ಕರ್ನಾಟಕ

karnataka

ETV Bharat / state

ಬೆಂಗಳೂರಲ್ಲಿ ಕಿಡಿಗೇಡಿಗಳಿಂದ ಹಲ್ಲೆ ಯತ್ನ: ನಟರಾದ ಹರ್ಷಿಕಾ‌ ಪೂಣಚ್ಚ ದಂಪತಿಯಿಂದ ದೂರು - actress harshika - ACTRESS HARSHIKA

ಭಾಷೆ ವಿಚಾರವಾಗಿ ನಿಂದಿಸಿ ಹಲ್ಲೆ ಯತ್ನ ಆರೋಪ ಸಂಬಂಧ ನಟಿ ಹರ್ಷಿಕಾ ಪೂಣಚ್ಚ ಹಾಗೂ ಅವರ ಪತಿ ಭುವನ್ ಪೊಲೀಸ್​ ಕಮಿಷನರ್​ಗೆ ದೂರು ನೀಡಿದ್ದಾರೆ.

actress-harshika-and-bhuvan-files-complaint-over-assaulting-by-miscreants
ಕಿಡಿಗೇಡಿಗಳಿಂದ ಹಲ್ಲೆ ಯತ್ನ: ಹರ್ಷಿಕಾ‌ ಪೂಣಚ್ಚ ದಂಪತಿಯಿಂದ ದೂರು

By ETV Bharat Karnataka Team

Published : Apr 20, 2024, 4:26 PM IST

Updated : Apr 20, 2024, 7:12 PM IST

ನಟರಾದ ಹರ್ಷಿಕಾ‌ ಪೂಣಚ್ಚ ದಂಪತಿಯಿಂದ ದೂರು

ಬೆಂಗಳೂರು: ಭಾಷೆ ವಿಚಾರವಾಗಿ ನಿಂದಿಸಿ ಹಲ್ಲೆ ಯತ್ನ ಆರೋಪ ಸಂಬಂಧ ನಟಿ ಹರ್ಷಿಕಾ ಪೂಣಚ್ಚ ಹಾಗೂ ಅವರ ಪತಿ ಭುವನ್ ಕಿಡಿಗೇಡಿಗಳ ವಿರುದ್ಧ ಇಂದು ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ರಮಣ್ ಗುಪ್ತಾ ಅವರಿಗೆ ದೂರು ನೀಡಿದ್ದಾರೆ.

ದೂರು ನೀಡಿದ ಬಳಿಕ ಮಾತನಾಡಿದ ನಟ ಭುವನ್, "ಪೊಲೀಸ್ ಕಮಿಷನರ್​ ಇಲ್ಲದ ಕಾರಣ ಪೂರ್ವ ವಿಭಾಗದ ಹೆಚ್ಚುವರಿ ಆಯುಕ್ತರನ್ನ ಭೇಟಿಯಾಗಿದ್ದೇವೆ. ಎಫ್ಐಆರ್ ಮಾಡಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ. ಘಟನೆ ನಡೆದಾಗ ದೂರು ಕೊಡುವುದರಿಂದ ಬೇರೆ ರೂಪ ಪಡೆದುಕೊಳ್ಳಲಿದೆ ಎಂಬ ಕಾರಣಕ್ಕಾಗಿ ದೂರು ಕೊಟ್ಟಿರಲಿಲ್ಲ. ಈ ಬಗ್ಗೆ ಸಂಬಂಧಿಕರು‌ ಹಾಗೂ ಹಿತೈಷಿಗಳು ನೀಡಿದ ಸಲಹೆ ಹಿನ್ನೆಲೆಯಲ್ಲಿ ನಿನ್ನೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿ ಇಂದು ಪೊಲೀಸರಿಗೆ ದೂರು ಕೊಡಲಾಗಿದೆ" ಎಂದರು.

"ಪುಲಕೇಶಿನಗರದಲ್ಲಿ‌ರುವ ರೆಸ್ಟೋರೆಂಟ್​ಗೆ ಹೋಗಿ ಊಟ ಮುಗಿಸಿಕೊಂಡು ಪಾರ್ಕಿಂಗ್​ನಲ್ಲಿ ಕಾರು ರಿವರ್ಸ್ ತೆಗೆದುಕೊಳ್ಳುವಾಗ ವ್ಯಕ್ತಿಯೋರ್ವ ಅನಾವಶ್ಯಕವಾಗಿ ಮಾತನಾಡಿ ಜಗಳ ತೆಗೆದಿದ್ದ. ಪ್ರತಿರೋಧ ತೋರಿದರೂ ವಾಕ್ಸಮರ ಮುಂದುವರೆಸಿದ್ದ. ನನ್ನ‌ ಪಕ್ಕದಲ್ಲಿದ್ದ ಹರ್ಷಿಕಾಳನ್ನ ಕಂಡು ದೇಕ್ ನೇಕಿ ಹಮಾರ ಚೋಕ್ರಿ ಹೈ. ಕಿಸಿಕೋ ಲೇಕ್ ಹೈ (ನೋಡುವುದಕ್ಕೆ ನಮ್ಮ ಸಮುದಾಯ ಹುಡುಗಿಯಾಗಿದ್ದು, ಈತ ಕರೆದುಕೊಂಡು ಬಂದಿದ್ದ) ಎಂದು ಉರ್ದುವಿನಲ್ಲಿ ಹೇಳಿದ್ದಾನೆ.‌ ನನ್ನ ತಂಟೆಗೆ ಬರಬೇಡಿ ಎಂದು ಭುವನ್ ಗದರಿಸಿದ್ದಕ್ಕೆ ಕ್ಷಣಾರ್ಧದಲ್ಲಿ ಹುಡುಗರನ್ನ ಕರೆಯಿಸಿ ತಮ್ಮ‌ ಮೇಲೆ ಹಲ್ಲೆಗೆ ಯತ್ನಿಸಿದ್ದರು.‌ ಈ ಬಗ್ಗೆ ಸ್ಥಳದಲ್ಲಿದ್ದ ಎಎಸ್ಐ ಸಹ ನಮ್ಮ ನೆರವಿಗೆ ಬಂದಿರಲಿಲ್ಲ. ಕನ್ನಡ ಮಾತನಾಡುವ ವಿಚಾರಕ್ಕೆ ಕ್ಯಾತೆ ತೆಗೆದಿದ್ದರು" ಎಂದು ತಮಗಾದ ಕಹಿ ಅನುಭವ ಬಿಚ್ಚಿಟ್ಟರು.

ನಟಿ ಹರ್ಷಿಕಾ ಪೂರ್ಣಚ್ಚ ಮಾತನಾಡಿ, "ತಮಗಾಗಿರುವ ಕಹಿ ಅನುಭವನವನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದೇನೆ. ಘಟನೆ ನಡೆದಾಗ ದೂರು ಕೊಡುವ ಮನಸ್ಥಿತಿಯಲ್ಲಿ ಇರಲಿಲ್ಲ. ಹಿತೈಷಿಗಳ ಸಲಹೆ ಮೇರೆಗೆ ಇಂದು ಪೊಲೀಸರಿಗೆ ದೂರು ನೀಡಿದ್ದೇನೆ‌. ದೂರಿನ ಹಿಂದೆ ಯಾವುದೇ ರಾಜಕೀಯ ಅಜೆಂಡಾ ಇಲ್ಲ. ಅಲ್ಲದೆ‌ ದೂರನ್ನು ಯಾರೂ ನಮಗೆ ಬರೆದುಕೊಟ್ಟಿಲ್ಲ. ಇಲ್ಲಿ ಹುಟ್ಟಿಬೆಳೆದ‌‌ ನಾನು‌ ಕನ್ನಡ ಮಾತನಾಡಬಾರದೆ ಎಂದು ಅಸಮಾಧಾನದಲ್ಲಿ ಪಾಕಿಸ್ತಾನದಲ್ಲಿ‌ ಇದ್ದೇವಾ ಎಂಬ ರೀತಿಯಲ್ಲಿ ನನ್ನ‌ ಎಕ್ಸ್ ಖಾತೆಯಲ್ಲಿ‌ ಪೋಸ್ಟ್ ಮಾಡಿದ್ದೇ ವಿನಃ ಬೆಂಗಳೂರು ಹಾಗೂ ಇಲ್ಲಿನ ಕಾನೂನು‌ ಸುವ್ಯವಸ್ಥೆ ದೂಷಣೆ ಮಾಡಿಲ್ಲ" ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ:ಬೆಂಗಳೂರಿನಲ್ಲಿ ಸ್ಥಳೀಯರು ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಕೇಳಿದ ನಟಿ‌ ಹರ್ಷಿಕಾ ಪೂಣಚ್ಚ - Actress Harshika Poonacha

Last Updated : Apr 20, 2024, 7:12 PM IST

ABOUT THE AUTHOR

...view details