ಕರ್ನಾಟಕ

karnataka

ETV Bharat / state

ಬೆಂಗಳೂರಿನಲ್ಲಿ ಪಟಾಕಿ ಅವಘಡಗಳು: ನಗರದ ಪ್ರಮುಖ ಕಣ್ಣಿನ ಆಸ್ಪತ್ರೆಗಳಲ್ಲಿ 7 ಮಕ್ಕಳು ಚಿಕಿತ್ಸೆಗೆ ದಾಖಲು - INJURIES DUE TO FIRECRACKERS

ದೀಪಾವಳಿಯನ್ನು ಸಿಲಿಕಾನ್ ಸಿಟಿಯಲ್ಲಿ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ನಿನ್ನೆ ಪಟಾಕಿ ಸಿಡಿತದಿಂದ 7 ಮಂದಿ ಗಾಯಗೊಂಡಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.​

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (IANS)

By ETV Bharat Karnataka Team

Published : Nov 1, 2024, 2:02 PM IST

ಬೆಂಗಳೂರು:ಪಟಾಕಿ ಸಿಡಿಸುವ ಸಂದರ್ಭದಲ್ಲಿ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಲು ಎಷ್ಟೇ ಜಾಗೃತಿ ಮೂಡಿಸಿದರೂ ಪಟಾಕಿ ಅವಘಡಗಳು ಸಂಭವಿಸುತ್ತಲೇ ಇದೆ. ಸದ್ಯ ಶಂಕರ ಆಸ್ಪತ್ರೆಯಲ್ಲಿ ಮೂವರು, ನಾರಾಯಣ ನೇತ್ರಾಲಯದಲ್ಲಿ ಮೂವರು ಹಾಗೂ ಮಿಂಟೋ ಆಸ್ಪತ್ರೆಯಲ್ಲಿ ಒಬ್ಬರು ಕಣ್ಣಿಗೆ ಗಂಭೀರ ಹಾನಿ ಮಾಡಿಕೊಂಡು ಚಿಕಿತ್ಸೆಗೆ ದಾಖಲಾಗಿದ್ದಾರೆ.

ಎಂಟು ವರ್ಷದ ಬಾಲಕನೊಬ್ಬ ಪಟಾಕಿ ಸಿಡಿಸುವಾಗ ಕಿಡಿಯೊಂದು ಕಣ್ಣಿಗೆ ಬಿದ್ದು ಗಂಭೀರ ಗಾಯಗೊಂಡಿದ್ದಾನೆ. ಬಾಲಕನನ್ನು ಶಂಕರ ಕಣ್ಣಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಲಕ ದೃಷ್ಟಿ ಕಳೆದುಕೊಳ್ಳುವ ಆತಂಕವಿದೆ. ಚಿಕಿತ್ಸೆ ಮುಂದುವರಿಸಲಾಗಿದೆ, ಹೆಚ್ಚಿನ ಲ್ಯಾಬ್ ಫಲಿತಾಂಶಗಳಿಗೆ ಕಾಯುತ್ತಿರುವುದಾಗಿ ಅಲ್ಲಿನ ವೈದ್ಯರು ತಿಳಿಸಿದ್ದಾರೆ.

ಇನ್ನು ಪಟಾಕಿ ಸಿಡಿಸುತ್ತಿರುವುದನ್ನು ನೋಡುತ್ತಿದ್ದಾಗ ಕಿಡಿಯೊಂದು ಮೂರು ವರ್ಷದ ಹೆಣ್ಣು ಮಗುವಿನ ಕಣ್ಣಿಗೆ ತಾಗಿ ಕಾರ್ನಿಯಾಗೆ ಗಾಯವಾಗಿದೆ. ಇನ್ನೊಂದೆಡೆ ಹತ್ತು ವರ್ಷದ ಬಾಲಕನೊಬ್ಬ ಪಟಾಕಿ ಸಿಡಿಯಲಿಲ್ಲ ಎಂದು ಪರಿಶೀಲಿಸಲು ಹತ್ತಿರ ಹೋದಾಗ ಅದು ಸಿಡಿದು ಕಣ್ಣಿಗೆ ಗಾಯವಾಗಿದೆ. ಸದ್ಯ ಮಗುವಿಗೆ ಚಿಕಿತ್ಸೆಗೆ ನೀಡಲಾಗುತ್ತಿದೆ.

ರಾಜಾಜಿನಗರದ ನಾರಾಯಣ ನೇತ್ರಾಲಯದ ಶಾಖೆಯಲ್ಲಿ ಇಬ್ಬರು ಮಕ್ಕಳು ಹಾಗೂ ಬನ್ನೇರುಘಟ್ಟದಲ್ಲಿರುವ ಶಾಖೆಯಲ್ಲಿ ಓರ್ವ ಬಾಲಕ ಪಟಾಕಿ ಹಾನಿಗೆ ಹೊರ ರೋಗಿಗಳ ವಿಭಾಗದಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

ಉಳಿದಂತೆ ಸರ್ಕಾರಿ ಆಸ್ಪತ್ರೆ ಮಿಂಟೋದಲ್ಲಿ ಹಬ್ಬ ಆರಂಭವಾಗುವ ಮೊದಲೇ ಎರಡು ಪ್ರಕಣಗಳು ವರದಿಯಾಗಿದ್ದು, ಗುರುವಾರ ಸಂಜೆ 5.30ರ ಸುಮಾರಿಗೆ ಮತ್ತೊಂದು ಹೊಸ ವರದಿ ದಾಖಲಾಗಿದೆ. 17 ವರ್ಷದ ಬಾಲಕನು ಪಟಾಕಿ ಹೊಡೆಯವಾಗ ಕಣ್ಣಿಗೆ ಗಾಯ ಮಾಡಿಕೊಂಡಿದ್ದು, ಚಿಕಿತ್ಸೆ ನೀಡಲಾಗಿದೆ.

ಒಟ್ಟು ಮೂರು ಪ್ರಕರಣಗಳು ಮಿಂಟೋ ಆಸ್ಪತ್ರೆಯಲ್ಲಿ ದಾಖಲಾಗಿವೆ. ಈಗಾಗಲೇ 18 ವರ್ಷ ಬಾಲಕ ಮತ್ತು 5 ವರ್ಷದ ಮಗು ಇಬ್ಬರಿಗೂ ಚಿಕಿತ್ಸೆ ನೀಡಲಾಗಿದೆ. ಈ ಇಬ್ಬರೂ ಬೇರೆಯವರು ಪಟಾಕಿ ಸಿಡಿಸುವುದನ್ನು ನೋಡುತ್ತಿರುವ ಸಂದರ್ಭದಲ್ಲಿ ಕಣ್ಣಿಗೆ ಗಾಯ ಮಾಡಿಕೊಂಡಿದ್ದಾರೆ. ಬಾಲಕನ ಎಡಗಣ್ಣಿನ ಕಾರ್ನಿಯಾಗೆ ಗಂಭೀರ ಗಾಯವಾಗಿದೆ. ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಎರಡು ವಾರಗಳ ನಂತರ ಎಷ್ಟು ಪ್ರಮಾಣದಲ್ಲಿ ದೃಷ್ಟಿ ಹೋಗಿದೆ ಎಂಬುದು ತಿಳಿಯಲಿದೆ ಎಂದು ಚಿಕಿತ್ಸೆ ನೀಡುತ್ತಿರುವ ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ:ದೆಹಲಿ ದೀಪಾವಳಿ ಎಫೆಕ್ಟ್​: ಒಂದೇ ದಿನದ ಪಟಾಕಿಗೆ 'ಅತ್ಯಂತ ಕಳಪೆ' ಮಟ್ಟಕ್ಕೆ ತಲುಪಿದ ವಾಯು ಗುಣಮಟ್ಟ

ABOUT THE AUTHOR

...view details