ಕರ್ನಾಟಕ

karnataka

ETV Bharat / state

ಆನೇಕಲ್​: ವಾಟರ್​​ ಟ್ಯಾಂಕ್​ನಲ್ಲಿ ಶವವಾಗಿ ಪತ್ತೆಯಾದ ಹಸುಗೂಸು! - BABY FOUND DEAD

ಆನೇಕಲ್ ತಾಲೂಕಿನ ಇಗ್ಗಲೂರು ಗ್ರಾಮದಲ್ಲಿ ಮಗುವೊಂದು ಸಿಂಟೆಕ್ಸ್ ಟ್ಯಾಂಕ್​ನಲ್ಲಿ ಶವವಾಗಿ ಪತ್ತೆಯಾದ ಘಟನೆ ನಡೆದಿದೆ.​

ನೀರಿನ ಸಿಂಟೆಕ್ಸ್‌ ಟ್ಯಾಂಕ್
ನೀರಿನ ಸಿಂಟೆಕ್ಸ್‌ ಟ್ಯಾಂಕ್ (ETV Bharat)

By ETV Bharat Karnataka Team

Published : Nov 5, 2024, 6:27 PM IST

ಆನೇಕಲ್​(ಬೆಂಗಳೂರು ಗ್ರಾಮಾಂತರ): ಮನೆಯ ನೀರಿನ ಸಿಂಟೆಕ್ಸ್​ ಟ್ಯಾಂಕ್​ನಲ್ಲಿ ಮಗುವಿನ ಮೃತದೇಹ ಪತ್ತೆಯಾದ ಘಟನೆ ಇಗ್ಗಲೂರು ಗ್ರಾಮದಲ್ಲಿ ನಡೆದಿದೆ. ಮೃತ ಮಗು ಮನು ಮತ್ತು ಅರ್ಚನಾ ದಂಪತಿಯದ್ದು ಎಂದು ತಿಳಿದು ಬಂದಿದೆ.

ಸೋಮವಾರ ಬೆಳಗ್ಗೆ ಮಗು ನಾಪತ್ತೆಯಾಗಿದೆ. ಸುತ್ತಮುತ್ತ ಎಷ್ಟೇ ಹುಡುಕಾಡಿದರೂ ಮಗು ಪತ್ತೆಯಾಗಿರಲಿಲ್ಲ. ಸಂಜೆ ನೀರಿನ ಟ್ಯಾಂಕ್​ನಲ್ಲಿ ಮಗುವಿನ ಮೃತದೇಹ ಸಿಕ್ಕಿದೆ. ಸೂರ್ಯನಗರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೃತ ಮಗುವಿನ ತಾತ ಇಗ್ಗಲೂರಪ್ಪ ಮಾತನಾಡಿ, "ನನ್ನ ಭಾಮೈದ ಒಂದು ವರ್ಷದ ಹಿಂದೆ ಯುವತಿಯ ಜೊತೆ ಅಂತರ್ಜಾತಿ ವಿವಾಹವಾಗಿದ್ದ. ಅದಕ್ಕೂ ಮುನ್ನ ಇವರ ಪ್ರೇಮ ವಿಚಾರ ಪೊಲೀಸ್​ ಠಾಣೆ ಮೆಟ್ಟಿಲೇರಿತ್ತು. ಪೊಲೀಸ್‌ ಸ್ಟೇಷನ್‌ನಲ್ಲಿ ದೂರು ದಾಖಲಾದ ಬಳಿಕ, ಇಬ್ಬರು ಮೇಜರ್‌ ಆಗಿದ್ದ ಕಾರಣ ಮದುವೆ ಆಗಿತ್ತು. ಒಂದು ವರ್ಷದಿಂದ ಇದೇ ಮನೆಯಲ್ಲಿ ವಾಸವಿದ್ದರು. ನನ್ನ ಭಾಮೈದ ನಿನ್ನೆ ಕರೆ ಮಾಡಿ ಯಾರೋ ಮಗುವನ್ನು ಸಿಂಟೆಕ್ಸ್​ ಟ್ಯಾಂಕ್​ನಲ್ಲಿ ಹಾಕಿದ್ದಾರೆ. ಯಾರು ಹಾಕಿದ್ದಾರೆ ಎಂದು ತಿಳಿಯುತ್ತಿಲ್ಲ ಎಂದು ಹೇಳಿದ" ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ನೆಲಮಂಗಲ: ವಿಷಾನಿಲ ಸೇವಿಸಿ ಇಬ್ಬರು ಸಾವು; ಕಾರ್ಖಾನೆ ಮಾಲೀಕ ಸೇರಿ ಮೂವರ ಬಂಧನ

ABOUT THE AUTHOR

...view details