ನವದೆಹಲಿ: ಕ್ರಿಕೆಟ್ ಇಂದು ವಿಶ್ವದ ಎರಡನೇ ಜನಪ್ರಿಯ ಕ್ರೀಡೆಯಾಗಿ ಗುರುತಿಸಿಕೊಂಡಿದೆ. ಅಲ್ಲದೇ ಈ ಕ್ರೀಡೆಯಲ್ಲಿ ಆಟಗಾರರು ಖ್ಯಾತಿ ಪಡೆಯುವುದರ ಜೊತೆಗೆ ಆರ್ಥಿಕವಾಗಿಯೂ ಬಲಿಷ್ಠರಾಗುತ್ತಾರೆ. ಕೇವಲ ಜಾಹೀರಾತು ಮಾತ್ರವಲ್ಲದೇ ಆಯಾದೇಶಗಳು ಕ್ರಿಕೆಟ್ ಮಂಡಳಿಯಿಂದಲೂ ಆಟಗಾರರು ಕೈತುಂಬ ಹಣವನ್ನು ಸಂಪಾದಿಸುತ್ತಾರೆ. ಅದರಲ್ಲೂ ಭಾರತೀಯ ಕ್ರಿಕೆಟರ್ಗಳು ವಿಶ್ವದಲ್ಲೇ ಅತೀ ಹೆಚ್ಚು ಸಂಭಾವನೆ ಪಡೆಯುವ ಆಟಗಾರರಾಗಿರುವುದು ನಮಗೆಲ್ಲ ಗೊತ್ತೇ ಇದೇ. ಹಾಗಾದರೆ ಬನ್ನಿ ಇಂದು ನೆರೆಯ ರಾಷ್ಟ್ರ ಪಾಕಿಸ್ತಾನದ ಆಟಗಾರರು ತಮ್ಮ ಕ್ರಿಕೆಟ್ ಮಂಡಳಿಯಿಂದ ವಾರ್ಷಿಕ ಎಷ್ಟು ಸಂಭಾವನೆ ಪಡೆಯುತ್ತಾರೆ ಎಂದು ಈ ಸುದ್ಧಿಯಲ್ಲಿ ತಿಳಿದುಕೊಳ್ಳೋಣ.
ನಾಲ್ಕನೇ ಶ್ರೀಮಂತ ಕ್ರಿಕೆಟ್ ಮಂಡಳಿ ಎನಿಸಿಕೊಂಡಿರುವ ಪಾಕಿಸ್ತಾನ ಎ, ಬಿ, ಸಿ, ಡಿ ಮಾದರಿಯಲ್ಲಿ ಆಟಗಾರರೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತದೆ. ಈ ನಾಲ್ಕು ಪಟ್ಟಿಯಲ್ಲಿರುವ ಆಟಗಾರರು ವಾರ್ಷಿಕವಾಗಿ ಲಕ್ಷಾಂತರ ರೂಪಾಯಿ ಸಂಭಾವನೆ ಪಡೆದುಕೊಳ್ಳುತ್ತಾರೆ. ಈ ಬಗ್ಗೆ ಪಿಸಿಬಿ ಮಾಹಿತಿಯೊಂದನ್ನು ಹಂಚಿಕೊಂಡಿದ್ದು, 3 ವರ್ಷಗಳ (1 ಜುಲೈ 2023 ರಿಂದ 30 ಜೂನ್ 2026) ಪುರುಷರ ಒಪ್ಪಂದದ ಪಟ್ಟಿಯಲ್ಲಿ ಆಟಗಾರರು ಪಡೆಯುತ್ತಿರುವ ಸಂಭಾವನೆ ಬಗ್ಗೆ ತಿಳಿಸಿದೆ.
ಪಿಸಿಬಿಯ A ನಿಂದ D ಪಟ್ಟಿಯಲ್ಲಿರುವ ಆಟಗಾರರು
A ಕೆಟಗರಿ:ಬಾಬರ್ ಅಜಮ್, ಮೊಹಮ್ಮದ್ ರಿಜ್ವಾನ್ ಮತ್ತು ಶಾಹೀನ್ ಶಾ ಆಫ್ರಿದಿ.
B ಕೆಟಗರಿ:ಫಖರ್ ಜಮಾನ್, ಹ್ಯಾರಿಸ್ ರೌಫ್, ಇಮಾಮ್-ಉಲ್-ಹಕ್, ಮೊಹಮ್ಮದ್ ನವಾಜ್, ನಸೀಮ್ ಶಾ ಮತ್ತು ಶಾದಾಬ್ ಖಾನ್.
C ಕೆಟಗರಿ:ಇಮಾದ್ ವಾಸಿಂ ಮತ್ತು ಅಬ್ದುಲ್ಲಾ ಶಫೀಕ್