ಕರ್ನಾಟಕ

karnataka

ETV Bharat / sports

ಕೆಲ್ವಿನ್ ಕಿಪ್ಟಮ್ ವಿಶ್ವ ಮ್ಯಾರಥಾನ್ ದಾಖಲೆ ಅನುಮೋದಿಸಿದ ವಿಶ್ವ ಅಥ್ಲೆಟಿಕ್ಸ್ - World Athletics

ಕಳೆದ ಅಕ್ಟೋಬರ್​​(2023) ರಲ್ಲಿ ಚಿಕಾಗೋ ಮ್ಯಾರಾಥಾನ್​ನಲ್ಲಿ ಕೀನ್ಯಾದ ಕೆಲ್ವಿನ್​ ಕಿಪ್ಟಮ್​​​ ಬರೆದ ದಾಖಲೆಯನ್ನು ವಿಶ್ವ ಅಥ್ಲೆಟಿಕ್ಸ್​ ಅನುಮೋದಿಸಿದೆ.

World Athletics ratifies Kelvin Kiptum's world marathon record
ಕೆಲ್ವಿನ್ ಕಿಪ್ಟಮ್ ವಿಶ್ವ ಮ್ಯಾರಥಾನ್ ದಾಖಲೆ ಅನುಮೋದಿಸಿದ ವಿಶ್ವ ಅಥ್ಲೆಟಿಕ್ಸ್

By ETV Bharat Karnataka Team

Published : Feb 7, 2024, 7:27 AM IST

ಮೊನಾಕೊ:ಅಂತಾರಾಷ್ಟ್ರೀಯ ಟ್ರ್ಯಾಕ್ ಮತ್ತು ಫೀಲ್ಡ್ ಸ್ಪರ್ಧೆಗಳ ಜಾಗತಿಕ ಆಡಳಿತ ಮಂಡಳಿಯಾದ ವಿಶ್ವ ಅಥ್ಲೆಟಿಕ್ಸ್ ಕಳೆದ ವರ್ಷ ಚಿಕಾಗೋದಲ್ಲಿ ಕೆಲ್ವಿನ್ ಕಿಪ್ಟಮ್ ಅವರು ಎರಡು ಗಂಟೆ 35 ಸೆಕೆಂಡ್​ಗಳಲ್ಲಿ ಗುರಿ ತಲುಪಿ ಮಾಡಿದ ದಾಖಲೆಯನ್ನು (2:00:35) ಅನುಮೋದಿಸಿದೆ. ಅಕ್ಟೋಬರ್ 8, 2023 ರಂದು ನಡೆದ ಚಿಕಾಗೊ ಮ್ಯಾರಥಾನ್‌ನಲ್ಲಿ ವಿಶ್ವ ದಾಖಲೆಯನ್ನ 34 ಸೆಕೆಂಡುಗಳ ಅಂತರದಲ್ಲಿ ಕೆಲ್ವಿನ್​ ಕಿಪ್ಟಮ್​ ಮುರಿದಿದ್ದರು. ಈ ಹಿಂದೆ ಇದ್ದ (2:01) ಎರಡು ಗಂಟೆ ಒಂದು ನಿಮಿಷಗಳ ದಾಖಲೆಯನ್ನ ಕಿಪ್ಟಮ್​​​​ (2:00;35) 2 ಗಂಟೆ 35 ಸೆಕೆಂಡ್​​​​ಗಳಲ್ಲಿ ಓಡುವ ಮೂಲಕ ಹಿಂದಿನ ದಾಖಲೆ ಪುಡಿಗಟ್ಟಿದ್ದರು. ಈ ಸಾಧನೆ ಮಾಡಿದ ಮೊದಲ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಕಿಪ್ಟಮ್​​ ಪಾತ್ರರಾಗಿದ್ದಾರೆ ಎಂದು ವಿಶ್ವ ಅಥ್ಲೆಟಿಕ್ಸ್ ಮಂಗಳವಾರ ತಾನು ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದೆ.

ಆ ಪ್ರದರ್ಶನದೊಂದಿಗೆ ಕಿಪ್ಟಮ್ ಸೆಪ್ಟೆಂಬರ್ 25, 2022 ರಂದು ಬರ್ಲಿನ್‌ನಲ್ಲಿ ತಮ್ಮದೇ ದೇಶ ಬಾಂಧವ ಎಲಿಯುಡ್ ಕಿಪ್‌ಚೋಗೆ ಸ್ಥಾಪಿಸಿದ 2:01:09 ರ ವಿಶ್ವ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಸುಮಾರು 50 ಸೆಕೆಂಡ್​ಗಳು ಮೊದಲೇ ಗುರಿ ತಲುಪುವ ಮೂಲಕ ತಮ್ಮ ವೈಯಕ್ತಿಕ ಶ್ರೇಷ್ಠತೆಯನ್ನು ಸುಧಾರಿಸಿಕೊಂಡಿದ್ದಾರೆ. ಮ್ಯಾರಾಥಾನ್​ನಲ್ಲಿ 14:26 ನಿಮಿಷದಲ್ಲಿ 5 ಕಿಮೀ ತಲುಪಿದ ಸಾಧನೆ ಕೂಡಾ ಮಾಡಿದ್ದಾರೆ.

ಇವರು (1:26:31) ಒಂದು ಗಂಟೆ 26 ನಿಮಿಷ 31 ಸೆಕೆಂಡುಗಳಲ್ಲಿ 30 ಕಿಮೀ ದಾಟುವ ಮೂಲಕ ಕಿಪ್ಟಮ್ ಮಾಟಿಕೊ ಅವರನ್ನು ಹಿಂದಿಕ್ಕಿದ್ದರು. "ನಾನು ದಾಖಲೆ ಬರೆಯುತ್ತಿದ್ದೇನೆ ಎಂಬುದು ನನಗೆ ತಿಳಿದಿತ್ತು. ಆದರೆ, ವಿಶ್ವ ದಾಖಲೆ ಎಂಬುದು ಗೊತ್ತಿರಲಿಲ್ಲ. ನಾನು ತುಂಬಾ ಸಂತೋಷವಾಗಿದ್ದೇನೆ" ಎಂದು ಅವರು ಸಂತಸ ಹಂಚಿಕೊಂಡಿದ್ದರು ಅಷ್ಟೇ ಅಲ್ಲ " ವಿಶ್ವ ದಾಖಲೆ ನನ್ನ ಮನಸ್ಸಿನಲ್ಲಿ ಇರಲಿಲ್ಲ, ಆದರೆ ಒಂದು ದಿನ ನಾನು ವಿಶ್ವ ದಾಖಲೆ ಮಾಡುತ್ತೇನೆ ಎಂಬುದು ನನಗೆ ತಿಳಿದಿತ್ತು." ಎಂದೂ ಕೆಲ್ವಿನ್​ ಕಿಪ್ಟಮ್​ ಹೇಳಿದ್ದರು.

ಕೀನ್ಯಾದ ಡೆನ್ನಿಸ್​ ಕಿಮೆಟ್ಟೊ ಚಿಕಾಗೋ ಮ್ಯಾರಾಥಾನ್​​ನಲ್ಲಿ 2013 ರಲ್ಲಿ ವಿಶ್ವದಾಖಲೆ ಬರೆದಿದ್ದರು. ಆಗ ಅವರು 2 ಗಂಟೆ ಮೂರು ನಿಮಿಷ 45 ಸೆಕೆಂಡ್​ಗಳಲ್ಲಿ(2:03:45) ಗುರಿ ತಲುಪಿ ದಾಖಲೆ ಬರೆದಿದ್ದರು. ಬಳಿಕ ಈ ದಾಖಲೆನ್ನು ಬರ್ಲಿನ್​​ನಲ್ಲಿ ಎಲಿಯುಡ್​ ಕಿಪ್​ಚೋ 2 ಗಂಟೆ ಒಂದು ನಿಮಿಷದ 9 ಸೆಕೆಂಡ್​ಗಳಲ್ಲಿ ಓಡುವ ಮೂಲಕ ಮುರಿದ್ದರು.

ಇದನ್ನು ಓದಿ:ಟಿ20 ವಿಶ್ವಕಪ್​ ಮುಗಿದ ಬೆನ್ನಲ್ಲೇ ಜಿಂಬಾಬ್ವೆ ವಿರುದ್ಧ ಭಾರತ 5 ಪಂದ್ಯಗಳ ಟಿ20 ಸರಣಿ

ABOUT THE AUTHOR

...view details