ಕರ್ನಾಟಕ

karnataka

ETV Bharat / state

ದುಬೈನಲ್ಲಿ ಕುಳಿತು ಬೆಂಗಳೂರಿನಲ್ಲಿ ಮಾದಕ ದಂಧೆ: ತಾಯಿ - ಮಗಳು ಸೇರಿದಂತೆ ಮೂವರ ವಿರುದ್ಧ ಪ್ರಕರಣ ದಾಖಲು - Drug Case - DRUG CASE

ದುಬೈನಲ್ಲಿ ಕುಳಿತು ಬೆಂಗಳೂರಿನಲ್ಲಿ ಮಾದಕ ದಂಧೆ ನಡೆಸುತ್ತಿದ್ದ ಮೂವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಈ ಮೂವರು ಆರೋಪಿಗಳಲ್ಲಿ ತಾಯಿ ಮಗಳು ಭಾಗಿಯಾಗಿರುವುದು ತಿಳಿದು ಬಂದಿದೆ.

CASE REGISTERED  MOTHER AND DAUGHTER  DRUG DEALING IN BANGALORE  BENGALURU
ಸಿಸಿಬಿ ಕಚೇರಿ (ETV Bharat)

By ETV Bharat Karnataka Team

Published : Jul 6, 2024, 3:01 PM IST

ಬೆಂಗಳೂರು : ದುಬೈನಲ್ಲಿದ್ದುಕೊಂಡು ಬೆಂಗಳೂರಿನಲ್ಲಿ ಮಾದಕ ಸರಬರಾಜು ದಂಧೆಯಲ್ಲಿ ತೊಡಗಿದ್ದ ತಾಯಿ, ಮಗಳು ಸೇರಿದಂತೆ ಮೂವರು ವಿರುದ್ಧ ಬೆಂಗಳೂರಿನ ಕೇಂದ್ರ ಅಪರಾಧ ದಳ (ಸಿಸಿಬಿ) ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ತಮ್ಮ 23 ವರ್ಷದ ಮಗನಿಗೆ ಮಾದಕ ಪದಾರ್ಥಗಳನ್ನ ಸರಬರಾಜು ಮಾಡಿ ಒತ್ತಾಯಪೂರ್ವಕವಾಗಿ ಸೇವಿಸುವಂತೆ ಮಾಡಲಾಗಿದೆ ಎಂದು ಬೆಂಗಳೂರಿನ ಉದ್ಯಮಿಯೊಬ್ಬರು ನೀಡಿರುವ ದೂರಿನ ಅನ್ವಯ ಯುಎಇ ಮೂಲದ ನತಾಲಿಯಾ ವಿರ್ವಾನಿ, ಲೀನಾ ವಿರ್ವಾನಿ ಹಾಗೂ ಬೆಂಗಳೂರಿನ ರಂಜನ್ ಎಂಬಾತನ ವಿರುದ್ಧ ಸಿಸಿಬಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

''ಆರೋಪಿ ನತಾಲಿಯಾ ವಿರ್ವಾನಿ ಹಾಗೂ ಲೀನಾ ವಿರ್ವಾನಿ ದುಬೈನಲ್ಲಿ ನೆಲೆಸಿದ್ದು, ಬೆಂಗಳೂರಿನಲ್ಲಿ ಸ್ಥಳಿಯ ವ್ಯಕ್ತಿಯಾಗಿರುವ ರಂಜನ್ ಎಂಬಾತನ ಮೂಲಕ ಹೈಡ್ರೋ ಗಾಂಜಾ, ಎಂಡಿಎಂಎ ಮಾದಕ ಪದಾರ್ಥಗಳನ್ನ ಸರಬರಾಜು ಮಾಡಿಸುತ್ತಿದ್ದಾರೆ. ದುಬೈ ಹಾಗೂ ಬೆಂಗಳೂರಿನ ನಡುವೆ ಆಗಾಗ ಸಂಚರಿಸುವ ನತಾಲಿಯಾ, ಮಾದಕ ದಂಧೆಯಿಂದ ಗಳಿಸುವ ಹಣವನ್ನ ಪಡೆಯಲು ಖಾಸಗಿ ಬ್ಯಾಂಕ್ ಖಾತೆ ಹೊಂದಿದ್ದಾರೆ. ಆರೋಪಿಗಳು ತಮ್ಮ 23 ವರ್ಷ ವಯಸ್ಸಿನ ಮಗನಿಗೆ ಒತ್ತಾಯ ಪೂರ್ವಕವಾಗಿ ಮಾದಕ ಪದಾರ್ಥಗಳನ್ನ ಸೇವಿಸುವಂತೆ ಮಾಡಿದ್ದಾರೆ'' ಎಂದು ದೂರುದಾರ ಉದ್ಯಮಿ ಆರೋಪಿಸಿದ್ದಾರೆ.

ದೂರಿನನ್ವಯ ಎನ್.ಡಿ.ಪಿ.ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿತರ ಕುರಿತು ವಿವರಗಳನ್ನ ಕಲೆಹಾಕಲಾಗುತ್ತಿದ್ದು, ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಿದ್ದೇವೆ ಎಂದು ಸಿಸಿಬಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಓದಿ:ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ರಾಜಕಾಲುವೆಯಲ್ಲಿ ಕೊಚ್ಚಿ ಹೋದ ಬೈಕ್​ ಸವಾರ: ಮುಂದುವರೆದ ಶೋಧ ಕಾರ್ಯ - bike rider washed away

ABOUT THE AUTHOR

...view details