Virat Kohli Viral Video: ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿ ಮುಗಿದ ಬಳಿಕ ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಮುಂಬೈನಲ್ಲಿದ್ದಾರೆ. ಶುಕ್ರವಾರ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಅವರೊಂದಿಗೆ ಹೋಟೆಲ್ವೊಂದರ ಮುಂದೆ ಕಾಣಿಸಿಕೊಂಡರು. ಈ ವೇಳೆ ವಿರಾಟ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಅಭಿಮಾನಿಗಳ ದಂಡೇ ನೆರೆದಿತ್ತು.
ಇದೇ ವೇಳೆ ಮಹಿಳಾ ಅಭಿಮಾನಿಯೊಬ್ಬರು ವಿರಾಟ್ ಅವರ ಕೈ ಹಿಡಿದು ಎಳೆದು ಫೋಟೋಗಾಗಿ ಕೇಳಿಕೊಂಡಿದ್ದಾರೆ. ಈ ವೇಳೆ ಕೆಲ ಕ್ಷಣ ತಬ್ಬಿಬ್ಬಾದ ವಿರಾಟ್ ಬಳಿಕ ಅಭಿಮಾನಿ ಜೊತೆ ನಿಂತು ಫೋಟೋ ಕ್ಲಿಕ್ಕಿಸಿಕೊಂಡರು. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಅಭಿಮಾನಿಗಳ ಮಾತಿಗೆ ವಿರಾಟ್ ಸಹಮತ ವ್ಯಕ್ತಪಡಿಸಿದರು.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ 28 ಸೆಕೆಂಡ್ಗಳ ವಿಡಿಯೋದಲ್ಲಿ ಮಹಿಳಾ ಅಭಿಮಾನಿಯೊಬ್ಬರು ವಿರಾಟ್ ಕೊಹ್ಲಿಗೆ ಫೋಟೋ ನೀಡುವಂತೆ ಮನವಿ ಮಾಡಿರುವುದನ್ನು ಕಾಣಬಹುದಾಗಿದೆ. ಈ ಸಮಯದಲ್ಲಿ, ಅಭಿಮಾನಿಗೆ ಕ್ಯಾಮರಾದ ಬಗ್ಗೆ ಏನೂ ಅರ್ಥವಾಗದಿದ್ದಾಗ, ಫೋನ್ ಅನ್ನು ಬೇರೆಯವರಿಗೆ ನೀಡಲು ಮುಂದಾಗುತ್ತಾರೆ. ಈ ವೇಳೆ ವಿರಾಟ್ ಕೊಹ್ಲಿ ಹೊರಡಲು ಆರಂಭಿಸಿದಾಗ ವಿರಾಟ್ ಕೊಹ್ಲಿ ಕೈಹಿಡಿದು ತಡೆಯುತ್ತಾರೆ. ಇದಾದ ನಂತರ ವಿರಾಟ್ ಕೊಹ್ಲಿ ಮಹಿಳೆಯೊಂದಿಗೆ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಾರೆ.
ಕೊಹ್ಲಿ ಇತ್ತೀಚೆಗೆ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಡಿದ್ದರು. ಆದರೆ, ಇಡೀ ಸರಣಿಯಲ್ಲಿ ಅವರ ಬ್ಯಾಟ್ ಮೌನಕ್ಕೆ ಶರಣಾಗಿತ್ತು. ಅವರು 3 ಟೆಸ್ಟ್ ಪಂದ್ಯಗಳಲ್ಲಿ ಕೇವಲ 93 ರನ್ ಗಳಿಸಿದ್ದರು. ಇದರಲ್ಲಿ 1 ಅರ್ಧಶತಕ ಸೇರಿತ್ತು. ಬೆಂಗಳೂರಿನಲ್ಲಿ ನಡೆದ ಮೊದಲ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ವಿರಾಟ್ ಖಾತೆ ತೆರೆಯಲು ವಿಫಲರಾದರು. ಎರಡನೇ ಇನ್ನಿಂಗ್ಸ್‌ನಲ್ಲಿ ಕಮ್ಬ್ಯಾಕ್ ಮಾಡಿ 70 ರನ್ ಗಳಿಸಿದ್ದರು.
ನಂತರ ಎರಡು ಮತ್ತು ಮೂರನೇ ಟೆಸ್ಟ್‌ನಲ್ಲಿ ಕೊಹ್ಲಿ ಅಬ್ಬರಿಸಲಿದ್ದಾರೆ ಎಂದೇ ಅಭಿಮಾನಿಗಳು ಅಂದುಕೊಂಡಿದ್ದರು. ಆದರೆ ಅವರ ಆಸೆ ಮಾತ್ರ ಈಡೇರಲಿಲ್ಲ. ಎರಡನೇ ಟೆಸ್ಟ್‌ನಲ್ಲಿ ಕೊಹ್ಲಿ ರನ್ ಗಳಿಸುವಲ್ಲಿ ವಿಫಲರಾದರು. ಮೊದಲ ಇನ್ನಿಂಗ್ಸ್‌ನಲ್ಲಿ 1ರನ್ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 17 ರನ್ ಗಳಿಸಿದ್ದರು. ಬಳಿಕ ಮೂರನೇ ಟೆಸ್ಟ್ನಲ್ಲೂ ಕೊಹ್ಲಿ ಬ್ಯಾಟ್ ಕೆಲಸ ಮಾಡಲಿಲ್ಲ. ಮುಂಬೈನಲ್ಲಿ ನಡೆದ ಕೊನೆಯ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ವಿರಾಟ್ 4 ರನ್ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 1 ರನ್ ಗಳಿಸಿ ಪೆವಿಲಿಯನ್ ಸೇರಿದ್ದರು. ಹಿರಿಯ ಬ್ಯಾಟರ್ಗಳ ವೈಫಲ್ಯದಿಂದಾಗಿ ಭಾರತ ಕ್ಲೀನ್ ಸ್ವೀಪ್ ಆಗಿ ಸರಣಿಯನ್ನು ಕೈಚೆಲ್ಲಿತು.
ಇದನ್ನೂ ಓದಿ:ಒಂದು ಶತಕ, ಹಲವು ದಾಖಲೆ: ಸಂಜು ಆರ್ಭಟಕ್ಕೆ ರೋಹಿತ್, ಸೂರ್ಯ, ಯುವರಾಜ್ ಸಿಂಗ್ ರೆಕಾರ್ಡ್ ಉಡೀಸ್!