ಬೀದರ್ : ಜಿಲ್ಲೆಯ ಭಾಲ್ಕಿ ತಾಲೂಕಿನ ಸೇವಾನಗರ ತಾಂಡಾ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ್ದು, 10 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಬೀದರ್ ನ ಬ್ರೀಮ್ಸ್ (ಜಿಲ್ಲಾಸ್ಪತ್ರೆ)ಗೆ ದಾಖಲಿಸಲಾಗಿದೆ. ಧನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ನಸುಕಿಜಾವ 4:30ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ.
ಬೀದರ್: ಟ್ರಕ್ - ಪಿಕ್ ಅಪ್ ವಾಹನದ ನಡುವೆ ಮುಖಾಮುಖಿ ಡಿಕ್ಕಿ; ನಾಲ್ವರು ಸ್ಥಳದಲ್ಲೇ ಸಾವು - ಭೀಕರ ರಸ್ತೆ ಅಪಘಾತ
ಬೀದರ್ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಅಂತ್ಯಕ್ರಿಯೆ ಮುಗಿಸಿ ಬರುವಾಗ ಈ ದುರ್ಘಟನೆ ನಡೆದಿದೆ.
Published : Feb 28, 2024, 10:16 AM IST
ಮೃತಪಟ್ಟಿರುವ ಎಲ್ಲಾ ದುರ್ದೈವಿಗಳು ಮಹಾರಾಷ್ಟ್ರದ ಉದಗೀರ್ ಮೂಲದವರು ಎಂದು ತಿಳಿದುಬಂದಿದೆ. ದಸ್ತ್ ಗಿರ್ ದಾವಲಸಾಬ್ (36), ರಸೀದಾ ಶೇಕ್ (41), ಪಿಕ್ ವಾಹನ ಚಾಲಕ ವಲಿ (31) ಅಮಾಮ್ ಶೇಕ್ (51) ಎಂದು ಗುರುತಿಸಲಾಗಿದೆ.
ಮೃತಪಟ್ಟಿದ್ದ ಸಂಬಂಧಿಕರೊಬ್ಬರ ಅಂತ್ಯಕ್ರಿಯೆ ಮುಗಿಸಿ ಉದಗೀರ್ ನಿಂದ ಹೈದರಾಬಾದ್ ಕಡೆ ಹೋಗುತ್ತಿದ್ದ ವೇಳೆ 14 ಜನರಿದ್ದ ಪಿಕ್ ಅಪ್ ವಾಹನ ಮತ್ತು ಲಾರಿ ಮಧ್ಯೆ ಅಪಘಾತ ನಡೆದಿದೆ. ಪಿಕ್ಅಪ್ ವಾಹನದಲ್ಲಿ 6 ಜನ ಮಹಿಳೆಯರು, 5 ಜನ ಪುರುಷರು ಮತ್ತು ಮೂವರು ಮಕ್ಕಳು ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಎಸ್‌ಪಿ ಚೆನ್ನಬಸವಣ್ಣ ಲಂಗೋಟಿ ಅವರು ಭೇಟಿ ನೀಡಿ ಪರಿಶೀಲಿಸಿದರು.