ಹೈದರಾಬಾದ್: ಕಾರುಗಳ ಸ್ಪರ್ಧೆ ಎಂದಾಕ್ಷಣ ತಕ್ಷಣಕ್ಕೆ ನೆನಪಿಗೆ ಬರುವುದು ಫಾರ್ಮುಲಾ ಒನ್ ಅಥವಾ F1 ರೇಸ್. ಇದು ಭಾರತದಲ್ಲಿ ಪ್ರಸಿದ್ಧಿ ಪಡೆದಿಲ್ಲವಾದರೂ ವಿದೇಶದಲ್ಲಿ ಇದಕ್ಕೆ ದೊಡ್ಡ ಫ್ಯಾನ್ಬೇಸ್ ಇದೆ. ವಿದೇಶಿಗರು ಇದನ್ನು ಪ್ರತಿಷ್ಠೆಯ ಗೇಮ್ ಆಗಿ ಕಾಣುತ್ತಾರೆ. ಆದ್ರೆ ನೀವು ಎಂದಾದ್ರೂ ಈ ರೇಸ್ನಲ್ಲಿ ಬಳಸಲಾಗುವ ಕಾರಿನ ಬೆಲೆ ಎಷ್ಟಿರಬಹುದು ಎಂದು ಯೋಚಿಸಿದ್ದೀರಾ?. ಹಾಗಾದ್ರೆ ಬನ್ನಿ ಈ ಸುದ್ದಿಯಲ್ಲಿ ಫಾರ್ಮುಲಾ ಒನ್ನಲ್ಲಿ ಬಳಸಲಾಗುವ ಕಾರಿನ ಬೆಲೆ ಎಷ್ಟು ಮತ್ತು ಈ ಕ್ರೀಡೆ ಎಲ್ಲಿ ಹೆಚ್ಚು ಪ್ರಸಿದ್ಧಿ ಪಡೆದುಕೊಂಡಿದೆ ಎಂಬುದರ ಕುರಿತು ಈ ಸುದ್ದಿಯಲ್ಲಿ ತಿಳಿದುಕೊಳ್ಳೋಣ.
ಎಫ್ 1 ಇತಿಹಾಸ:ಫಾರ್ಮುಲಾ ಒನ್ ಕ್ರೀಡೆಯೂ 1920 ಮತ್ತು 30ರ ನಡುವೆ ಹುಟ್ಟಿಕೊಂಡಿತು. ಆರಂಭದಲ್ಲಿ ಇದನ್ನು ಯುರೋಪಿಯನ್ ಗ್ರ್ಯಾಂಡ್ ಪ್ರಿಕ್ಸ್ ಮೋಟಾರ್ ರೇಸಿಂಗ್ ಎಂದು ಕರೆಯಲಾಗುತಿತ್ತು. ಇದೀಗ ಫಾರ್ಮುಲಾ 1 ಆಗಿ ಬದಲಾಯಿಸಲಾಗಿದೆ. ನಂತರ 1950 ರಿಂದ ಎಫ್1 ಕ್ರೀಡಾವಳಿಗಳನ್ನು ಆಯೋಜಿಸಲು ಪ್ರಾರಂಭಿಸಲಾಯಿತು. ಅಂದಿನಿಂದ ಈ ಕ್ರೀಡೆ ಜಗಜ್ಜಾಹೀರವಾಗತೊಡಗಿತು.
ಎಫ್ 1ನಲ್ಲಿ ಬಳಸುವ ಕಾರುಗಳು:ಫಾರ್ಮುಲಾ ಒನ್ನಲ್ಲಿ ಒಟ್ಟು 20 ಚಾಲಕರನ್ನೊಳಗೊಂಡ 10 ತಂಡಗಳು ಭಾಗವಹಿಸುತ್ತವೆ. ಈ ಗೇಮ್ನಲ್ಲಿ ಬಳಸಲಾಗುವ ಕಾರುಗಳೆಂದರೇ ಫೆರಾರಿ (1950 ರ ಸೀಸನ್ನಿಂದಲೂ ಈ ಕಾರನ್ನು ಬಳಸಲಾಗುತ್ತಿದೆ) ಮತ್ತು ಮೆಕ್‌ಲಾರೆನ್ ಮತ್ತು 2016ರ ಸೇರ್ಪಡೆಗೊಂಡ ಹಾಸ್ ಕಾರನ್ನು ಈ ಕ್ರೀಡೆಯಲ್ಲಿ ಬಳಸಲಾಗುತ್ತದೆ.
ಎಲ್ಲಿ ಖ್ಯಾತಿ ಪಡೆದಿದೆ:ಎಫ್ ಒನ್ ರೇಸ್ ಒಟ್ಟು 21 ದೇಶಗಳಲ್ಲಿ ಆಡಲಾಗುತ್ತದೆ. ಈ ದೇಶಗಳು ಈ ಎಫ್ ಒನ್ ಟ್ರ್ಯಾಕ್ ಅನ್ನು ಹೊಂದಿವೆ. ಅವುಗಳಲ್ಲಿ ಸಿಲ್ವರ್‌ಸ್ಟೋನ್, ಸ್ಪಾ-ಫ್ರಾಂಕೋರ್‌ಚಾಂಪ್ಸ್ ಮತ್ತು ಸುಜುಕಾ ಕ್ಲಾಸಿಕ್ ಟ್ರ್ಯಾಕ್‌ಗಳಾಗಿ ಖ್ಯಾತಿ ಪಡೆದಿವೆ. ಜೊತೆಗೆ ಲಾಸ್ ವೇಗಾಸ್, ಮಿಯಾಮಿ ಮತ್ತು ಕತಾರ್ ಸೇರಿದಂತೆ ರೋಸ್ಟರ್ ಎಂಬ ಟ್ರ್ಯಾಕ್ಗಳು ಇತ್ತೀಚಿನ ಸೇರ್ಪಡೆಗೊಂಡಿವೆ. ಸಿಲ್ವರ್‌ಸ್ಟೋನ್ 1950ರಲ್ಲಿ ಮೊದಲ ಬಾರಿಗೆ F1 ರೇಸ್ ಅನ್ನು ಆಯೋಜಿಸಿತು. ಈ ಸ್ಥಳ ಇಂದಿಗೂ ಜನಪ್ರಿಯವಾಗಿದೆ. ಫಾರ್ಮುಲಾ 1ರ ಉದ್ಘಾಟನಾ ಋತುವಿನಲ್ಲಿ ಏಳು ಸುತ್ತಿನ ಆಟವನ್ನು ನಡೆಸಲಾಗಿತ್ತು.