ಬಳ್ಳಾರಿ:ನಟ ಯಶ್ ಬೆಂಗಾವಲು ವಾಹನ ಡಿಕ್ಕಿಯಾಗಿ ಅವರ ಅಭಿಮಾನಿಯೋರ್ವ ಗಾಯಗೊಂಡಿರುವ ಘಟನೆ ನಗರದ ಹೊರವಲಯದಲ್ಲಿರುವ ಬಾಲಾಜಿ ಕ್ಯಾಂಪ್ನಲ್ಲಿ ಇಂದು ಸಂಭವಿಸಿದೆ. ಬಾಲಾಜಿ ನಗರದಲ್ಲಿ ನೂತನವಾಗಿ ನಿರ್ಮಾಣವಾದ ಅಮೃತೇಶ್ವರ ಸ್ಫಟಿಕ ಲಿಂಗ ದೇವಸ್ಥಾನದ ಉದ್ಘಾಟನೆಗೆ ಯಶ್ ಬಂದಿದ್ದರು. ಈ ಸುದ್ದಿ ತಿಳಿದು ಅವರನ್ನು ನೋಡಲು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು. ಯಶ್ ಹೊರಡುವ ಸಮಯದಲ್ಲಿ ಸಾಕಷ್ಟು ಅಭಿಮಾನಿಗಳು ಹಿಂಬಾಲಿಸಿದ್ದಾರೆ. ಈ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ಪಟ್ಟಣದ ವಸಂತ ಎಂಬ ಯುವಕನ ಮೇಲೆ ಬೆಂಗಾವಲು ಪಡೆಯ ವಾಹನ ಹರಿಯಿತು. ಕೂಡಲೇ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿದುಬಂದಿದೆ.
ಬಳ್ಳಾರಿ: ನಟ ಯಶ್ ಬೆಂಗಾವಲು ಪಡೆ ವಾಹನ ಹರಿದು ಅಭಿಮಾನಿಯ ಕಾಲಿಗೆ ಗಾಯ - ಬಳ್ಳಾರಿ
ನಟ ಯಶ್ ಅವರ ಬೆಂಗಾವಲು ವಾಹನ ಹರಿದು ಅಭಿಮಾನಿಯ ಕಾಲಿಗೆ ಗಾಯವಾದ ಘಟನೆ ಬಳ್ಳಾರಿಯಲ್ಲಿ ನಡೆಯಿತು.
ಯಶ್ ಬೆಂಗಾವಲು ಪಡೆಯ ವಾಹನ ಹರಿದು ಅಭಿಮಾನಿಯ ಕಾಲಿಗೆ ಗಾಯ
Published : Feb 29, 2024, 4:37 PM IST
|Updated : Feb 29, 2024, 5:40 PM IST
ಗಾಯಾಳು ವಸಂತ ಅವರ ತಂದೆ ರಾಮ ಮಾತನಾಡಿ, ''ಯಶ್ ಅವರನ್ನು ನೋಡಲು ಹೋಗಿದ್ದಾಗ ಈ ಅವಘಡ ನಡೆಯಿತು. ಅವರ ಬೆಂಗವಾಲು ಕಾರು ಹರಿದು ಕಾಲಿಗೆ ಗಾಯವಾಗಿದೆ. ಸದ್ಯ ಆಸ್ಪತ್ರೆಗೆ ದಾಖಲಿಸಿದ್ದೇವೆ. ಚಿಕಿತ್ಸೆ ನಡೆಯುತ್ತಿದೆ'' ಎಂದು ತಿಳಿಸಿದರು.
ಇದನ್ನೂ ಓದಿ:ಬರ್ತ್ ಡೇ ಅಂದ್ರೆನೇ ಭಯ ಆಗ್ತಿದೆ, ಮೃತರ ಕುಟುಂಬಗಳಿಗೆ ಅಗತ್ಯ ಸಹಾಯ ಮಾಡುವೆ: ಯುವಕರ ಪೋಷಕರಿಗೆ ಯಶ್ ಸಾಂತ್ವನ
Last Updated : Feb 29, 2024, 5:40 PM IST