WPL 2025 RCB vs GG: ಮಹಿಳಾ ಪ್ರೀಮಿಯರ್ ಲೀಗ್ (WPL)ನ 3ನೇ ಆವೃತ್ತಿ ಇಂದಿನಿಂದ ಪ್ರಾರಂಭವಾಗಲಿದೆ. ಕಳೆದ ಸೀಸನ್ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದ ಸ್ಮೃತಿ ಮಂಧಾನ ನೇತೃತ್ವದ RCB ಉದ್ಘಾಟನೆ ಪಂದ್ಯದಲ್ಲಿಂದು ಗುಜರಾತ್ ಜೈಂಟ್ಸ್ ತಂಡವನ್ನು ಎದುರಿಸಲಿದೆ.
ಉಭಯ ತಂಡಗಳ ನಡುವಿನ ಈ ಪಂದ್ಯವು ಸಂಜೆ 7 ಗಂಟೆಗೆ ವಡೋದರಾ ಮೈದಾನದಲ್ಲಿ ಪ್ರಾರಂಭವಾಗಲಿದೆ. ಆಸ್ಟ್ರೇಲಿಯಾದ ಸ್ಟಾರ್ ಆಟಗಾರ್ತಿ ಆಶ್ಲಿ ಗಾರ್ಡ್ನರ್ ನಾಯಕತ್ವದಲ್ಲಿ ಗುಜರಾತ್ ಜೈಂಟ್ಸ್ ಕಣಕ್ಕೆ ಇಳಿಯಲಿದೆ. ಒಟ್ಟು ಐದು ತಂಡಗಳಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮುಂಬೈ ಇಂಡಿಯನ್ಸ್, ದೆಹಲಿ ಕ್ಯಾಪಿಟಲ್ಸ್, ಯುಪಿ ವಾರಿಯರ್ಸ್ ಮತ್ತು ಗುಜರಾತ್ ಜೈಂಟ್ಸ್ WPL ಪ್ರಶಸ್ತಿಗಾಗಿ ಸ್ಪರ್ಧಿಸಲಿವೆ.
ಪ್ರತಿ ತಂಡವು ಇತರ ತಂಡಗಳ ವಿರುದ್ಧ ಎರಡು ಪಂದ್ಯಗಳನ್ನು ಆಡಲಿವೆ. ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ತಂಡ ನೇರವಾಗಿ ಫೈನಲ್‌ಗೆ ಎಂಟ್ರಿ ಕೊಡಲಿದೆ. ಎರಡನೇ ಮತ್ತು ಮೂರನೇ ಸ್ಥಾನ ಪಡೆದ ತಂಡಗಳ ನಡುವೆ ಎಲಿಮಿನೇಟರ್ ಪಂದ್ಯ ನಡೆಯಲಿದೆ. ಗೆದ್ದ ತಂಡ ಫೈನಲ್‌ಗೆ ತಲುಪಲಿದೆ.
4 ಮೈದಾನಗಳಲ್ಲಿ WPL: ಈ ಬಾರಿ ಒಟ್ಟು ನಾಲ್ಕು ಸ್ಥಳಗಳಲ್ಲಿ ಫೈನಲ್ ಪಂದ್ಯ ಸೇರಿದಂತೆ ಒಟ್ಟು 22 ಪಂದ್ಯಗಳು ನಡೆಯಲಿವೆ. ವಡೋದರಾದ ಕೋಟಂಬಿ ಕ್ರೀಡಾಂಗಣ, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ, ಲಕ್ನೋದ ಏಕಾನಾ ಕ್ರೀಡಾಂಗಣ ಮತ್ತು ಮುಂಬೈನ ಬ್ರಬೋರ್ನ್ ಕ್ರೀಡಾಂಗಣಗಳು WPL ಪಂದ್ಯಗಳಿಗೆ ಆತಿಥ್ಯ ವಹಿಸಿಕೊಳ್ಳಲಿವೆ.
ಹೆಡ್ ಟು ಹೆಡ್:WPLನಲ್ಲಿ ಆರ್ಸಿಬಿ ಮತ್ತು ಗುಜರಾತ್ ಜೈಂಟ್ಸ್ ಒಟ್ಟು 4 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಎರಡೂ ತಂಡಗಳು ತಲಾ 2 ಬಾರಿ ಗೆಲುವು ಸಾಧಿಸಿವೆ.
ಪಂದ್ಯ ಉಚಿತ ವೀಕ್ಷಣೆ ಎಲ್ಲಿ:ಮಹಿಳಾ ಪ್ರೀಮಿಯರ್ ಲೀಗ್ 3ನೇ ಆವೃತ್ತಿಯ ಪಂದ್ಯಗಳ ಸ್ಪೋರ್ಟ್ಸ್ 18 ಚಾನೆಲ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಒಟಿಟಿಯಲ್ಲಿ, ಈ ಪಂದ್ಯಗಳನ್ನು ಜಿಯೋ ಸಿನಿಮಾಸ್‌ನಲ್ಲಿ ಸ್ಟ್ರೀಮ್ ಮಾಡಲಾಗುತ್ತದೆ. ಜಿಯೋ ಸಿನಿಮಾಸ್‌ನಲ್ಲಿ ಈ ಪಂದ್ಯಾವಳಿಗಳನ್ನು ಉಚಿತವಾಗಿ ವೀಕ್ಷಿಸಬಹುದು.
ಸಂಭಾವ್ಯ ತಂಡಗಳು- ಆರ್ಸಿಬಿ:ಸ್ಮೃತಿ ಮಂಧಾನ (ನಾಯಕಿ), ಡೇನಿಯಲ್ ವ್ಯಾಟ್-ಹಾಡ್ಜ್, ಎಲ್ಲಿಸ್ ಪೆರ್ರಿ, ರಾಘ್ವಿ ಬಿಸ್ಟ್, ಸಬ್ಬಿನೇನಿ ಮೇಘನಾ, ಜಾರ್ಜಿಯಾ ವೇರ್ಹ್ಯಾಮ್, ರಿಚಾ ಘೋಷ್ (ವಿಕೆಟ್ ಕೀಪರ್), ಕನಿಕಾ ಅಹುಜಾ, ಕಿಮ್ ಗಾರ್ತ್, ರೇಣುಕಾ ಠಾಕೂರ್ ಸಿಂಗ್, ಪ್ರೇಮಾ ರಾವತ್, ಸೋಫ್ ಪಟಲೈನ್, ಏಕ್ತಾ ಬಿಷ್ಟ್, ಜಾಗರವಿ ಪವಾರ, ಆಶಾ ಸೋಭಾನ, ಜೋಶಿತ ವಿ ಜೆ.
ಗುಜರಾತ್ ಜೈಂಟ್ಸ್:ಲಾರಾ ವೊಲ್ವಾರ್ಡ್ಟ್, ಬೆತ್ ಮೂನಿ (ವಿಕೆಟ್ ಕೀಪರ್), ದಯಾಂಡ್ರಾ ಡಾಟಿನ್, ಹರ್ಲೀನ್ ಡಿಯೋಲ್, ಆಶ್ಲೀಗ್ ಗಾರ್ಡ್ನರ್(ನಾಯಕಿ), ಸಿಮ್ರಾನ್ ಶೇಖ್, ದಯಾಲನ್ ಹೇಮಲತಾ, ಸಯಾಲಿ ಸತ್ಘರೆ, ಮೇಘನಾ ಸಿಂಗ್, ಪ್ರಿಯಾ ಮಿಶ್ರಾ, ತನುಜಾ ಕನ್ವರ್, ಮನ್ನತ್ ಪ್ರಕಾಶ್, ಕಾಶ್ವೀ ಪ್ರಕಾಶ್, ಮನ್ನತ್ ಕಶ್ಯಪ್, ಶಾಕ್ ನಾಮ್ ಕಶ್ಯಪ್ ಫುಲ್ಮಾಲಿ, ಫೋಬೆ ಲಿಚ್ಫೀಲ್ಡ್, ಡೇನಿಯಲ್ ಗಿಬ್ಸನ್.
ಇದನ್ನೂ ಓದಿ:ಈವರೆಗೂ RCB ಮುನ್ನಡೆಸಿದ ನಾಯಕರ ಪಟ್ಟಿ: ಇದರಲ್ಲಿ ಇಬ್ಬರು ಕನ್ನಡಿಗರು