ಶಿವಮೊಗ್ಗದಲ್ಲಿ ಬೃಹತ್ ಗಾತ್ರದ ಹೆಬ್ಬಾವು ರಕ್ಷಣೆ (ETV Bharat) ಶಿವಮೊಗ್ಗ:ಇಲ್ಲಿನಗಾಡಿಕೊಪ್ಪ ಬಡಾವಣೆಯಜನನಿಬಿಡ ಪ್ರದೇಶದಲ್ಲಿ ಜನರಲ್ಲಿ ಆತಂಕ ಉಂಟು ಮಾಡಿದ್ದ ಬೃಹತ್ ಗಾತ್ರದ ಹೆಬ್ಬಾವನ್ನು ಸ್ನೇಕ್ ಕಿರಣ್ ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟಿದ್ದಾರೆ.
ರಾತ್ರಿ ವೇಳೆ ಹೆಬ್ಬಾವು ಮನೆಗಳ ಸುತ್ತಮುತ್ತ ಓಡಾಡುತ್ತಿತ್ತು. ನಾಗರಾಜ್ ಎಂಬವರು ಹೆಬ್ಬಾವು ಕಂಡು ತಕ್ಷಣ ಸ್ನೇಕ್ ಕಿರಣ್‌ಗೆ ಕರೆ ಮಾಡಿ ತಿಳಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಅವರು ಸುಮಾರು 20 ನಿಮಿಷ ಹುಡುಕಾಟ ನಡೆಸಿ ಸೆರೆಹಿಡಿದಿದ್ದಾರೆ.
ಹೆಬ್ಬಾವು ಆಹಾರ ಅರಸಿಕೊಂಡು ಬರುತ್ತದೆ. ಹೀಗಾಗಿ, ಅದು ದಾಳಿ ಮಾಡುವುದು ಸಹಜ ಎಂದು ಕಿರಣ್ ಹೇಳಿದರು.
ಈ ಹೆಬ್ಬಾವು 10 ಅಡಿ ಉದ್ದ, 28 ಕೆ.ಜಿ ಭಾರವಿತ್ತು. ಅರಣ್ಯಾಧಿಕಾರಿಗಳ ಸಹಾಯದಿಂದ ಶಂಕರ ವಲಯದ ಅರಣ್ಯದಲ್ಲಿ ಹೆಬ್ಬಾವನ್ನು ಸುರಕ್ಷಿತವಾಗಿ ಬಿಡಲಾಗಿದೆ.
ಇದನ್ನೂ ಓದಿ:'ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಕುರಿತು ಚರ್ಚೆಯಾಗಿಲ್ಲ': ಸತೀಶ್ ಜಾರಕಿಹೊಳಿ ಹೇಳಿಕೆಗೆ ಪರಮೇಶ್ವರ್ ಪ್ರತಿಕ್ರಿಯೆ - Congress Guarantee Schemes