ಕರ್ನಾಟಕ

karnataka

ETV Bharat / state

ನೆಲಮಂಗಲ: ರೈಲಿಗೆ ಸಿಲುಕಿ 46 ಕುರಿಗಳು ಸ್ಥಳದಲ್ಲೇ ಸಾವು - 46 sheep died - 46 SHEEP DIED

ರೈಲು ಹರಿದ ಪರಿಣಾಮ 46 ಕುರಿಗಳು ಸ್ಥಳದಲ್ಲೇ ಅಸುನೀಗಿದ ಘಟನೆ ನೆಲಮಂಗಲದ ನಿಡವಂದ ಗ್ರಾಮದಲ್ಲಿ ನಡೆದಿದೆ.

ರೈಲಿಗೆ ಸಿಲುಕಿ 46 ಕುರಿಗಳ ಸ್ಥಳದಲ್ಲೇ ಸಾವು
ರೈಲಿಗೆ ಸಿಲುಕಿ 46 ಕುರಿಗಳ ಸ್ಥಳದಲ್ಲೇ ಸಾವು (ETV Bharat)

By ETV Bharat Karnataka Team

Published : May 14, 2024, 9:19 PM IST

ನೆಲಮಂಗಲ(ಬೆಂಗಳೂರು ಗ್ರಾಮಾಂತರ): ರೈಲು ಹರಿದ ಪರಿಣಾಮ 46 ಕುರಿಗಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನೆಲಮಂಗಲ ತಾಲೂಕಿನ ನಿಡವಂದ ಗ್ರಾಮದ ರೈಲ್ವೆ ನಿಲ್ದಾಣದ ಬಳಿ ನಡೆದಿದೆ. ರೈತ ರಂಗನಾಥ್ ಎಂಬುವರಿಗೆ ಸೇರಿದ ಕುರಿಗಳಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ.

ಇದೇ ವೇಳೆ, ರೈಲ್ವೆ ಸಿಬ್ಬಂದಿಯೊಬ್ಬರು ಸತ್ತ ಕೆಲ ಕುರಿಗಳನ್ನು ತಮಗೆ ನೀಡಬೇಕು ಎಂದು ಕೇಳಿದ್ದರಿಂದ ಗ್ರಾಮಸ್ಥರು ಅವರನ್ನು ತರಾಟೆಗೆ ತೆಗೆದುಕೊಂಡ ಘಟನೆಯೂ ನಡೆದಿದೆ. ಈ ಕುರಿತು ರೈಲ್ವೆ ಸಿಬ್ಬಂದಿ ಪ್ರತಿಕ್ರಿಯಿಸಿ, ನಾನು ತಿನ್ನುವ ಸಲುವಾಗಿ ಒಂದೆರಡು ಕುರಿಗಳನ್ನು ಕೇಳಿದ್ದು ನಿಜ. ಆದರೆ 10 ಕುರಿಗಳನ್ನು ಕೇಳಿಲ್ಲ ಎಂದು ಸ್ಪಷ್ಟನೆ ಕೂಡಾ ನೀಡಿದ್ದಾರೆ.

ಇದನ್ನೂ ಓದಿ:ದಕ್ಷಿಣ ಕನ್ನಡ: ಸಿಡಿಲು ಬಡಿದು ಉತ್ತರ ಪ್ರದೇಶ ಮೂಲದ ಕಾರ್ಮಿಕ ಸಾವು - laborer was died by lightning

ಸಿಡಿಲು ಬಡಿದು ಕುರಿಗಾಹಿ, 17 ಕುರಿಗಳು ಸಾವು: ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ವಿಭೂತಿಹಳ್ಳಿ ಗ್ರಾಮದ ಬಳಿ ಸಿಡಿಲು ಬಡಿದು ಕುರಿಗಾಹಿಯೊಬ್ಬ ಹಾಗೂ ಏಳು ಕುರಿಗಳು ಸಾವಿಗೀಡಾಗಿರುವ ಘಟನೆ ಸೋಮವಾರ ನಡೆದಿತ್ತು. ವಿಭೂತಿಹಳ್ಳಿ ಗ್ರಾಮದ ಗೋವಿಂದಪ್ಪ (22) ಮೃತ ಕುರಿಗಾಹಿ. ಗ್ರಾಮದ ಮಹ್ಮದ್ ಕಾಶಿಮ್ ಅವರ ಹೊಲದಲ್ಲಿ ವಾಸ್ತವ್ಯ ಹೂಡಿದ್ದ ಕುರಿ ಹಟ್ಟಿಯಲ್ಲಿ ಮೃತ ಕುರಿಗಾಹಿ ಮಲಗಿದ್ದನು. ಈ ವೇಳೆ, ಗುಡುಗು ಸಿಡಿಲು ಸಹಿತ ಮಳೆ ಸುರಿದಿದೆ. ಕುರಿಗಾಯಿ ಗೋವಿಂದಪ್ಪನಿಗೆ ಸೋಮವಾರ ಬೆಳಗಿನ ಜಾವ ಸಿಡಿಲು ಬಡಿದು ಮೃತಪಟ್ಟಿದ್ದಾನೆಂದು ಕುಟುಂಬಸ್ಥರು ತಿಳಿಸಿದ್ದರು. ಹಟ್ಟಿಯಲ್ಲಿದ್ದ 17 ಕುರಿಗಳು ಸಿಡಿಲು ಬಡಿದು ಸಾವುನ್ನಪ್ಪಿವೆ.

ABOUT THE AUTHOR

...view details