ಕರ್ನಾಟಕ

karnataka

ETV Bharat / state

ಕಲ್ಯಾಣ ಮಂಟಪದಿಂದಲೇ ಫೋಟೋಗ್ರಾಫರ್ ಕಿಡ್ನ್ಯಾಪ್, ಹಲ್ಲೆ ಆರೋಪ : 8 ಜನರ ಬಂಧನ - ACCUSED ARRESTED FOR ASSAULT

ಕಲ್ಯಾಣ ಮಂಟಪದಿಂದ ಫೋಟೋಗ್ರಾಫರ್ ಕಿಡ್ನ್ಯಾಪ್ ಮಾಡಿ ಹಲ್ಲೆ ನಡೆಸಿರುವ ಆರೋಪದ ಮೇರೆಗೆ 8 ಜನ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.

Umesh Hosura
ಹಲ್ಲೆಗೊಳಗಾದ ವ್ಯಕ್ತಿ ಉಮೇಶ ಹೊಸೂರ (ETV Bharat)

By ETV Bharat Karnataka Team

Published : Nov 26, 2024, 7:21 PM IST

ಬೆಳಗಾವಿ : ಮದುವೆ ಮಂಟಪದಿಂದ ಫೋಟೋಗ್ರಾಫರ್ ಕಿಡ್ನ್ಯಾಪ್ ಮಾಡಿ ಹಲ್ಲೆ ಮಾಡಿರುವ ಆರೋಪ ನಗರದಲ್ಲಿ ಕೇಳಿ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 8 ಜ‌ನ ಆರೋಪಿಗಳನ್ನು ಪೊಲೀಸರು ಜೈಲಿಗಟ್ಟಿದ್ದಾರೆ.

ನಗರದ ಕೆಪಿಟಿಸಿಎಲ್ ಕಲ್ಯಾಣ ಮಂಟಪದಲ್ಲಿ ಘಟನೆ ನಡೆದಿದ್ದು, ಕಲ್ಯಾಣ ಮಂಟಪದಿಂದ ಫೋಟೋಗ್ರಾಫರ್ ಕಿಡ್ನ್ಯಾಪ್ ಮಾಡಿಕೊಂಡು ಹೋಗುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಉಮೇಶ ಹೊಸೂರು ಹಲ್ಲೆಗೊಳಗಾದ ಫೋಟೋಗ್ರಾಫರ್.

ಬೈಲಹೊಂಗಲ ಪಟ್ಟಣದಲ್ಲಿ ವಾಸವಾಗಿರುವ ಉಮೇಶ್, ನಾಲ್ಕು ದಿನಗಳ ಹಿಂದೆ ಮದುವೆ ಆರ್ಡರ್ ಅಂತಾ ಬೆಳಗಾವಿ ನಗರಕ್ಕೆ ಬಂದಿದ್ದರು. ಈ ವೇಳೆ ಆತನನ್ನು ಹಿಂಬಾಲಿಸಿಕೊಂಡು ನಾಲ್ವರು ಕಲ್ಯಾಣ ಮಂಟಪಕ್ಕೆ ಬಂದು, ಹೊರಗೆ ಕರೆದುಕೊಂಡು ಹೋಗಿ ಅಲ್ಲಿಂದ ಕಾರಿನಲ್ಲಿ ಕಿಡ್ನ್ಯಾಪ್ ಮಾಡಿ ಪರಾರಿಯಾಗಿದ್ದರು. ನಂತರ ಬೈಲಹೊಂಗಲ ತಾಲೂಕಿನ ಚಿವಟಗುಂಡಿ ಕ್ರಾಸ್ ಬಳಿ ಕಾರು ನಿಲ್ಲಿಸಿ ಉಮೇಶ್​ ಮೇಲೆ ಹಲ್ಲೆ ನಡೆಸಿ ಬಿಟ್ಟು ಹೋಗಿದ್ದರು.

ಮಾಳಮಾರುತಿ ಠಾಣೆಯಲ್ಲಿ ದೂರು : ಇದಾದ ನಂತರ ಉಮೇಶ್ ಆರೋಪಿಗಳ ಮನೆಯ ಹೆಣ್ಣು ಮಕ್ಕಳಿಗೆ ಕಾಡಿಸುತ್ತಿರುವುದಾಗಿ ಸುಳ್ಳು ಹೇಳಿ ಹಲ್ಲೆ ಮಾಡಲಾಗಿದೆ ಎಂದು ಎಂಟು ಜನರ ವಿರುದ್ಧ ಮಾಳಮಾರುತಿ ಠಾಣೆಯಲ್ಲಿ ಉಮೇಶ್ ದೂರು ದಾಖಲಿಸಿದ್ದರು.‌

ಕೇಸ್ ದಾಖಲಾಗುತ್ತಿದ್ದಂತೆ ಆರೋಪಿಗಳಾದ ವಿಕ್ಕಿ, ಪ್ರವೀಣ್ ಉಮರಾಣಿ, ಬಸವರಾಜ ನರಟ್ಟಿ ಸೇರಿ ಎಂಟು ಜನರನ್ನು ಮಾಳಮಾರುತಿ ಠಾಣೆ ಪೊಲೀಸರು ಬಂಧಿಸಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಉಮೇಶ್​ : ಬೈಲಹೊಂಗಲ ಖಾಸಗಿ ಆಸ್ಪತ್ರೆಯಲ್ಲಿ ಉಮೇಶ್ ಚಿಕಿತ್ಸೆ ಪಡೆಯುತ್ತಿದ್ದಾರೆ‌. ಫೋಟೋಗ್ರಫಿ ವೃತ್ತಿ ವೈಷಮ್ಯದಿಂದ ಹಲ್ಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ :ಕಾರು ಬಾಡಿಗೆಗೆ ಪಡೆದ ಯುವಕರ ಮೇಲೆ ಹಲ್ಲೆ, ಹಣ ಸುಲಿಗೆ: ಮೂವರ ಬಂಧನ

ABOUT THE AUTHOR

...view details