ಕರ್ನಾಟಕ

karnataka

ETV Bharat / state

ನಟಿ ಹರ್ಷಿಕಾ ದಂಪತಿ ಮೇಲೆ ಹಲ್ಲೆ: ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು - Actress Harshika Poonacha - ACTRESS HARSHIKA POONACHA

ನಟಿ ಹರ್ಷಿಕಾ ಪೂಣಚ್ಚ ದಂಪತಿ ಮೇಲೆ ಹಲ್ಲೆ ಪ್ರಕರಣ ಸಂಬಂಧ ಇಬ್ಬರ ವಿರುದ್ಧ ಪೊಲೀಸರು ದೂರು ದಾಖಲಿಸಿ, ಶೋಧ ಕಾರ್ಯ ನಡೆಸಿದ್ದಾರೆ.

Etv Bharat
Etv Bharat

By ETV Bharat Karnataka Team

Published : Apr 22, 2024, 10:51 AM IST

Updated : Apr 22, 2024, 1:47 PM IST

ಬೆಂಗಳೂರು: ನಟಿ ಹರ್ಷಿಕಾ ಪೂಣಚ್ಚ ದಂಪತಿ ಮೇಲೆ ಹಲ್ಲೆ ಸಂಬಂಧ ಪುಲಕೇಶಿನಗರ ಪೊಲೀಸ್ ಠಾಣೆಯಲ್ಲಿ ಅಪರಿಚಿತ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ. ಹರ್ಷಿಕಾ ಪತಿ ಭುವನ್ ನೀಡಿದ ದೂರು ಆಧರಿಸಿ ಎಫ್ಐಆರ್ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿತರಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಏಪ್ರಿಲ್ 2 ರಂದು‌ ಹೊಟೇಲ್​​ವೊಂದರಲ್ಲಿ ಊಟ ಮುಗಿಸಿ ಪಾರ್ಕಿಂಗ್​ನಲ್ಲಿ ಕಾರು ಹಿಂತೆಗೆದುಕೊಳ್ಳುವ ವೇಳೆ ಓರ್ವ ಕಿರಿಕ್ ತೆಗೆದು ನಿಂದಿಸಿದ್ದಲ್ಲದೇ, ಹಲ್ಲೆ ಮಾಡಿದ್ದ. ಅವನ ಜೊತೆ ಹಲವರು ಕೂಡ ಸೇರಿದ್ದರು ಎಂದು ಭುವನ್ ಪೊನ್ನಪ್ಪ ಆರೋಪಿಸಿ ದೂರು ನೀಡಿದ್ದಾರೆ.

ಏಪ್ರಿಲ್ 2 ರಂದು‌ ಹೊಟೇಲ್​​ವೊಂದರಲ್ಲಿ ಊಟ ಮುಗಿಸಿ ಪಾರ್ಕಿಂಗ್​​ನಲ್ಲಿದ್ದ ಕಾರು ಹಿಂತೆಗೆದುಕೊಳ್ಳುವಾಗ ಕಿಡಿಗೇಡಿಯೊಬ್ಬ ನಿಮ್ಮ ಕಾರು ದೊಡ್ಡದಾಗಿದೆ, ಏಕಾಏಕಿ ಕಾರು ತೆಗೆದರೆ ನಮಗೆ ಟಚ್ ಆಗುತ್ತೆ ಅಂತಾ ಕಿರಿಕ್ ತೆಗೆದಿದ್ದ. ಅದಕ್ಕೆ ಆಯ್ತು ದಾರಿ ಬಿಡಿ ನಾನು ಹೋಗಬೇಕು ಎಂದು ಹೇಳಿದರೂ ಕಿರಿಕ್ ಮುಂದುವರೆಸಿ ಕಾರಿನ ಕಿಟಕಿ ತೆಗೆದು ಹಲ್ಲೆಗೆ ಯತ್ನಿಸಿದ್ದಾನೆ. ಈ ಲೋಕಲ್ ಕನ್ನಡದವ್ರಿಗೆ ಬುದ್ಧಿ ಕಲಿಸಬೇಕು ಅಂತಾ ನಿಂದಿಸಿದ್ದ‌‌. ನಂತರ ನನ್ನ ಕುತ್ತಿಗೆಯಲ್ಲಿದ್ದ ಚೈನ್ ಕಿತ್ತುಕೊಳ್ಳಲು ಯತ್ನಿಸಿದ್ದ. ವಿಡಿಯೋ ಮಾಡಲು ಯತ್ನಿಸಿದ ಹರ್ಷಿಕಾ ಮೊಬೈಲ್ ಕಸಿಯಲು ಯತ್ನಿಸಿದ್ದ. ಈ ವೇಳೆ ಸುಮಾರು 20 - 30 ಜನರು ಜಮಾಯಿಸಿದ್ದರು. ಹಿಂದಿ ಭಾಷೆಯಲ್ಲಿ ನಿಂದಿಸಿದ್ದಾರೆ. ಹರ್ಷಿಕಾರನ್ನ ನೋಡಿ ಕನ್ನಡದವರು ಇಷ್ಟು ಬೆಳ್ಳಗೆ ಇರುವುದಿಲ್ಲ. ನಮ್ಮ ಏರಿಯಾ ಹುಡುಗಿಯನ್ನು ಕರೆದುಕೊಂಡು ಹೋಗುತ್ತಿದ್ದಾನೆ ಅಂತಾ ಕಾರನ್ನು ತಡೆದು ಡ್ಯಾಮೇಜ್ ಮಾಡಲು ಯತ್ನಿಸಿದ್ದಾರೆ ಎಂದು ದೂರಿನಲ್ಲಿ ಭುವನ್ ಉಲ್ಲೇಖಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿರುವ ಪೊಲೀಸರು, ಮೊಬೈಲ್​​ನಲ್ಲಿ ಸೆರೆ ಹಿಡಿರುವ ಇಬ್ಬರು ವ್ಯಕ್ತಿಗಳ ಭಾವಚಿತ್ರ ಆಧರಿಸಿ ಹುಡುಕಾಟ ತೀವ್ರಗೊಳಿದ್ದಾರೆ.

ಇದನ್ನೂ ಓದಿ:ಬೆಂಗಳೂರಲ್ಲಿ ಕಿಡಿಗೇಡಿಗಳಿಂದ ಹಲ್ಲೆ ಯತ್ನ: ನಟರಾದ ಹರ್ಷಿಕಾ‌ ಪೂಣಚ್ಚ ದಂಪತಿಯಿಂದ ದೂರು - actress harshika

ಇದನ್ನೂ ಓದಿ:ಬೆಂಗಳೂರಿನಲ್ಲಿ ಸ್ಥಳೀಯರು ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಕೇಳಿದ ನಟಿ‌ ಹರ್ಷಿಕಾ ಪೂಣಚ್ಚ - Actress Harshika Poonacha

ಶನಿವಾರ ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ರಮಣ್ ಗುಪ್ತಾ ಅವರಿಗೆ ದೂರು ನೀಡಿದ ಬಳಿಕ ನಟಿ ಹರ್ಷಿಕಾ ಪೂರ್ಣಚ್ಚ ಮಾತನಾಡಿದ್ದರು. "ತಮಗಾಗಿರುವ ಕಹಿ ಅನುಭವನವನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದೇನೆ. ಘಟನೆ ನಡೆದಾಗ ದೂರು ಕೊಡುವ ಮನಸ್ಥಿತಿಯಲ್ಲಿ ಇರಲಿಲ್ಲ. ಹಿತೈಷಿಗಳ ಸಲಹೆ ಮೇರೆಗೆ ಇಂದು ಪೊಲೀಸರಿಗೆ ದೂರು ನೀಡಿದ್ದೇನೆ‌. ದೂರಿನ ಹಿಂದೆ ಯಾವುದೇ ರಾಜಕೀಯ ಅಜೆಂಡಾ ಇಲ್ಲ. ಅಲ್ಲದೆ‌ ದೂರನ್ನು ಯಾರೂ ನಮಗೆ ಬರೆದುಕೊಟ್ಟಿಲ್ಲ. ಇಲ್ಲಿ ಹುಟ್ಟಿಬೆಳೆದ‌‌ ನಾನು‌ ಕನ್ನಡ ಮಾತನಾಡಬಾರದೆ ಎಂದು ಅಸಮಾಧಾನದಲ್ಲಿ ಪಾಕಿಸ್ತಾನದಲ್ಲಿ‌ ಇದ್ದೇವಾ ಎಂಬ ರೀತಿಯಲ್ಲಿ ನನ್ನ‌ ಎಕ್ಸ್ ಖಾತೆಯಲ್ಲಿ‌ ಪೋಸ್ಟ್ ಮಾಡಿದ್ದೇ ವಿನಃ ಬೆಂಗಳೂರು ಹಾಗೂ ಇಲ್ಲಿನ ಕಾನೂನು‌ ಸುವ್ಯವಸ್ಥೆ ದೂಷಣೆ ಮಾಡಿಲ್ಲ" ಎಂದು ಸ್ಪಷ್ಟಪಡಿಸಿದ್ದರು.

Last Updated : Apr 22, 2024, 1:47 PM IST

ABOUT THE AUTHOR

...view details