ನವದೆಹಲಿ : ಭಾರತೀಯ ಕ್ರಿಕೆಟ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ತಮ್ಮ ಅತ್ಯುತ್ತಮ ಪ್ರದರ್ಶನ ಮತ್ತು ವ್ಯಕ್ತಿತ್ವದಿಂದಾಗಿ ಎಲ್ಲಾ ಅಭಿಮಾನಿಗಳ ಹೃದಯವನ್ನು ಗೆದ್ದಿದ್ದಾರೆ. ಕಿಂಗ್ ಕೊಹ್ಲಿ ತಮ್ಮ ಬ್ಯಾಟಿಂಗ್ ಮೂಲಕ ಕೋಟ್ಯಂತರ ಜನರ ಹೃದಯ ಮುಟ್ಟಿದ ಆಟಗಾರ ಆಗಿ ಹೊರ ಹೊಮ್ಮಿದ್ದಾರೆ. ಕೊಹ್ಲಿ ತಮ್ಮ ಬ್ಯಾಟಿಂಗ್ ಮೂಲಕ ಹಲವು ಪ್ರಮುಖ ಸಂದರ್ಭಗಳಲ್ಲಿ ಟೀಂ ಇಂಡಿಯಾವನ್ನು ಗೆಲುವಿನತ್ತ ಮುನ್ನಡೆಸಿದ್ದಾರೆ. ಮೈದಾನದಲ್ಲಿ ಕೊಹ್ಲಿ ಯಾವಾಗಲೂ ನಂಬರ್ 1. ಆದರೆ ಈಗ ಮೈದಾನದ ಹೊರಗೂ ಕಿಂಗ್ ಕೊಹ್ಲಿಯ ಮೋಡಿ ಮುಂದುವರಿದಿದೆ.
ವರದಿಯ ಪ್ರಕಾರ, ಜೂನ್ 2024ರಲ್ಲಿ ವಿರಾಟ್ ಕೊಹ್ಲಿ ಭಾರತದ ಅತ್ಯಂತ ಪ್ರಸಿದ್ಧ ಆಟಗಾರ. ಖ್ಯಾತಿಯ ವಿಷಯದಲ್ಲಿ ಅವರು ಕ್ರಿಕೆಟ್ ಮಾತ್ರವಲ್ಲದೇ ಕ್ರೀಡಾ ಆಟಗಾರರ ಮೇಲೂ ಗೆಲುವು ಸಾಧಿಸಿದ್ದಾರೆ. ವಿರಾಟ್ ಕೊಹ್ಲಿ ಈ ವರ್ಷದ ವಿಶ್ವದ ಅತ್ಯಂತ ಪ್ರತಿಷ್ಠಿತ ಲೀಗ್ ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ. ಇದಲ್ಲದೇ, ಅವರು T20 ವಿಶ್ವಕಪ್ 2024 ರ ಫೈನಲ್‌ನಲ್ಲಿ ಅದ್ಭುತ ಅರ್ಧಶತಕವನ್ನು ಗಳಿಸಿ, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಕೊಹ್ಲಿಯನ್ನು ಹೊರತುಪಡಿಸಿ ಟಾಪ್-3 ಅತ್ಯಂತ ಪ್ರಸಿದ್ಧ ಆಟಗಾರರಲ್ಲಿ ಕ್ರಿಕೆಟಿಗರೂ ಇದ್ದಾರೆ. ಕೊಹ್ಲಿ ನಂತರ, ಎಂಎಸ್ ಧೋನಿ ಜೂನ್ ತಿಂಗಳಿನಲ್ಲಿ ಭಾರತದ ಎರಡನೇ ಅತ್ಯಂತ ಪ್ರಸಿದ್ಧ ಆಟಗಾರರಾಗಿ ಹೊರ ಹೊಮ್ಮಿದ್ದಾರೆ. ನಿವೃತ್ತಿಯ ನಂತರವೂ ಎಂಎಸ್ ಧೋನಿ ಆಳ್ವಿಕೆ ಮುಂದುವರೆದಿದೆ. ಆದಾಗ್ಯೂ, ಐಪಿಎಲ್ 2024ರಲ್ಲಿ ಎಂಎಸ್ ಧೋನಿ ಚೆನ್ನೈ ತಂಡದ ನಾಯಕತ್ವವನ್ನು ರಿತುರಾಜ್ ಗಾಯಕ್ವಾಡ್‌ಗೆ ಹಸ್ತಾಂತರಿಸಿದ್ದಾರೆ. ಕ್ರಿಕೆಟ್ಲೋಕದಲ್ಲಿ ಅವರಿಗೆ ಇಂದಿಗೂ ಅವರದ್ದೇ ಆದ ಅತಿದೊಡ್ಡ ಸ್ಥಾನವಿದೆ. ಮಿಸ್ಟರ್ ಕೂಲ್ ಅಂತಲೇ ಅವರು ಜನಜನಿತ.