ಕೃಷಿ ಸಚಿವ ಚಲುವರಾಯಸ್ವಾಮಿ (ETV Bharat) ಮಂಡ್ಯ :ಯಾವುದೇ ಜಿಲ್ಲೆಯಲ್ಲಿ ಕೃಷಿ ಸಂಬಂಧ ಯಾವುದೇ ಕೊರತೆ ಇಲ್ಲ. ಬಿತ್ತನೆ ಬೀಜ, ರಸಗೊಬ್ಬರ ಸಾಕಷ್ಟು ಪ್ರಮಾಣದಲ್ಲಿದೆ. ರೈತರು ಆತಂಕ ಪಡಬೇಡಿ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಅವರು ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಮೂರು ತಿಂಗಳು ಬಿತ್ತನೆ ಬೀಜ ಸಪ್ಲೆ ಕೊಡುವ ಕೆಲಸವನ್ನ ಸರ್ಕಾರ ಮಾಡುತ್ತೆ. ರೈತರಿಗೆ ಬೇಕಾಗುವ ಸಾಮಗ್ರಿಗಳನ್ನ ಸಮರ್ಪಕವಾಗಿ ಕೊಡ್ತೇವೆ ಎಂದರು. ಬರ ಪರಿಹಾರದಲ್ಲಿ ವಿಳಂಬದ ಕುರಿತು ರೈತರ ಆಕ್ರೋಶದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬರ ಪರಿಹಾರ ಸಮರ್ಪಕವಾಗಿ ರೈತರಿಗೆ ಕೊಟ್ಟಿದ್ದೇವೆ. ಕೇಂದ್ರ ಸರ್ಕಾರ ಕೊಟ್ಟಿಲ್ಲ. ಸುಪ್ರೀಂ ಕೋರ್ಟ್ನಲ್ಲಿ ಫೈಟ್ ಮಾಡಿ 3,454 ಕೋಟಿ ತಂದು 25 ಲಕ್ಷ ರೈತರಿಗೆ ವಿತರಣೆ ಮಾಡಲಾಗಿದೆ. ಇನ್ನು ಐದಾರು ಲಕ್ಷ ರೈತರಿಗೆ ಪರಿಶೀಲನೆ ಮಾಡಿ ಮುಂದೆ ಕೊಡ್ತೇವೆ ಎಂದು ತಿಳಿಸಿದರು.
ವಿಧಾನ ಪರಿಷತ್ ಚುನಾವಣೆ ತಯಾರಿ ನಡೆಯುತ್ತಿದೆ. ಹೆಚ್ಚಿನ ಪ್ರಮಾಣದಲ್ಲಿ ಸಭೆ ನಡೆಸಿ ಮಾತನಾಡಲಾಗಿದೆ. ವಿಧಾನ ಪರಿಷತ್ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಮರಿತಿಬ್ಬೇಗೌಡರು ಕಳೆದ ನಾಲ್ಕು ಬಾರಿ ಗೆದ್ದಿರುವುದರಿಂದ ಈ ಬಾರಿಯೂ ಶಿಕ್ಷಕರು ಅವರ ಪರವಾಗಿದ್ದಾರೆ. ನಮ್ಮ ಕೆಲಸ ನಾವು ಮಾಡ್ತಿದ್ದೇವೆ ಎಂದು ಹೇಳಿದರು. ರಾಜ್ಯದ 31 ಜಿಲ್ಲೆಯ ಅಧಿಕಾರಿಗಳ ಜೊತೆ ನೇರವಾಗಿ ವಿಡಿಯೋ ಕಾನ್ಫರೆನ್ಸ್ ಮೂಲಕ ಸಿಎಂ, ಡಿಸಿಎಂ ಹಾಗೂ ನಾನು ಹಾಗೂ ಸಿಇಒ ಸಭೆ ಮಾಡಿದ್ದೇವೆ ಎಂದು ತಿಳಿಸಿದರು.
ಕೃಷಿ ಸಚಿವ ಚಲುವರಾಯಸ್ವಾಮಿ (ETV Bharat) ಪ್ರಜ್ವಲ್ನ ಸೇವ್ ಮಾಡ್ತಿದ್ದಾರೆ : ಒಂದಲ್ಲ ಒಂದು ರೀತಿ ಜೆಡಿಎಸ್ ಹಾಗೂ ಬಿಜೆಪಿ ಪ್ರಜ್ವಲ್ನ ಸೇವ್ ಮಾಡ್ತಿದ್ದಾರೆ ಎಂದು ಸಚಿವ ಎನ್. ಚಲುವರಾಯಸ್ವಾಮಿ ಕಿಡಿಕಾರಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರು ಪ್ರಜ್ವಲ್ಗೆ ಎಚ್ಚರಿಕೆ ಪತ್ರದ ವಿಚಾರವಾಗಿ ಮಂಡ್ಯದಲ್ಲಿ ಮಾತನಾಡಿದ ಅವರು, ನಾನು ಅದರ ಬಗ್ಗೆ ಮಾತನಾಡಬಾರದು ಅನ್ನೋ ತೀರ್ಮಾನ ತೆಗೆದುಕೊಂಡಿದ್ದೇನೆ. ಅದನ್ನ ಬೆಂಬಲಿಸುವವರು ಹೆಚ್ಚಾಗಿದ್ದಾರೆ. ಅದರ ಬಗ್ಗೆ ಮಾತನಾಡುವುದು ಸೂಕ್ತ ಅಲ್ಲ ಎಂದರು.
ಇದು ಸರಿ ಅಂತನೋ ಏನೋ, ಡಿಫೆಂಡ್ ಮಾಡ್ಕೊಳ್ಳೋಕೆ ಜನತಾದಳದವರು ಮುಂದಾಗಿದ್ದಾರೆ. ಅವರು ಪ್ರಜ್ವಲ್ನ ಕರೆಸುತ್ತಾರೋ ಬಿಡ್ತಾರೋ ಅವರಿಗೆ ಬಿಟ್ಟ ವಿಚಾರ. ಕುಮಾರಸ್ವಾಮಿ ಇವಾಗಲು ಬಹಳಷ್ಟು ಡಿಫೆಂಡ್ ಮಾಡ್ಕೊಳ್ತಿದ್ದಾರೆ. ಕುಮಾರಸ್ವಾಮಿ ಹಾಗೂ ಅವರ ಕುಟುಂಬಕ್ಕೆ ದೇವರು ಒಳ್ಳೆಯದನ್ನ ಮಾಡಲಿ. ಇದು ದೊಡ್ಡ ಅಪರಾಧ ಅಲ್ಲ ಅನ್ನೋ ತರ ಮಾತನಾಡ್ತಿದ್ದಾರೆ ಎಂದು ಹೇಳಿದರು.
ಕುಮಾರಸ್ವಾಮಿ ಅವರು ರೈತರ ಪರ ಬಂದ್ರೆ ಮಾತನಾಡ್ತೇನೆ. ಇಂತಹ ವಿಚಾರವಾಗಿ ನಾನು ಕುಮಾರಸ್ವಾಮಿಗೆ ಕೌಂಟ್ರು ಮಾಡಲ್ಲ. ನಾವು ಕುದುರೆ ಮೇಯಿಸುತ್ತಿದ್ದೇವೆ. ರೈತರ ವಿಚಾರಕ್ಕೆ ಏನು ಬೇಕಾದರೂ ಮಾಡ್ತೇವೆ. ಬಾಯಿಗೆ ಹಿಡಿತ ಇಲ್ಲದೇ ಬಿಜೆಪಿಯವರು ಮಾತನಾಡುತ್ತಾರೆ. ಇಷ್ಟೊತ್ತಿಗೆ ಪ್ರಜ್ವಲ್ ಪಾಸ್ಪೋರ್ಟ್ ರದ್ದು ಮಾಡಬೇಕಿತ್ತು. ಬೆಕ್ಕು ಕಣ್ಣುಮುಚ್ಚಿ ಹಾಲು ಕುಡಿದರೆ ಯಾರಿಗೂ ಗೊತ್ತಾಗಲ್ಲ ಅನ್ಕೊಂಡಿದ್ದಾರೆ. ಒಂದಲ್ಲ ಒಂದು ರೀತಿ ಸಂಪೂರ್ಣವಾಗಿ ಜೆಡಿಎಸ್ - ಬಿಜೆಪಿ ನಿಂತು ಪ್ರಜ್ವಲ್ ಸೇವ್ ಮಾಡ್ತಿದ್ದಾರೆ. ನೊಂದಿರುವ ಮಹಿಳೆಯರಿಗೆ ನ್ಯಾಯ ಸಿಗಬೇಕು. ಇದಕ್ಕೆಲ್ಲ ಜನರೇ ತೀರ್ಮಾನ ಮಾಡ್ತಾರೆ ಎಂದರು.
ಇದನ್ನೂ ಓದಿ :ದೇವರಾಜೇಗೌಡರಿಗೂ ನನಗೂ ಸಂಬಂಧ ಇಲ್ಲ, ಸಾಮಾನ್ಯರೂ ಇಂತಹ ಕೆಲಸ ಮಾಡಲ್ಲ: ಸಚಿವ ಚಲುವರಾಯಸ್ವಾಮಿ - Minister Chaluvarayaswamy