ಕರ್ನಾಟಕ

karnataka

ETV Bharat / sports

ಸಂಡೇ ಡಬಲ್​ ಧಮಾಕ!: ಎಂಟು ಗಂಟೆಗಳಲ್ಲಿ ಎರಡು ಟಿ20 ಪಂದ್ಯಗಳನ್ನು ಆಡಲಿರುವ ಟೀಮ್​ ಇಂಡಿಯಾ; ಎಲ್ಲಿ, ಯಾರ ಜೊತೆ? - T20 Cricket - T20 CRICKET

ನಾಳೆ ಕ್ರಿಕೆಟ್​ ಅಭಿಮಾನಿಗಳು ಡಬಲ್​ ಮನೊರಂಜನೆ ಪಡೆಯಲಿದ್ದಾರೆ. ಒಂದೇ ದಿನ ಟೀಮ್​ ಇಂಡಿಯಾ ಎರಡು ಟಿ20 ಪಂದ್ಯಗಳನ್ನು ಆಡಲಿದೆ. ಯಾವಾಗ, ಯಾರ ಜೊತೆ, ನೇರಪ್ರಸಾರ ಎಲ್ಲಿ ಅನ್ನೋದರ ಕುರಿತ ಮಾಹಿತಿ ಇಲ್ಲಿದೆ.

ಭಾರತ ಕ್ರಿಕೆಟ್​ ತಂಡ
ಭಾರತ ಕ್ರಿಕೆಟ್​ ತಂಡ (ANI)

By ETV Bharat Sports Team

Published : Oct 5, 2024, 1:52 PM IST

Updated : Oct 5, 2024, 4:44 PM IST

ಹೈದರಾಬಾದ್​: ಭಾನುವಾರ ಭಾರತೀಯ ಕ್ರಿಕೆಟ್​ ಅಭಿಮಾನಿಗಳು ಡಬಲ್​ ಮನೊರಂಜನೆ ಪಡೆಯಲಿದ್ದಾರೆ. ಏಕೆಂದರೆ ಒಂದೇ ದಿನ ಟೀಮ್​ ಇಂಡಿಯಾ ಎರಡು ಟಿ20 ಪಂದ್ಯಗಳನ್ನು ಆಡಲಿದೆ. ಹೌದು, ನಾಳೆ ನಡೆಯಲಿರುವ ಟಿ20 ವಿಶ್ವಕಪ್​ನಲ್ಲಿ ಮಹಿಳಾ ತಂಡ ಕಣಕ್ಕಿಳಿಯಲಿದ್ದು, ಅದೇ ದಿನ ಭಾರತ ಪುರುಷರ ತಂಡ ಕೂಡ ಟಿ20 ಪಂದ್ಯವನ್ನು ಆಡಲಿದೆ. ಹಾಗಾದ್ರೆ ಬನ್ನಿ ಯಾರ ವಿರುದ್ಧ, ಎಷ್ಟು ಗಂಟೆಗೆ, ಮತ್ತು ಎರಡೂ ಪಂದ್ಯಗಳನ್ನು ಉಚಿತವಾಗಿ ಹೇಗೆ ವೀಕ್ಷಿಸುವುದು ಅನ್ನೋದನ್ನು ಈ ಸುದ್ದಿಯಲ್ಲಿ ತಿಳಿದುಕೊಳ್ಳಿ.

ಮಹಿಳಾ ಟಿ20​:ನಾಳೆ (ಅ.6) ನಡೆಯಲಿರುವ ಮಹಿಳಾ ಟಿ20 ವಿಶ್ವಕಪ್​ನ ಮೊದಲ ಪಂದ್ಯದಲ್ಲಿ ಭಾರತದ ವನಿತೆಯರು ಪಾಕಿಸ್ತಾನವನ್ನು ಎದುರಿಸಲಿದ್ದಾರೆ. ಈ ಪಂದ್ಯ ಮಧ್ಯಾಹ್ನ 3ಕ್ಕೆ ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಆರಂಭವಾಗಲಿದೆ.

ಭಾರತ Vs ಪಾಕಿಸ್ತಾನ (ANI)

ಪಂದ್ಯ ವೀಕ್ಷಣೆ ಎಲ್ಲಿ:ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಈ ಪಂದ್ಯ ನೇರಪ್ರಸಾರವಾಗಲಿದ್ದು, ಡಿಸ್ನಿಹಾಟ್ ಸ್ಟಾರ್​ನಲ್ಲಿ ಲೈವ್ ಸ್ಟ್ರೀಮಿಂಗ್ ಆಗಲಿದೆ.

ಎರಡನೇ ಪಂದ್ಯ:ನಾಳೆಯ ಎರಡನೇ ಪಂದ್ಯದಲ್ಲಿ ಭಾರತ ಪುರುಷರ ತಂಡ ಬಾಂಗ್ಲಾದೇಶ ವಿರುದ್ಧ ಸೆಣಸಲಿದೆ. ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೂರು T20 ಸರಣಿಯ ಮೊದಲ ಪಂದ್ಯ ಇದಾಗಿದೆ.

ಭಾರತ Vs ಬಾಂಗ್ಲಾದೇಶ (ANI)

ಪಂದ್ಯ ಎಲ್ಲಿ:ಉಭಯ ತಂಡಗಳ ನಡುವಿನ ಮೊದಲ ಟಿ20 ಪಂದ್ಯ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿರುವ ಶ್ರೀಮಂತ್ ಮಾಧವರಾವ್ ಸಿಂಧಿಯಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ.

ಎಷ್ಟು ಗಂಟೆಗೆ:ಈ ಪಂದ್ಯ ಸಂಜೆ 7 ಗಂಟೆಗೆ ಆರಂಭವಾಗಲಿದೆ.

ನೇರಪ್ರಸಾರ ಎಲ್ಲಿ:ಈ ಪಂದ್ಯವನ್ನು ಸ್ಪೋರ್ಟ್ಸ್​ 18 ಚಾನೆಲ್​ನಲ್ಲಿ ಉಚಿತವಾಗಿ ವೀಕ್ಷಿಸಬಹುದಾಗಿದ್ದು, OTT ಪ್ಲಾಟ್‌ಫಾರ್ಮ್​ ಆದ Jio ಸಿನಿಮಾ ಮತ್ತು ವೆಬ್‌ಸೈಟ್‌ನಲ್ಲಿ ಪಂದ್ಯ ಲೈವ್ ಸ್ಟ್ರೀಮ್ ಆಗಲಿದೆ.

ಇದನ್ನೂ ಓದಿ:ವಿರಾಟ್​ ಕೊಹ್ಲಿ ಧರಿಸುವ 'ಸನ್​ ಗ್ಲಾಸ್​' ಬೆಲೆ ಎಷ್ಟು ಗೊತ್ತಾ: ಕೇಳಿದ್ರೆ ದಂಗಾಗ್ತೀರ! - Price of Kohli sunglasses

Last Updated : Oct 5, 2024, 4:44 PM IST

ABOUT THE AUTHOR

...view details