ಕರ್ನಾಟಕ

karnataka

ಉಗ್ರರ ಜೊತೆ ನಂಟು ಹೊಂದಿದ್ದ ಅಫ್ಸರ್ ಪಾಷಾ ಮತ್ತೆ ಹಿಂಡಲಗಾ ಜೈಲಿಗೆ ಶಿಫ್ಟ್ - Afsar Pasha Shifted Hindalga Jail

By ETV Bharat Karnataka Team

Published : Aug 27, 2024, 10:55 AM IST

ಉಗ್ರರ ಜೊತೆ ನಂಟು ಹೊಂದಿದ್ದ ಹಾಗೂ ಕೇಂದ್ರ ‌ಸಚಿವ ನಿತಿನ್ ಗಡ್ಕರಿ ಅವರಿಗೆ ಜೀವ ಬೆದರಿಕೆ ಕರೆ ಮಾಡಿ 100 ಕೋಟಿ ರೂ. ಬೇಡಿಕೆಯಿಟ್ಟಿದ್ದ ಅಫ್ಸರ್ ಪಾಷಾನನ್ನು ಮತ್ತೆ ಹಿಂಡಲಗಾ ಜೈಲಿಗೆ ಶಿಫ್ಟ್ ಮಾಡಲಾಗಿದೆ.

AFSAR PASHA SHIFTED HINDALGA JAIL
ಅಫ್ಸರ್ ಪಾಷಾ (ETV Bharat)

ಬೆಳಗಾವಿ: ಉಗ್ರ ಸಂಘಟನೆ ಜೊತೆಗೆ ನಂಟು ಹೊಂದಿದ್ದ ಉಗ್ರ ಅಫ್ಸರ್ ಪಾಷಾ ಎಂಬಾತನನ್ನು ಮಹಾರಾಷ್ಟ್ರದ ನಾಗ್ಪುರ ‌ಜೈಲಿನಿಂದ ಬೆಳಗಾವಿಯ ಹಿಂಡಲಗಾ ‌ಕೇಂದ್ರ ಕಾರಾಗೃಹಕ್ಕೆ ಸೋಮವಾರ ರಾತ್ರಿ ‌ಶಿಫ್ಟ್ ಮಾಡಲಾಗಿದೆ.

ಕೇಂದ್ರ ‌ಸಚಿವ ನಿತಿನ್ ಗಡ್ಕರಿ ಅವರಿಗೆ ಜೀವ ಬೆದರಿಕೆ ಕರೆ ಮಾಡಿ 100 ಕೋಟಿ ರೂ. ಬೇಡಿಕೆಯಿಟ್ಟಿದ್ದ ಆಸಾಮಿ ಈತ. 2023ರ ಜನವರಿ 14 ರಂದು ಬೆಳಗಾವಿಯ ಹಿಂಡಲಗಾ ಜೈಲಿನಿಂದ ನಾಗ್ಪುರದಲ್ಲಿರುವ ಸಚಿವ ಗಡ್ಕರಿ ಕಚೇರಿಗೆ ಫೋನ್ ಮಾಡಿ ಇಬ್ಬರು ಕೈದಿಗಳು ಹಣಕ್ಕೆ ಬೇಡಿಕೆ ಇಟ್ಟಿದ್ದರು. ಇಬ್ಬರನ್ನೂ ವಶಕ್ಕೆ ಪಡೆದುಕೊಂಡು ಮಹಾರಾಷ್ಟ್ರದ ನಾಗ್ಪುರ ‌ಠಾಣೆ ಪೊಲೀಸರು ಕರೆದೊಯ್ದಿದ್ದರು. ಇಷ್ಟು ದಿನ ನಾಗ್ಪುರ ಕೇಂದ್ರ ‌ಕಾರಾಗೃಹದಲ್ಲಿದ್ದ ಅಫ್ಸರ್ ಪಾಷಾನನ್ನು ಮತ್ತೆ ಈಗ ಬೆಳಗಾವಿಗೆ ಶಿಫ್ಟ್ ಮಾಡಲಾಗಿದೆ.

ನಿನ್ನೆ ರಾತ್ರಿ‌ ನಾಗ್ಪುರದಿಂದ ಅಫ್ಸರ್ ಪಾಷಾನನ್ನು ವಿಮಾನದ ಮೂಲಕ ಬೆಳಗಾವಿಯ ಸಾಂಬ್ರಾ ವಿಮಾನ ‌ನಿಲ್ದಾಣಕ್ಕೆ ಕರೆ ತಂದ ‌ಪೊಲೀಸರು, ಬಿಗಿ ಪೊಲೀಸ್ ಭದ್ರತೆಯಲ್ಲಿ ರಸ್ತೆ ಮಾರ್ಗವಾಗಿ ಹಿಂಡಲಗಾ ಜೈಲಿಗೆ ರವಾನಿಸಿದ್ದಾರೆ.

2005 ಡಿಸೆಂಬರ್ ‌15ರಂದು ಬೆಂಗಳೂರಿನ‌ ಇಂಡಿಯನ್ ಇನ್ಸ್​ಟಿಟ್ಯೂಟ್​ ಆಫ್ ಸೈನ್ಸ್ ಸ್ಫೋಟ ಪ್ರಕರಣದಲ್ಲಿ ಅಫ್ಸರ್ ಪಾಷಾ ಭಾಗಿಯಾಗಿದ್ದ ಹಿನ್ನೆಲೆಯಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದಾನೆ. ಅಲ್ಲದೇ ಪಿಎಫ್ಐ ಸಂಘಟನೆ ಜೊತೆಗೆ ನಂಟಿರುವ ಜಯೇಶ ಪೂಜಾರಿ ಜೊತೆಗೆ ಸೇರಿಕೊಂಡು ನಿತಿನ್ ಗಡ್ಕರಿ ಅವರಿಗೆ ಜೀವ ಬೆದರಿಕೆ ಕರೆ ಮಾಡಿದ್ದ. ಅಫ್ಸರ್ ಪಾಷಾ ಮತ್ತು ಜಯೇಶ್ ಪೂಜಾರಿ ಇಬ್ಬರೂ ಹಿಂಡಲಗಾ ಜೈಲಿನಲ್ಲಿದ್ದುಕೊಂಡೆ ಈ ಖತರ್ನಾಕ್ ಪ್ಲಾನ್ ಮಾಡಿದ್ದರು.

ಇದನ್ನೂ ಓದಿ:ಬೆಳಗಾವಿ ಹಿಂಡಲಗಾ ಜೈಲಿನ ಮೇಲೆ 260ಕ್ಕೂ ಅಧಿಕ ಪೊಲೀಸರಿಂದ ದಿಢೀರ್ ದಾಳಿ - Raid on Belagavi Jail

ABOUT THE AUTHOR

...view details