದ್ದ ಆದಿಜಾಂಬವ ಜಾಗೃತಿ ಸಮಾವೇಶದಲ್ಲಿ ಸೋಮವಾರ ಅಜ್ಜಂಪೀರ್ ಖಾದ್ರಿ ಮಾತನಾಡುವ ವೇಳೆ, ಅಂಬೇಡ್ಕರ್ ಮತ್ತು ದಲಿತರ ಬಗ್ಗೆ ಪ್ರಸ್ತಾಪಿಸಿದ್ದರು. 'ಬಾಬಾಸಾಹೇಬ ಅಂಬೇಡ್ಕರ್ ಅವರು ಮುಸ್ಲಿಂ ಧರ್ಮ ಸ್ವೀಕರಿಸಲು ಸಿದ್ಧತೆ ನಡೆಸಿದ್ದರು. ಆದರೆ ಕೊನೆಕ್ಷಣದಲ್ಲಿ ಬೌದ್ಧ ಧರ್ಮ ಸ್ವೀಕರಿಸಿದರು ಎಂದು ನಾನು ಓದಿ ತಿಳಿದುಕೊಂಡಿದ್ದೇನೆ ಎಂದು ಹೇಳಿದ್ದರು.

'ದಲಿತರು ಮತ್ತು ಮುಸ್ಲಿಂ ಸಮುದಾಯದವರ ಮಧ್ಯೆ ಆಳವಾದ ಬಾಂಧ್ಯವಿದೆ. ಈಗಲೂ ಕೂಡ ದಲಿತ ಕೇರಿ ಪಕ್ಕದಲ್ಲಿಯೇ ಮುಸ್ಲಿಂ ದರ್ಗಾ, ಆಜಾದ್ ಮುಲ್ಲಾ ಇವೆ. ಅಂದರೆ ನಮ್ಮ ಅವರ ಬಾಂಧವ್ಯ ಮೊದಲಿನಿಂದಲೂ ಇದೆ. ನಮ್ಮ ಮನೆಗೆ ದಲಿತ ಸಮುದಾಯದವರು ಕೆಲಸಕ್ಕೆ ಬರುತ್ತಾರೆ. ಅವರಿಗೆ ಯಾವುದೇ ಭೇದಭಾವ ಮಾಡಲ್ಲ' ಎಂದು ತಿಳಿಸಿದ್ದರು.

ಶಿಗ್ಗಾಂವಿ ಉಪಚುನಾವಣೆಗೆ ನಾಳೆ ಮತದಾನ ನಡೆಯಲಿದ್ದು, ಈ ಮಧ್ಯೆ ಅಜ್ಜಂಪೀರ್ ಖಾದ್ರಿ ಹೇಳಿಕೆ ಚರ್ಚೆಗೆ ಗ್ರಾಸವಾಗಿತ್ತು. ಈ ಬೆನ್ನಲ್ಲೇ ಅವರು ತಮ್ಮ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೋರುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ:ದೇವಸ್ಥಾನ ಉದ್ಘಾಟನೆ ಕಾರ್ಯಕ್ರಮದಲ್ಲಿ ವಕ್ಫ್ ವಿಚಾರ ಪ್ರಸ್ತಾಪ: ಶಾಸಕ ಯತ್ನಾಳ್​ಗೆ ಸಾರ್ವಜನಿಕರ ವಿರೋಧ

ABOUT THE AUTHOR

...view details