Jasprit Bumrah Shoe Cost: ವಿಶ್ವದ ಅತ್ಯುತ್ತಮ ಬೌಲರ್ಗಳಲ್ಲಿ ಒಬ್ಬರಾಗಿರುವ ಭಾರತದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ, ತಮ್ಮ ಕರಾರುವಾಕ್ ಬೌಲಿಂಗ್ನಿಂದಲೇ ಕ್ರಿಕೆಟ್ ಲೋಕದಲ್ಲಿ ಹಲವು ದಾಖಲೆಗಳನ್ನು ಬರೆದವರು. ಸದ್ಯ ವಿಶ್ವದ ನಂಬರ್ 1 ಟೆಸ್ಟ್ ಬೌಲರ್ ಕೂಡ ಹೌದು. ತಮ್ಮ ಬಿಗು ಬೌಲಿಂಗ್ನಿಂದ ಎದುರಾಳಿಗಳನ್ನು ಕಾಡುವ ಬುಮ್ರಾ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ತಾವು ಧರಿಸುವ ಶೂಗಳ ಬಗ್ಗೆಯೂ ವಿಶೇಷ ಗಮನಹರಿಸುತ್ತಾರೆ. ಏಕೆಂದರೆ, ಮೈದಾನದಲ್ಲಿ ಅವರ ಕಾರ್ಯಕ್ಷಮತೆ ಸುಧಾರಿಸುವಲ್ಲಿ ಶೂಗಳು ಪ್ರಮುಖ ಪಾತ್ರವಹಿಸುತ್ತವೆ.
ಬುಮ್ರಾ 'ಶೂ' ಸೆಲೆಕ್ಷನ್ ಹೇಗಿದೆ?:ಟಾಪ್ ಸ್ಪೋರ್ಟ್ಸ್ ಬ್ರ್ಯಾಂಡ್ ಆಗಿರುವ ಆಸಿಕ್ಸ್ (Asics)ನೊಂದಿಗೆ ಬುಮ್ರಾ ಒಪ್ಪಂದ ಮಾಡಿಕೊಂಡಿದ್ದಾರೆ. ಈ ಕಂಪನಿ ವಿಶೇಷವಾಗಿ ಕ್ರಿಕೆಟರ್‌ಗಳಿಗೆ ಶೂಗಳನ್ನು ತಯಾರಿಸುತ್ತದೆ. ಆಸಿಕ್ಸ್ ಕ್ರಿಕೆಟ್ ಬೂಟುಗಳು ಬುಮ್ರಾ ಅವರಂತಹ ವೇಗದ ಬೌಲರ್‌ಗಳಿಗೆ ಉತ್ತಮ ಗ್ರಿಪ್, ಕುಶನಿಂಗ್ ಮತ್ತು ಸ್ಟೆಬಿಲಿಟಿ ಒದಗಿಸುತ್ತವೆ. ಅಲ್ಲದೇ ಶೂಗಳ ಮಾದರಿಯನ್ನು ಆಟಗಾರರನ ಕಾರ್ಯಕ್ಷಮತೆಗೆ ತಕ್ಕಂತೆ ತಂತ್ರಜ್ಞಾನದ ಮೂಲಕ ತಯಾರಿಸಲಾಗುತ್ತದೆ. ಹಾಗಾಗಿ ಇವುಗಳ ಬೆಲೆ ಕೂಡ ಹೆಚ್ಚು. ಸಾಮಾನ್ಯವಾಗಿ ಇದರ ಬೆಲೆಗಳು 5,000ರಿಂದ 15,000 ರೂ.ವರೆಗೆ ಇರುತ್ತದೆ.