ಕರ್ನಾಟಕ

karnataka

ETV Bharat / state

ಫೇಸ್‌ಬುಕ್‌ನಲ್ಲಿ ಪರಿಚಯವಾಗಿ ಬಿಟ್​​​ ಕಾಯಿನ್​​​​ ಹೂಡಿಕೆ: ಮಂಗಳೂರು ವ್ಯಕ್ತಿಗೆ ಲಕ್ಷಾಂತರ ರೂ. ವಂಚನೆ - Bitcoin Fraud - BITCOIN FRAUD

ಫೇಸ್‌ಬುಕ್‌ನಲ್ಲಿ ಪರಿಚಯವಾದ ವ್ಯಕ್ತಿ ಸೂಚನೆಯಂತೆ ಮಂಗಳೂರಿನ ವ್ಯಕ್ತಿಯೊಬ್ಬರು ಬಿಟ್​​​ ಕಾಯಿನ್​​ ಹೂಡಿಕೆ ಮಾಡಿ ಲಕ್ಷಾಂತರ ರೂ. ಕಳೆದುಕೊಂಡಿದ್ದು, ಪ್ರಕರಣ ದಾಖಲಾಗಿದೆ.

ಮಂಗಳೂರು
ಮಂಗಳೂರು (ETV Bharat)

By ETV Bharat Karnataka Team

Published : Jul 3, 2024, 1:33 PM IST

ಮಂಗಳೂರು:ಫೇಸ್​​ ಬುಕ್​​ ಮೂಲಕ ಪರಿಚಯವಾದ ವ್ಯಕ್ತಿಯೊಬ್ಬ ಬಿಟ್​​​ ಕಾಯಿನ್​​ ಹೂಡಿಕೆ ಮಾಡುವಂತೆ ನೀಡಿದ ಸಲಹೆ ನಂಬಿ ಹೂಡಿಕೆ ಮಾಡಿ ಲಕ್ಷಾಂತರ ರೂ. ಕಳೆದುಕೊಂಡಿರುವ ಕುರಿತಂತೆ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫೇಸ್‌ಬುಕ್‌ನಲ್ಲಿ ಪರಿಚಯವಾದ ವ್ಯಕ್ತಿ ವಿಯಕಾ ವೆಬ್‌ಸೈಟ್‌ನಲ್ಲಿ ಸೇರಲು ಈ ವ್ಯಕ್ತಿಗೆ ಸೂಚಿಸಿದ್ದು, ಅದರಂತೆ 75 ಜನರಿದ್ದ ಗ್ರೂಪ್​ನಲ್ಲಿ ಒಟ್ಟು 3 ಲಕ್ಷ ರೂ. ಹೂಡಿಕೆ ಮಾಡಿದ್ದರು. ಇದರಿಂದ 20 ಲಕ್ಷ ರೂ. ವರೆಗೆ ಲಾಭವಾಗಿತ್ತು. ಮತ್ತೆ ಆತನ ಶಿಫಾರಸಿನಂತೆ ವ್ಯವಹಾರ ಮಾಡಿ ಎಲ್ಲವನ್ನು ಕಳೆದುಕೊಂಡಿದ್ದರು. ಈ ಬಗ್ಗೆ ಆತನಲ್ಲಿ ಕೇಳಿದಾಗ ಎಕ್ಸ್‌ಚೇಂಜ್​ನಲ್ಲಿ ಹೊಸ ಕಾಯಿನ್​ (ಶೇರ್ ತರಹ) ಬಿಡುಗಡೆ ಆಗುತ್ತಿದೆ. ಅದಕ್ಕೆ ಅಪ್ಲೈ ಮಾಡಿದರೆ ತುಂಬ ಲಾಭ ಬರುತ್ತದೆ ಎಂದು ನಂಬಿಸಿದ್ದನು.

ಕಳೆದುಕೊಂಡಿರುವ ಹಣವನ್ನು ಮತ್ತೆ ಗಳಿಸುವ ಉದ್ದೇಶದಿಂದ ಬ್ಯಾಂಕ್‌ನಲ್ಲಿ ಚಿನ್ನವನ್ನು ಅಡವಿಟ್ಟು ಸಾಲ ಮಾಡಿದ್ದರು. ವಿಯಕಾ ಕಸ್ಟಮರ್​ ಕೇರ್​​ ಎಂದು ಪರಿಚಯಿಸಿಕೊಂಡಿದ್ದ ರವಿಕುಮಾರ್​ನ ಸೂಚನೆಯಂತೆ 16,29,410 ರೂ. ವನ್ನು ಹೂಡಿಕೆ ಮಾಡಿದ್ದರು. ಇದರಲ್ಲಿ ತುಂಬಾ ಲಾಭ ಕಂಡು ಬಂದಿದ್ದು, ಅದನ್ನು ತೆಗೆಯಲು ಹೋದಾಗ ಜೂ.23ರ ವರೆಗೆ ಡೆಪಾಸಿಟ್ ಮೊಬಿಲೈಸೇಶನ್​ ಅವಧಿ ಆಗಿರುವುದರಿಂದ ತೆಗೆಯಲು ಆಗುವುದಿಲ್ಲ ಎಂದು ಮೆಸೇಜ್​ ಬಂದಿದೆ.

ಜೂ. 24 ರಂದು ಮತ್ತೆ ತೆಗೆಯಲು ಹೋದಾಗ ಭಾರತದಲ್ಲಿ ಕಪ್ಪು ಹಣದ ಹಾವಳಿ ಇದೆ. ನಿಮ್ಮಲ್ಲಿ ಇರುವ ಎಲ್ಲ ಕಾಯಿನ್‌ಗಳನ್ನು ಮಾರಿ ಬಿಡಿ ಎಂದು ಆತ ಹೇಳಿದ್ದಾನೆ. ಹಾಗೆ ಮಾಡಿದ ಬಳಿಕ ವೆರಿಫಿಕೇಶನ್ ಆಗಿ ಪ್ರೊಸೆಸ್ ಆಗಬೇಕು. ಅದಕ್ಕೆ ಶೇ.10ರಷ್ಟು ದುಡ್ಡು ಕಟ್ಟಬೇಕು ಎಂದು ತಿಳಿಸಿದ್ದಾನೆ. ದೂರುದಾರರು ನನ್ನಲ್ಲಿ ಅಷ್ಟು ಮೊತ್ತ ಇಲ್ಲ ಎಂದು ಹೇಳಿದಾಗ, ಹಾಗಾದರೆ ನಿಮ್ಮ ಎಲ್ಲ ಬ್ಯಾಲೆನ್ಸ್ ಮುಟ್ಟುಗೋಲು ಹಾಕುತ್ತಾರೆ ಎಂದು ಹೆದರಿಸಿದ್ದಾನೆ. ವಂಚನೆಗೊಳಗಾದ ವ್ಯಕ್ತಿ ಹೂಡಿಕೆ ಮಾಡಿದ ಹಣವನ್ನು ಮರಳಿ ನೀಡದೆ ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ:ಅಕ್ರಮ ಸಂಬಂಧ ಉಳಿಸಲು ಸುಪಾರಿ ಕೊಟ್ಟು ಗಂಡನ ಕೊಲೆ; ಪತ್ನಿಸಮೇತ ಐವರಿಗೆ ಜೀವಾವಧಿ ಶಿಕ್ಷೆ - Killers Get Life Imprisonment

ABOUT THE AUTHOR

...view details