ರಾಮನಗರ:ಚನ್ನಪಟ್ಟಣ ತಾಲೂಕಿನ ಗೌಡಗೆರೆಯ ಚಾಮುಂಡೇಶ್ವರಿ ದೇವಾಲಯಕ್ಕೆ ಇಂದು ನಟ ದರ್ಶನ್ ಅವರ ತಾಯಿ ಮೀನಾ ತೂಗುದೀಪ ಭೇಟಿ ನೀಡಿ, ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ಕುಟುಂಬಸ್ಥರೊಂದಿಗೆ ಆಗಮಿಸಿದ್ದ ಮೀನಾ ತೂಗುದೀಪ, ಪುತ್ರ ದರ್ಶನ್ ಹೆಸರಿನಲ್ಲಿ ವಿಶೇಷ ಪೂಜೆ ಮಾಡಿಸಿದರು. ಸಂಕಷ್ಟಗಳನ್ನು ಪರಿಹರಿಸುವಂತೆ ಬಸಪ್ಪನ ಬಳಿ ಪ್ರಾರ್ಥಿಸಿದರು. ಮೀನಾ ತೂಗುದೀಪ ಅವರಿಗೆ ಬಸಪ್ಪ ತನ್ನ ಬಲಗಾಲಿನಿಂದ ಆಶೀರ್ವಾದ ಮಾಡಿತು.
ವಿಶ್ವದಲ್ಲೇ ಅತಿ ಎತ್ತರದ ಪಂಚಲೋಹದ ಚಾಮುಂಡೇಶ್ವರಿ ವಿಗ್ರಹ:ವಿಶ್ವದಲ್ಲೇ ಅತಿ ಎತ್ತರದ ಪಂಚಲೋಹದ ಚಾಮುಂಡೇಶ್ವರಿ ತಾಯಿಯ ವಿಗ್ರಹವನ್ನು ರಾಮನಗರ ಜಿಲ್ಲೆಯ ಚನ್ನಪಟ್ಟಣದ ಗೌಡಗೆರೆ ಗ್ರಾಮದಲ್ಲಿ 2021ರಲ್ಲಿ ನಿರ್ಮಿಸಲಾಗಿತ್ತು. 60 ಅಡಿ ಎತ್ತರದ ವಿಗ್ರಹ ಇದಾಗಿದೆ. ದೇಶದ ಮೊದಲ ಪಂಚಲೋಹದ ಚಾಮುಂಡೇಶ್ವರಿ ವಿಗ್ರಹವೂ ಹೌದು. ದೇವಿಗೆ 18 ಕೈಗಳಿರುವುದು ಮತ್ತೊಂದು ವಿಶೇಷ.