ಕರ್ನಾಟಕ

karnataka

ETV Bharat / state

ಅಯೋಧ್ಯೆಯಲ್ಲಿ ಮಂಡಲೋತ್ಸವ ಮುಗಿಸಿ ಕೃಷ್ಣನೂರಿಗೆ ಮರಳಿದ ಪೇಜಾವರ ಶ್ರೀ - Pejavara shree has returned

ಅಯೋಧ್ಯೆಯಲ್ಲಿ ಶ್ರೀರಾಮನ ಮಂಡಲೋತ್ಸವ ನೆರವೇರಿಸಿ ವಾಪಸಾಗಿರುವ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯನ್ನು ಮಂಗಳೂರಿನಲ್ಲಿ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು.

Mangalore International Airport
ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೇಜಾವರ ಶ್ರೀಗಳು

By ETV Bharat Karnataka Team

Published : Mar 17, 2024, 1:02 PM IST

ಅಯೋಧ್ಯೆಯಲ್ಲಿ ಮಂಡಲೋತ್ಸವ ಮುಗಿಸಿ ಪೇಜಾವರ ಶ್ರೀಗಳು ಮರಳಿ ಕೃಷ್ಣನೂರಿಗೆ

ಮಂಗಳೂರು:ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಹಾಗೂ 48 ದಿನಗಳ ಮಂಡಲೋತ್ಸವವನ್ನು ವೈಭವದಿಂದ ನೆರವೇರಿಸಿ ಮರಳಿ ಕೃಷ್ಣನೂರಿಗೆ ಆಗಮಿಸಿರುವ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆತ್ಮೀಯ ಸ್ವಾಗತ ದೊರೆಯಿತು.

ನಿಲ್ದಾಣಕ್ಕೆ ಆಗಮಿಸಿದ ಶ್ರೀಗಳನ್ನು ವಿಶ್ವ ಹಿಂದೂ ಪರಿಷತ್​ ರಾಜ್ಯಾಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್​, ಶಾಸಕರಾದ ವೇದವ್ಯಾಸ ಕಾಮತ್, ಯಶ್ಪಾಲ್​ ಸುವರ್ಣ ಸೇರಿದಂತೆ ಅನೇಕ ಗಣ್ಯರು, ನಾಗರಿಕರು ಸ್ವಾಗತಿಸಿದರು. ಶ್ರೀಗಳು ಪಾದಯಾತ್ರೆಯಲ್ಲಿ ಬಜ್ಪೆ ಮೂಲಕ ಹೊರಟು ಉಡುಪಿ ತಲುಪಲಿದ್ದಾರೆ.

ಮುಲ್ಕಿ ಬಸ್​ ಸ್ಟಾಂಡ್ ಬಳಿ, ಹೆಜಮಾಡಿ ಟೋಲ್ ಗೇಟ್, ಕಾಪು ಹೊಸಮಾರಿಗುಡಿ ಬಳಿ, ಕಟಪಾಡಿ ಜಂಕ್ಷನ್, ಉಡುಪಿ ಜೋಡುಕಟ್ಟೆಗಳಲ್ಲಿ ಗಣ್ಯರು ಸಂಘ-ಸಂಸ್ಥೆಗಳ ಪ್ರಮುಖರು ಶ್ರೀಗಳನ್ನು ಸ್ವಾಗತಿಸಲಿದ್ದಾರೆ.

ಇದನ್ನೂ ಓದಿ:ಹಾವೇರಿ: ಸಿಂದಗಿಮಠದಲ್ಲಿ ವಟುಗಳಿಂದ ಭಕ್ತರಿಗೆ ಊರೂಟ

ABOUT THE AUTHOR

...view details