ಕರ್ನಾಟಕ

karnataka

ETV Bharat / state

ರಾಜ್ಯದ 21 ಜನ ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ರಾಷ್ಟ್ರಪತಿ ಪದಕ ಗೌರವ - PRESIDENT AWARD

ರಾಷ್ಟ್ರಪತಿ ಪದಕ ಗೌರವಕ್ಕೆ ರಾಜ್ಯದ 21 ಜನ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಪಾತ್ರರಾಗಿದ್ದಾರೆ.

ಕರ್ನಾಟಕ ಪೊಲೀಸರಿಗೆ ರಾಷ್ಟ್ರಪತಿ ಪದಕ ಗೌರವ
ಕರ್ನಾಟಕ ಪೊಲೀಸರಿಗೆ ರಾಷ್ಟ್ರಪತಿ ಪದಕ ಗೌರವ (ETV Bharat)

By ETV Bharat Karnataka Team

Published : Jan 25, 2025, 1:30 PM IST

ಬೆಂಗಳೂರು: ಗಣರಾಜ್ಯೋತ್ಸವ ದಿನಾಚರಣೆ ಹಿನ್ನೆಲೆಯಲ್ಲಿ ಕೊಡಲಾಗುವ ರಾಷ್ಟ್ರಪತಿಗಳ ಪದಕ ಗೌರವಕ್ಕೆ ಕರ್ನಾಟಕದ 21 ಜನ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ಭಾಜನರಾಗಿದ್ದಾರೆ. ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ ಗೌರವಕ್ಕೆ ಇಬ್ಬರು ಅಧಿಕಾರಿಗಳು ಹಾಗೂ ಶ್ಲಾಘನೀಯ ಸೇವಾ ಪದಕ ಗೌರವಕ್ಕೆ 19 ಅಧಿಕಾರಿ ಹಾಗೂ ಸಿಬ್ಬಂದಿ ಪಾತ್ರರಾಗಿದ್ದಾರೆ.

ವಿಶಿಷ್ಟ ಸೇವಾ ಪದಕ ಗೌರವ ಪುರಸ್ಕೃತರು:

ವಿಶಿಷ್ಟ ಸೇವಾ ಪದಕ ಪುರಸ್ಕೃತರು (ETV Bharat)
  • ಬಸವರಾಜ ಶರಣಪ್ಪ ಜಿಳ್ಳೆ - ಡಿಐಜಿಪಿ, ಕೆಎಸ್ಆರ್‌ಪಿ ಬೆಂಗಳೂರು
  • ಹಂಜಾ ಹುಸೇನ್ - ಕಮಾಂಡೆಂಟ್, 12ನೇ ಪಡೆ, ಕೆಎಸ್ಆರ್‌ಪಿ ತುಮಕೂರು
ಶ್ಲಾಘನೀಯ ಸೇವಾ ಪದಕ ಪುರಸ್ಕೃತರು (ETV Bharat)
ಶ್ಲಾಘನೀಯ ಸೇವಾ ಪದಕ ಪುರಸ್ಕೃತರು (ETV Bharat)

ಶ್ಲಾಘನೀಯ ಸೇವಾ ಪದಕ ಪುರಸ್ಕೃತರು

  • ರೇಣುಕಾ ಕೆ ಸುಕುಮಾರ್ - ಡಿಐಜಿಪಿ, ಡಿಸಿಆರ್‌ಇ, ಬೆಂಗಳೂರು
  • ಡಾ.ಸಂಜೀವ್ ಎಂ ಪಾಟೀಲ್ - ಐಪಿಎಸ್ - ಎಐಜಿಪಿ ಜನರಲ್, ಪೊಲೀಸ್ ಪ್ರಧಾನ ಕಚೇರಿ, ಬೆಂಗಳೂರು ನಗರ
  • ಬಿ.ಎಂ.ಪ್ರಸಾದ್ - ಕಮಾಂಡೆಂಟ್, ಐಆರ್‌ಬಿ, ಮುನಿರಾಬಾದ್, ಕೊಪ್ಪಳ
  • ವೀರೇಂದ್ರ ನಾಯಕ್‌ ಎನ್ - ಡೆಪ್ಯುಟಿ ಕಮಾಂಡೆಂಟ್, 11ನೇ ಪಡೆ, ಕೆಎಸ್ಆರ್‌ಪಿ ಹಾಸನ
  • ಗೋಪಾಲ್ ಡಿ ಜೋಗಿನ - ಎಸಿಪಿ, ಸಿಸಿಬಿ ಬೆಂಗಳೂರು
  • ಗೋಪಾಲಕೃಷ್ಣ ಬಿ ಗೌಡರ್ - ಡಿವೈಎಸ್‌ಪಿ, ಚಿಕ್ಕೋಡಿ ಉಪವಿಭಾಗ, ಬೆಳಗಾವಿ
  • ಹೆಚ್.ಗುರುಬಸವರಾಜ - ಪೊಲೀಸ್ ಇನ್ಸ್‌ಪೆಕ್ಟರ್, ಕರ್ನಾಟಕ ಲೋಕಾಯುಕ್ತ, ಚಿತ್ರದುರ್ಗ
  • ಜಯರಾಜ್ ಹೆಚ್ - ಪೊಲೀಸ್ ಇನ್ಸ್‌ಪೆಕ್ಟರ್, ಗೋವಿಂದಪುರ ಠಾಣೆ, ಬೆಂಗಳೂರು
  • ಪ್ರದೀಪ್ ಬಿ.ಆರ್ - ಸರ್ಕಲ್ ಇನ್ಸ್‌ಪೆಕ್ಟರ್, ಹೊಳೆನರಸೀಪುರ ವೃತ್ತ ಠಾಣೆ, ಹಾಸನ
  • ಮೊಹಮ್ಮದ್ ಮುಕಾರಾಂ - ಪೊಲೀಸ್ ಇನ್ಸ್‌ಪೆಕ್ಟರ್, ಸಿಸಿಬಿ ಬೆಂಗಳೂರು
  • ವಸಂತ ಕುಮಾರ್ ಎಂ.ಎ - ಪೊಲೀಸ್ ಇನ್ಸ್‌ಪೆಕ್ಟರ್, ಬ್ಯೂರೋ ಆಫ್ ಇಮಿಗ್ರೇಷನ್
  • ಮಂಜುನಾಥ್ ವಿ.ಜಿ - ಎಎಸ್ಐ, ಸಿಐಡಿ ಬೆಂಗಳೂರು
  • ಅಲ್ತಾಫ್ ಹುಸೇನ್ ಎನ್ ದಖನಿ - ಎಎಸ್ಐ, ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆ, ಬೆಂಗಳೂರು
  • ಬಲೇಂದ್ರನ್ - ಆರ್‌ಹೆಚ್‌ಸಿ, 4ನೇ ಪಡೆ, ಕೆಎಸ್ಆರ್‌ಪಿ ಬೆಂಗಳೂರು
  • ಅರುಣ ಕುಮಾರ್ - ಸಿಹೆಚ್‌ಸಿ, ಡಿಐಜಿಪಿ ಕಚೇರಿ, ಈಶಾನ್ಯ ವಲಯ, ಕಲಬುರಗಿ
  • ನಯಾಜ್ ಅಂಜುಮ್ - ಎಹೆಚ್‌ಸಿ, ಡಿಪಿಓ ಚಿಕ್ಕಮಗಳೂರು
  • ಶ್ರೀನಿವಾಸ್ ಎಂ - ಸಿಹೆಚ್‌ಸಿ, ಡಿಸಿಪಿ ಪಶ್ಚಿಮ ವಿಭಾಗ ಕಚೇರಿ, ಬೆಂಗಳೂರು
  • ಅಶ್ರಫ್ ಪಿ.ಎಂ - ಹಿರಿಯ ಗುಪ್ತ ಸಹಾಯಕರು, ರಾಜ್ಯ ಗುಪ್ತವಾರ್ತೆ, ಬೆಂಗಳೂರು
  • ಶಿವಾನಂದ ಬಿ - ಸಿಹೆಚ್‌ಸಿ, ಕುಂದಾಪುರ ಪೊಲೀಸ್ ಠಾಣೆ, ಉಡುಪಿ

ಎಲ್ಲ ರಾಜ್ಯಗಳ ಪೊಲೀಸ್, ಅಗ್ನಿಶಾಮಕ, ಗೃಹರಕ್ಷಕ ಮತ್ತು ಇತರೆ ಸೇವೆಗಳ ಒಟ್ಟು 942 ಸಿಬ್ಬಂದಿಯು 2025 ರ ಗಣರಾಜ್ಯೋತ್ಸವದ ಅಂಗವಾಗಿ ಕೊಡುವ ಶೌರ್ಯ ಮತ್ತು ಸೇವಾ ಪದಕ ಗೌರವಕ್ಕೆ ಪಾತ್ರರಾಗಿದ್ದಾರೆ.

ಇದನ್ನೂ ಓದಿ:ಡಾ ಸುರೇಶ್ ಹನಗವಾಡಿಗೆ 'ಶ್ರೇಷ್ಠ ದಿವ್ಯಾಂಗನ್ ರಾಷ್ಟ್ರೀಯ ಪ್ರಶಸ್ತಿ' ಗೌರವ ; ರಾಷ್ಟ್ರಪತಿಗಳಿಂದ ಔತಣಕೂಟಕ್ಕೆ ಆಹ್ವಾನ

ಇದನ್ನೂ ಓದಿ:ಮನು ಭಾಕರ್​, ಡಿ​ ಗುಕೇಶ್​ ಸೇರಿ ನಾಲ್ವರಿಗೆ ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿ ಪ್ರದಾನ!

ABOUT THE AUTHOR

...view details