ಕರ್ನಾಟಕ

karnataka

ETV Bharat / state

ಕೊರಿಯನ್ ಮಾದರಿ ಶಿವಮೊಗ್ಗದ ಸೆಂಟ್ರಲ್​ ಜೈಲ್​ಗೆ ದರ್ಶನ್ ಸಾಥಿಗಳ ಆಗಮನ - Shivamogga Central Jail - SHIVAMOGGA CENTRAL JAIL

ರೇಣುಕಾಸ್ವಾಮಿ ಕೊಲೆ ಪ್ರಕರಣದ A6 ಮತ್ತು A13 ಆರೋಪಿಗಳನ್ನು ಮಲೆನಾಡ ಸೆಂಟ್ರಲ್​ ಜೈಲಿಗೆ ಕರೆತರಲಾಗಿದೆ.

ಕೊರಿಯನ್ ಮಾದರಿಯ ಶಿವಮೊಗ್ಗದ ಸೆಂಟ್ರಲ್​ ಜೈಲ್​ಗೆ ದರ್ಶನ್ ಸಾಥಿಗಳ ಆಗಮನ
ಕೊರಿಯನ್ ಮಾದರಿಯ ಶಿವಮೊಗ್ಗದ ಸೆಂಟ್ರಲ್​ ಜೈಲ್​ಗೆ ದರ್ಶನ್ ಸಾಥಿಗಳ ಆಗಮನ (ETV Bharat)

By ETV Bharat Karnataka Team

Published : Aug 29, 2024, 1:09 PM IST

ಶಿವಮೊಗ್ಗ: ಜಿಲ್ಲೆಯ ಹೊರ ಭಾಗದಲ್ಲಿ ಇರುವ ರಾಜ್ಯದ ನೂತನ ಕಾರಾಗೃಹ ಸೋಗಾನೆಯ ಸೆಂಟ್ರಲ್​ ಜೈಲಿಗೆ ರೇಣುಕಾಸ್ವಾಮಿ ಕೊಲೆ ಪ್ರಕರಣದ ಇಬ್ಬರು ಆರೋಪಿಗಳನ್ನು ಕರೆತರಲಾಗಿದೆ.

ಇಂದು ಬೆಂಗಳೂರು ಪರಪ್ಪನ ಅಗ್ರಹಾರದಿಂದ ಆರೋಪಿಗಳಾದ ಜಗದೀಶ್​ ಹಾಗೂ ಲಕ್ಷ್ಮಣ್​ನನ್ನು ಶಿವಮೊಗ್ಗ ಜೈಲಿಗೆ ಕರೆತರಲಾಯಿತು. ಜಗದೀಶ್ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ A6 , ಲಕ್ಷ್ಮಣ A13ನೇ ಆರೋಪಿಯಾಗಿದ್ದಾನೆ. ಇಬ್ಬರು ಆರೋಪಿಗಳನ್ನು ಶಿವಮೊಗ್ಗದ ಡಿಆರ್ ವಾಹನದಲ್ಲಿ ಕರೆತರಲಾಯಿತು.

ಶಿವಮೊಗ್ಗದ ಹೊರವಲಯ ಸೋಗಾನೆಯಲ್ಲಿ ಸುಮಾರು 63 ಎಕರೆ ಭೂಮಿಯಲ್ಲಿ ನೂತನ ಸೆಂಟ್ರಲ್​ ಜೈಲನ್ನು ನಿರ್ಮಾಣ ಮಾಡಲಾಗಿದೆ. ಸದ್ಯ ರಾಜ್ಯದಲ್ಲಿಯೇ ಹೈಟೆಕ್​ ಜೈಲು ಇದಾಗಿದ್ದು, ಕೊರಿಯನ್ ಮಾದರಿಯಲ್ಲಿ ನಿರ್ಮಾಣ ಮಾಡಲಾಗಿದೆ. ಕಾರಾಗೃಹ ಒಟ್ಟು 270 ಕೊಠಡಿಗಳನ್ನು ಹೊಂದಿದ್ದು, 500 ಜನ ಖೈದಿಗಳನ್ನು ಬಂಧಿಯಾಗಿಸುವ ಅವಕಾಶವಿದೆ. ಆದರೆ, ಪ್ರಸ್ತುತ ಹೆಚ್ಚಿಗೆಯಾಗಿ 773 ಖೈದಿಗಳು ಇದ್ದಾರೆ.

ಇದನ್ನೂ ಓದಿ:ಬಳ್ಳಾರಿ ಸೆಂಟ್ರಲ್​ ಜೈಲಿಗೆ ನಟ ದರ್ಶನ್​ ಸ್ಥಳಾಂತರ: ಹೈ-ಸೆಕ್ಯೂರಿಟಿ ಸೆಲ್​ಗೆ ಶಿಫ್ಟ್​ - Darshan shifted to Ballari Jail

ABOUT THE AUTHOR

...view details