ಕರ್ನಾಟಕ

karnataka

ETV Bharat / state

ಮಂತ್ರಾಲಯದಲ್ಲಿ ರಾಘವೇಂದ್ರ ಸ್ವಾಮಿಗಳ 353ನೇ ಆರಾಧನಾ ಮಹೋತ್ಸವ ಸಂಭ್ರಮ‌ - Raghavendra Swami

ರಾಘವೇಂದ್ರ ಸ್ವಾಮಿಗಳ 353ನೇ ಆರಾಧನಾ ಮಹೋತ್ಸವಕ್ಕೆ ಗುರು ರಾಯರ ಪೂರ್ವಾರಾಧನೆ ಅದ್ಧೂರಿಯಿಂದ ನಡೆಯುತ್ತಿದೆ.

ಮಂತ್ರಾಲಯದಲ್ಲಿ ರಾಘವೇಂದ್ರ ಸ್ವಾಮಿಗಳ 353ನೇ ಆರಾಧನಾ ಮಹೋತ್ಸವ ಸಂಭ್ರಮ‌
ಮಂತ್ರಾಲಯದಲ್ಲಿ ರಾಘವೇಂದ್ರ ಸ್ವಾಮಿಗಳ 353ನೇ ಆರಾಧನಾ ಮಹೋತ್ಸವ ಸಂಭ್ರಮ‌ (ETV Bharat)

By ETV Bharat Karnataka Team

Published : Aug 20, 2024, 10:51 AM IST

Updated : Aug 20, 2024, 11:17 AM IST

ಮಂತ್ರಾಲಯದಲ್ಲಿ ರಾಘವೇಂದ್ರ ಸ್ವಾಮಿಗಳ 353ನೇ ಆರಾಧನಾ ಮಹೋತ್ಸವ ಸಂಭ್ರಮ‌ (ETV Bharat)

ರಾಯಚೂರು:ಮಂತ್ರಾಲಯದ ಶ್ರೀಗುರು ರಾಘವೇಂದ್ರ ಸ್ವಾಮಿಗಳ 353 ನೇ ಆರಾಧನಾ ಮಹೋತ್ಸವ ಹಿನ್ನೆಲೆಯಲ್ಲಿ ಗುರು ರಾಯರ ಪೂರ್ವಾರಾಧನೆ ಸಂಭ್ರಮ‌ ಸಡಗರದಿಂದ ನಡೆಯುತ್ತಿದೆ.

ಆರಾಧನಾ ಮೂರನೇ ದಿನವಾದ ಇಂದು ಬೆಳಿಗ್ಗೆಯಿಂದಲೇ ಮಠದಲ್ಲಿ ವಿವಿಧ ಪೂಜ ಕೈಂಕರ್ಯಗಳು ಶ್ರೀಮಠದ ಪೀಠಾಧಿಪತಿ ಶೀ ಸುಬುಧೇಂದ್ರ ತೀರ್ಥರ ನೇತೃತ್ವದಲ್ಲಿ ಆರಂಭವಾಗಿವೆ. ಬೆಳಿಗ್ಗೆ ನಿರ್ಮಾಲ್ಯ ವಿಸರ್ಜನೆ ನಡೆದಿದ್ದು ಇದಾದ ನಂತರ ರಾಯರ ಮೂಲ ಬೃಂದಾವನಕ್ಕೆ ವಿಶೇಷ ಅಭಿಷೇಕ ನಡೆದಿದೆ. ಪೀಠಾಧಿಪತಿಗಳಿಂದ ಮೂಲ ರಾಮ ದೇವರ ಪೂಜೆ ಹಾಗೂ ಉತ್ಸವ ರಾಯರ ಪಾದಪೂಜೆ, ಪಂಚಾಮೃತ, ಅಲಂಕಾರ ಸಂತರ್ಪಣ, ಹಸ್ತೋದಕ ಜರುಗಲಿದೆ.

ಮಂತ್ರಾಲಯದಲ್ಲಿ ರಾಘವೇಂದ್ರ ಸ್ವಾಮಿಗಳ 353ನೇ ಆರಾಧನಾ ಮಹೋತ್ಸವ ಸಂಭ್ರಮ‌ (ETV Bharat)

ಮಠದ ಪ್ರಾಕಾರದಲ್ಲಿ ರಜತ ಸಿಂಹ ವಾಹನೋತ್ಸವ ನಡೆಯಲಿದ್ದು, ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯರಿಗೆ ಇಂದು ಸಂಜೆ ರಾಘವೇಂದ್ರ ಅನುಗ್ರಹ ಪ್ರಶಸ್ತಿ ಪ್ರದಾನ ಮಾಡಲಾಗುವುದು. ರಾಯರು ಸಶರೀರರಾಗಿ ವೃಂದಾವನಸ್ಥರಾದ ಪೂರ್ವ ದಿನವನ್ನು ರಾಯರ ಪೂರ್ವಾಧನೆಯನ್ನಾಗಿ ಮಾಡಲಾಗುತ್ತಿದೆ.

ಆರಾಧನಾ ಮಹೋತ್ಸವಕ್ಕೆ ದೇಶ, ವಿದೇಶ, ಅಂತಾರಾಜ್ಯ ಹಾಗೂ ರಾಜ್ಯದ ನಾನಾ ಭಾಗಗಳಿಂದ ಭಕ್ತರು ಆಗಮಿಸುತ್ತಿದ್ದಾರೆ. ಈ‌ ಮಹೋತ್ಸವಕ್ಕೆ ಬರುವ ಭಕ್ತರಿಗೆ ಸಕಲ ವ್ಯವಸ್ಥೆಯನ್ನು ಶ್ರೀಮಠ ಕಲ್ಪಿಸಿದೆ.

ಮಂತ್ರಾಲಯದಲ್ಲಿ ರಾಘವೇಂದ್ರ ಸ್ವಾಮಿಗಳ 353ನೇ ಆರಾಧನಾ ಮಹೋತ್ಸವ ಸಂಭ್ರಮ‌ (ETV Bharat)

ಇನ್ನು ಆರಾಧನಾ ಮಹೋತ್ಸವಕ್ಕೆ ನಾನಾ ಭಾಗಗಳಿಂದ ಭಕ್ತರು ರಾತ್ರಿ ವೇಳೆ ಮಠದ ಮುಂಭಾಗದ ಕಾರಿಡಾರ್ ವಿಶ್ರಾಂತಿ ಪಡೆಯುತ್ತಿದ್ದರು. ಆದರೆ ರಾತ್ರಿ 2 ಗಂಟೆಯ ಸುಮಾರಿಗೆ ಭಾರಿ ಮಳೆ ಸುರಿಯುತ್ತಿತ್ತು. ಆಗ ಖುದ್ದು ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರು‌ ಶ್ರೀಮಠದ ಬಾಗಿಲು ತೆರೆದು, ರಾಯರ ಮಠದ ಪ್ರಾಕಾರ ಹಾಗೂ ಮಂಟಪದಲ್ಲಿ ವಿಶ್ರಾಂತಿ ಮಾಡುವುದಕ್ಕೆ ಅವಕಾಶ ಮಾಡಿಕೊಟ್ಟರು.

ಇದನ್ನೂ ಓದಿ:ಲಾಲ್ ಬಾಗ್ ಪುಷ್ಪ ಪ್ರದರ್ಶನ ಅಂತ್ಯ: 9 ಲಕ್ಷಕ್ಕೂ ಅಧಿಕ ಪ್ರವಾಸಿಗರ ಭೇಟಿ, ಬಂದ ಆದಾಯವೆಷ್ಟು? - Lalbagh flower show

Last Updated : Aug 20, 2024, 11:17 AM IST

ABOUT THE AUTHOR

...view details