ಕರ್ನಾಟಕ

karnataka

ETV Bharat / state

ಆಗಸ್ಟ್ 18ರಿಂದ ಶ್ರೀಗುರು ರಾಘವೇಂದ್ರ ಸ್ವಾಮಿಯ 353ನೇ ಆರಾಧನಾ ಮಹೋತ್ಸವ: ಗಣ್ಯರಿಗೆ ಪ್ರಶಸ್ತಿ ಪ್ರದಾನ - Mantralaya Aradhana Mahotsava

ಶ್ರೀ ಗುರು ರಾಘವೇಂದ್ರ ಸ್ವಾಮಿಯ 353ನೇ ಆರಾಧನಾ ಮಹೋತ್ಸವ ಸಂಭ್ರಮದ ವೇಳೆ ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯರಿಗೆ ರಾಘವೇಂದ್ರ ಸ್ವಾಮಿ ಅನುಗ್ರಹ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.

ARADHANA MAHOTSAVA
ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 353ನೇ ಆರಾಧನಾ ಮಹೋತ್ಸವ (ETV Bharat)

By ETV Bharat Karnataka Team

Published : Aug 14, 2024, 10:07 PM IST

ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿಯಿಂದ ಮಾಹಿತಿ (ETV Bharat)

ರಾಯಚೂರು:ಮಂತ್ರಾಲಯದಲ್ಲಿ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 353ನೇ ಆರಾಧನಾ ಮಹೋತ್ಸವಕ್ಕೆ ಸಕಲ ಸಿದ್ದತೆ ನಡೆಯುತ್ತಿದ್ದು, ಆಗಸ್ಟ್ 18ರಿಂದ 24 ರ ವರೆಗೆ ರಾಯರ ಆರಾಧನಾ ಮಹೋತ್ಸವ ನಡೆಯಲಿದೆ ಎಂದು ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ಮಾಹಿತಿ ನೀಡಿದರು.

ರಾಯರ ಮಠದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆ.18ರಂದು ಧ್ವಜಾರೋಹಣ ಕಾರ್ಯಕ್ರಮದ ಮೂಲಕ ಆರಾಧನಾ ಮಹೋತ್ಸವಕ್ಕೆ ಚಾಲನೆ ನೀಡಲಾಗುವುದು. ಆಗಸ್ಟ್ 20ಕ್ಕೆ ಪೂರ್ವಾರಾಧನೆ, 21ಕ್ಕೆ ಮಧ್ಯಾರಾಧನೆ, 22ಕ್ಕೆ ಉತ್ತರಾರಾಧನೆ ವಿಜೃಂಭಣೆಯಿಂದ ನೇರವೇರಲಿದೆ ಎಂದು ತಿಳಿಸಿದರು.

ಶ್ರೀಗುರು ರಾಘವೇಂದ್ರ ಮಠ (ETV Bharat)

ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯರಿಗೆ ಆ.20ರಂದು ರಾಘವೇಂದ್ರ ಸ್ವಾಮಿ ಅನುಗ್ರಹ ಪ್ರಶಸ್ತಿ ಪ್ರದಾನ, ಸನ್ಮಾನ ಕಾರ್ಯಕ್ರಮ ಮಠದ ಮುಂಭಾಗದ ಯೋಗೀಂದ್ರ ಸಭಾಮಂಟಪದಲ್ಲಿ ಜರುಗಲಿದೆ. ತಿರುಪತಿ ತಿರುಮಲ ದೇವಾಲಯದಿಂದ ಬರುವ ಶೇಷವಸ್ತ್ರ ರಾಯರಿಗೆ ಸಮರ್ಪಣೆ ಮಾಡಲಿದ್ದು, ಆಂಧ್ರ, ಕರ್ನಾಟಕ, ತೆಲಂಗಾಣದ ವಿವಿಧ ದೇವಾಲಯಗಳಿಂದ ಪ್ರಸಾದ ರೂಪದಲ್ಲಿ ವಸ್ತ್ರ ಸರ್ಮಪಿಸಲಾಗುವುದು. ಆಗಸ್ಟ್ 22ರಂದು ಮಹಾರಥೋತ್ಸವದ ವೇಳೆ ಮೈಸೂರು ಸಂಸದ ಹಾಗೂ ರಾಜ ಯದುವೀರ್ ಕೃಷ್ಣದತ್ತ ಒಡೆಯರ್ ಭಾಗಿಯಾಗಲಿದ್ದು, ಮಠದ ವತಿಯಿಂದ ಅವರಿಗೆ ರಾಘವೇಂದ್ರ ಅನುಗ್ರಹ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.

ಆರಾಧನಾ ಮಹೋತ್ಸವದಲ್ಲಿ ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ, ವಿ.ಸೋಮಣ್ಣ, ಶೋಭಾ ಕರಂದ್ಲಾಜೆ ಸೇರಿ ಹಲವು ಗಣ್ಯರು ಭಾಗಿಯಾಗಲಿದ್ದು, ರಾಜ್ಯಸಭೆ ಸದಸ್ಯೆ, ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಸುಧಾಮೂರ್ತಿ, ರಿಷಿ ಸುನಕ್ ಅವರ ತಂದೆ-ತಾಯಿ ಸೇರಿ ಹಲವರು ಸೇವೆ ಸಲ್ಲಿಸಲಿದ್ದಾರೆ ಎಂದು ಹೇಳಿದರು.

ಶ್ರೀಗುರು ರಾಘವೇಂದ್ರ ಮಠ (ETV Bharat)

ರಾಯರ ಬೃಂದಾವನ ಶಿಲಾ ಮಂಟಪಕ್ಕೆ ಸ್ವರ್ಣಲೇಪಿತ ಕವಚ ಅಳವಡಿಕೆ ಕಾರ್ಯ ನಡೆಯುತ್ತಿದೆ. ಇದನ್ನು ಬಹುಕೋಟಿ ರೂಪಾಯಿ ಭಕ್ತರು ಸ್ವಿ-ಇಚ್ಛೆಯಿಂದ ಸೇವೆ ಸಲ್ಲಿಸುತ್ತಿದ್ದು, ಆಗಸ್ಟ್ 19ರಂದು ಉದ್ಘಾಟನೆ ನಡೆಯಲಿದೆ ಎಂದರು.

ತುಂಗಭದ್ರಾ ಜಲಾಶಯದ 19ನೇ ಗೇಟ್ ಮುರಿದಿದ್ದು, ಒಂದೆರಡು ದಿನದಲ್ಲಿ ಸರಿ ಹೋಗಬಹುದು. ಆದ್ದರಿಂದ ಮಂತ್ರಾಲಯಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಮಂತ್ರಾಲಯದಲ್ಲಿ ಪ್ರವಾಹ ಭೀತಿಯಿಲ್ಲ. ಎಲ್ಲಾ ಭಕ್ತರು ಬಂದು ರಾಯರ ದರ್ಶನ ಪಡೆದುಕೊಂಡು ಹೋಗಬಹುದು. ಟಿಬಿ ಡ್ಯಾಂ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇವೆ. ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುವ ಸಾಧ್ಯತೆಗಳಿಲ್ಲ. ಸ್ನಾನ, ಶೌಚಾಲಯ ಸೇರಿದಂತೆ ಭಕ್ತರಿಗೆ ಎಲ್ಲಾ ವ್ಯವಸ್ಥೆ ಕೂಡ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: 'ಒಂದು ರೂಪಾಯಿ ಮುಟ್ಟಿಲ್ಲ, ಭ್ರಷ್ಟಾಚಾರ ಮಾಡಿಲ್ಲ': ಮಾರಿಗುಡಿಯಲ್ಲಿ ಶಾಸಕ ಹರೀಶ್ ಪೂಂಜಾ ಪ್ರಮಾಣ - Harish Poonja

ABOUT THE AUTHOR

...view details