Urvil Patel:ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಭಾಗವಾಗಿ ಇಂದು ಉತ್ತರಾಖಂಡ್ ಮತ್ತು ಗುಜರಾತ್ ತಂಡಗಳು ಮುಖಾಮುಖಿಯಾದವು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಉತ್ತರಾಖಂಡ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 182 ರನ್ ಕಲೆ ಹಾಕಿತು. ತಂಡದ ಪರ ಸಮರ್ಥ ಆರ್ (54), ತಾರೆ (54) ಅರ್ಧಶತಕ ಸಿಡಿಸಿದರೆ, ಕುನಾಲ್ ಚಂಡೇಲ 43 ರನ್ಗಳ ಕೊಡುಗೆ ನೀಡಿದರು. ಈ ಮೂವರ ಬ್ಯಾಟಿಂಗ್ ನೆರವಿನಿಂದ ಉತ್ತರಾಖಂಡ ಎದುರಾಳಿ ತಂಡಕ್ಕೆ ಸ್ಪರ್ಧಾತ್ಮಕ ಗುರಿ ನೀಡಿತು.
ಈ ಗುರಿ ಬೆನ್ನತ್ತಿದ ಗುಜರಾತ್ ತಂಡ ಉರ್ವಿಲ್ ಪಟೇಲ್ ಅವರ ಸ್ಫೋಟಕ ಶತಕದಿಂದ ಕೇವಲ 13.1 ಓವರ್ಗಳಲ್ಲೇ ಗೆಲುವಿನ ದಡ ಸೇರಿತು. ಉರ್ವಿಲ್ 41 ಎಸೆತಗಳನ್ನು ಎದುರಿಸಿ 8 ಬೌಂಡರಿ, 11 ಸಿಕ್ಸರ್ ನೆರವಿನಿಂದ 280.48 ಸ್ಟ್ರೈಕ್ ರೇಟ್‌ನೊಂದಿಗೆ ಅಜೇಯ 115 ರನ್ ಪೇರಿಸಿದರು. 38 ಎಸೆತಗಳಲ್ಲೇ ಉರ್ವಿಲ್ ಶತಕ ಪೂರೈಸಿದ್ದು ವಿಶೇಷ.
ಇದನ್ನೂ ಓದಿ:22ನೇ ವಯಸ್ಸಿನಲ್ಲಿ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದ ಭಾರತೀಯ ಕ್ರಿಕೆಟರ್ ಈಗ ₹70 ಸಾವಿರ ಕೋಟಿ ಆಸ್ತಿಗೆ ಒಡೆಯ!
ಇದು ಒಂದು ವಾರದಲ್ಲಿ ಅವರ ಬ್ಯಾಟ್ನಿಂದ ಮೂಡಿಬಂದ ಎರಡನೇ ಶತಕ. ಇದಕ್ಕೂ ಮುನ್ನ ಮಂಗಳವಾರ ನಡೆದ ಪಂದ್ಯದಲ್ಲಿ ತ್ರಿಪುರಾ ವಿರುದ್ಧ ಕೇವಲ 28 ಎಸೆತಗಳಲ್ಲೇ ಶತಕ ಸಿಡಿಸಿ ರಿಷಭ್ ಪಂತ್ ಅವರ ದಾಖಲೆ ಮುರಿದಿದ್ದರು. 2018ರಲ್ಲಿ ದೆಹಲಿ ಪರ ಆಡುವಾಗ ಪಂತ್ ಹಿಮಾಚಲ ಪ್ರದೇಶದ ವಿರುದ್ಧ ವೇಗದ ಶತಕ ಸಿಡಿಸಿದ್ದರು. 32 ಎಸೆತಗಳಲ್ಲಿ 100 ರನ್ ಗಳಿಸಿದ್ದರು.
ಉರ್ವಿಲ್ ವಿಶ್ವದಾಖಲೆ:ಟಿ20 ಇತಿಹಾಸದಲ್ಲೇ 40ಕ್ಕೂ ಕಡಿಮೆ ಎಸೆತಗಳಲ್ಲಿ ಒಂದೇ ವಾರದಲ್ಲಿ ಎರಡು ಶತಕ ಸಿಡಿಸಿದ ಮೊದಲ ಬ್ಯಾಟರ್ ಎಂಬ ದಾಖಲೆಯನ್ನು ಉರ್ವಿಲ್ ಬರೆದಿದ್ದಾರೆ. ಈ ಮಧ್ಯೆ, ಕಳೆದ ಐಪಿಎಲ್ ಸೀಸನ್ನಲ್ಲಿ ಗುಜರಾತ್ ಟೈಟಾನ್ಸ್‌ನ ಭಾಗವಾಗಿದ್ದ ಇವರನ್ನು ಈ ಸಲದ ಮೆಗಾ ಹರಾಜಿನಲ್ಲಿ ಯಾವುದೇ ತಂಡಗಳು ಖರೀದಿಸಿಲ್ಲ. ಇದೀಗ ಬ್ಯಾಟಿಂಗ್ನಿಂದಲೇ ಎಲ್ಲಾ ಫ್ರಾಂಚೈಸಿಗಳಿಗೆ ಉತ್ತರ ನೀಡಿದ್ದಾರೆ.
ಟಿ20 ಕ್ರಿಕೆಟ್‌ನಲ್ಲಿ ವೇಗದ ಶತಕವೀರರು:
- 27 ಎಸೆತ - ಸಾಹಿಲ್ ಚೌಹಾಣ್ (ಎಸ್ಟೋನಿಯಾ VS ಸೈಪ್ರಸ್, 2024)
- 28 ಎಸೆತ - ಉರ್ವಿಲ್ ಪಟೇಲ್ (ಗುಜರಾತ್ VS ತ್ರಿಪುರ, 2024)
- 30 ಎಸೆತ - ಕ್ರಿಸ್ ಗೇಲ್ (ರಾಯಲ್ ಚಾಲೆಂಜರ್ಸ್ ಬೆಂಗಳೂರು VS ಪುಣೆ ವಾರಿಯರ್ಸ್, 2013)
- 32 ಎಸೆತ - ರಿಷಭ್ ಪಂತ್ (ದೆಹಲಿ VS ಹಿಮಾಚಲ ಪ್ರದೇಶ, 2018)
- 33 ಎಸೆತ - ಡಬ್ಲ್ಯೂ ಲುಬ್ಬೆ (ನಾರ್ತ್ ವೆಸ್ಟ್ VS ಲಿಂಪೊಪೊ, 2018)
- 33 ಎಸೆತ - ಜಾನ್ ನಿಕೋಲ್ ಲಾಫ್ಟಿ-ಈಟನ್ (ನಮೀಬಿಯಾ VS ನೇಪಾಳ, 2024)
ಇದನ್ನೂ ಓದಿ:ವಿರಾಟ್ ಕೊಹ್ಲಿ ಕುಡಿಯುವ Black Water ಎಷ್ಟು ದುಬಾರಿ ಗೊತ್ತಾ: ಬೆಲೆ ಕೇಳಿದ್ರೆ ಬೆರಗಾಗ್ತೀರ!