ಬಳ್ಳಾರಿ:ಬಳ್ಳಾರಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರ (ಬಿಮ್ಸ್)ದಲ್ಲಿ ಶನಿವಾರ ಬೆಳಗ್ಗೆ ಬಾಣಂತಿಯೊಬ್ಬರು ಸಾವಿಗೀಡಾಗಿದ್ದಾರೆ. ಕುರುಗೋಡು ತಾಲೂಕಿನ ಕೋಳೂರು ಗ್ರಾಮದ ನಂದೀಶ್ ಎಂಬುವವರ ಪತ್ನಿ ಮಹಾದೇವಿ(21) ಮೃತರು.
ಮಹಾದೇವಿ ಅವರಿಗೆ ಜ. 25 ರಂದು ಸಿಸೇರಿಯನ್ ಮೂಲಕ ಹೆಣ್ಣು ಮಗುವಿನ ಜನನವಾಗಿತ್ತು. ಅಂದಿನಿಂದಲೂ ಆರೋಗ್ಯವಾಗಿದ್ದ ಮಹಾದೇವಿ ಅವರು ಮೂರು ದಿನಗಳ ಹಿಂದೆ ಅಸ್ವಸ್ಥರಾಗಿದ್ದರು, ವಿಪರೀತ ಜ್ವರ ಬಂದಿತ್ತು. ಸೋಂಕಿನಿಂದಾಗಿ ಮಹಾದೇವಿ ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳುತ್ತಿದ್ದಾರೆ. ಆದರೆ ಅದಕ್ಕೆ ಸೂಕ್ತ ಚಿಕಿತ್ಸೆಯನ್ನು ಅವರು ಕೊಟ್ಟಿಲ್ಲ ಎಂದು ಪತಿ ನಂದೀಶ್ ಆರೋಪಿಸಿದ್ದಾರೆ.
"ಕೆಲವು ಔಷಧಿ ಮತ್ತು ನೆಬುಲೈಸರ್ನ್ನು ಹೊರಗಿನಿಂದ ತರುವಂತೆ ಚೀಟಿ ಬರೆದು ಕೊಡಲಾಗಿದೆ. ತಂದು ಕೊಟ್ಟದ್ದನ್ನೂ ಬಳಸಿಲ್ಲ. ಮಾದೇವಿ ಅವರಿಗೆ ವೈದ್ಯರು ಸರಿಯಾಗಿ ಚಿಕಿತ್ಸೆ ಕೊಡಲಿಲ್ಲ ಎಂದು ಮೃತರ ಸಂಬಂಧಿಯಾದ ಹೊನ್ನೂರಮ್ಮ" ಆರೋಪಿಸಿದ್ದಾರೆ.