ಕರ್ನಾಟಕ

karnataka

ETV Bharat / sports

T20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಗೆದ್ದ ಟಾಪ್ 10 ತಂಡಗಳು: ಭಾರತಕ್ಕೆ ಎಷ್ಟನೇ ಸ್ಥಾನ? - MOST WINS TEAM IN T20I CRICKET

ಟಿ20 ಕ್ರಿಕೆಟ್​ನಲ್ಲಿ ಹೆಚ್ಚು ಪಂದ್ಯಗಳನ್ನು ಗೆದ್ದಿರುವ ಟಾಪ್​ 10 ತಂಡಗಳಲ್ಲಿ ಟೀಂ ಇಂಡಿಯಾ ಕೂಡ ಸ್ಥಾನ ಪಡೆದಿದೆ.

ಟಿ20ಯಲ್ಲಿ ಹೆಚ್ಚು ಪಂದ್ಯ ಗೆದ್ದ ತಂಡಗಳು
ಟಿ20ಯಲ್ಲಿ ಹೆಚ್ಚು ಪಂದ್ಯ ಗೆದ್ದ ತಂಡಗಳು (IANS)

By ETV Bharat Sports Team

Published : Nov 16, 2024, 11:36 AM IST

Teams with Most Wins in T20I Cricket: ಇತ್ತೀಚಿನ ದಿನಗಳಲ್ಲಿ ಟಿ20 ಸ್ವರೂಪ ಹೆಚ್ಚು ಖ್ಯಾತಿ ಪಡೆದುಕೊಳ್ಳುತ್ತಿದೆ. ದೇಶ ಮತ್ತು ವಿದೇಶಗಳಲ್ಲಿ ಟಿ20 ಹೆಚ್ಚಿನ ಜನ ಪ್ರಿಯತೆಯನ್ನು ಕಂಡಿದೆ. ODI ಮತ್ತು ಟೆಸ್ಟ್​ ಸರಣಿಗಿಂತಲೂ ಹೆಚ್ಚಿನ ಜನರು ಟಿ20 ಪಂದ್ಯಾವಳಿಗಳನ್ನು ಇಷ್ಟ ಪಡುತ್ತಾರೆ. ಈ ಹಿಂದೆ ವರ್ಷದಲ್ಲಿ ಕಡಿಮೆ ಪಂದ್ಯಗಳು ನಡೆಯುತ್ತಿದ್ದವು. ಆದರೆ ಇದರ ಮೇಲಿನ ಕ್ರೇಜ್​ ಹೆಚ್ಚಾದ ಕಾರಣ ಇದೀಗ ವರ್ಷಕ್ಕೆ 50ಕ್ಕೂ ಹೆಚ್ಚಿನ ಟಿ20 ಪಂದ್ಯಗಳು ನಡೆಯುತ್ತವೆ.

ಸದ್ಯ ಜಗತ್ತಿನಾದ್ಯಂತ ಒಟ್ಟು 103 ತಂಡಗಳು ಈ ಮಾದರಿಯಲ್ಲಿ ಆಡುತ್ತಿವೆ. ಆದರೆ ಯಾವ ತಂಡ ಟಿ20ಯಲ್ಲಿ ಹೆಚ್ಚು ಗೆಲುವು ಸಾಧಿಸಿ ಅಗ್ರಸ್ಥಾನದಲ್ಲಿದೆ ಎಂದು ನಿಮಗೆ ಗೊತ್ತಾ?. ಹಾಗಾದ್ರೆ ಬನ್ನಿ T20I ನಲ್ಲಿ 100ಕ್ಕೂ ಹೆಚ್ಚು ಪಂದ್ಯಗಳನ್ನು ಗೆದ್ದ ತಂಡಗಳು ಯಾವುವು ಎಂದು ತಿಳಿಯೋಣ.

ಟಿ20 ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಗೆಲುವು ಸಾಧಿಸಿದ ಟಾಪ್​ 10 ತಂಡಗಳ

ಐರ್ಲೆಂಡ್​ (IANS)

10. ಐರ್ಲೆಂಡ್​:ಟಿ20 ಸ್ವರೂಪದಲ್ಲಿ ಬಾಂಗ್ಲಾದೇಶ ಮತ್ತು ಜಿಂಬಾಬ್ವೆ ತಂಡಗಳಿಗಿಂತ ಐರ್ಲೆಂಡ್ ಹೆಚ್ಚು ಪಂದ್ಯಗಳನ್ನು ಗೆದ್ದುಕೊಂಡಿದೆ. 2008ರಲ್ಲಿ T20ಆರಂಭಿಸಿದ ಇದು ಈವರೆಗೆ ಒಟ್ಟು 171 ಪಂದ್ಯಗಳನ್ನು ಆಡಿದೆ. ಇದರಲ್ಲಿ 72 ಪಂದ್ಯಗಳಲ್ಲಿ ಗೆದ್ದಿದೆ. 90 ಪಂದ್ಯಗಳಲ್ಲಿ ಸೋಲನುಭವಿಸಿದೆ. ಎರಡು ಪಂದ್ಯ ಡ್ರಾನಲ್ಲಿ ಅಂತ್ಯಗೊಂಡರೆ, ಏಳು ಪಂದ್ಯಗಳು ರದ್ದಾಗಿವೆ.

9. ಅಫ್ಘಾನಿಸ್ತಾನ:2010ರಲ್ಲಿ ​ಟಿ20 ಆಡಲು ಪ್ರಾರಂಭಿಸಿದ ಅಫ್ಘಾನ್​ 20224ರ ವರೆಗೆ ಒಟ್ಟು 138 ಪಂದ್ಯಗಳನ್ನು ಆಡಿ 84ರಲ್ಲಿ ಗೆಲುವು 51 ಪಂದ್ಯಗಳಲ್ಲಿ ಸೋಲನುಭವಿಸದೆ. ಎರಡು ಡ್ರಾ, ಒಂದು ಪಂದ್ಯ ಫಲಿತಾಂಶವಿಲ್ಲದೆ ಕೊನೆಗೊಂಡಿದೆ.

8. ಶ್ರೀಲಂಕಾ:ಜೂನ್ 2006ರಲ್ಲಿ ಟಿ20ಗೆ ಪಾದಾರ್ಪಣೆ ಮಾಡಿದ್ದ ಶ್ರೀಲಂಕಾ 2014ರಲ್ಲಿ ಚಾಂಪಿಯನ್​ ಆಗಿ ಹೊರಹೊಮ್ಮಿತ್ತು. ಇದುವರೆಗೆ ಒಟ್ಟು 200 ಪಂದ್ಯಗಳನ್ನು ಆಡಿ, 89ರಲ್ಲಿ ಗೆಲುವು, 104 ಸೋಲನುಭವಿಸಿದೆ. ಐದು ಡ್ರಾ, ಎರಡು ಪಂದ್ಯ ರದ್ದಾಗಿವೆ.

7 ವೆಸ್ಟ್​ ಇಂಡೀಸ್​:ಫೆಬ್ರವರಿ 2006ರಲ್ಲಿ ವೆಸ್ಟ್​ ಇಂಡೀಸ್​ ಟಿ20ಗೆ ಪಾದಾರ್ಪಣೆ ಮಾಡಿತ್ತು. 2012-2016 ಎರಡು ಬಾರಿ ವಿಶ್ವಕಪ್ ಗೆದ್ದಿತ್ತು. ಈ ಮಾದರಿಯಲ್ಲಿ ಒಟ್ಟು 208 ಪಂದ್ಯಗಳನ್ನು ಆಡಿದೆ. 92 ಗೆಲುವು, 103 ಸೋಲು, ಮೂರು ಟೈ ಮತ್ತು 10 ಪಂದ್ಯ ಫಲಿತಾಂಶವಿಲ್ಲದೇ ಕೊನೆಗೊಂಡಿವೆ.

6. ಇಂಗ್ಲೆಂಡ್​:ಕ್ರಿಕೆಟ್​ ಅನ್ನು ಜಗತ್ತಿಗೆ ಪರಿಚಯಿಸಿದ 2005ರಲ್ಲಿ ಟಿ20 ಜರ್ನಿ ಆರಂಭಿಸಿತು. 2010ಮತ್ತು 2022ರಲ್ಲಿ ಎರಡು ಬಾರಿ ವಿಶ್ವಕಪ್ ಸಹ ಗೆದ್ದಿತು. ಇಲ್ಲಿಯವರೆಗೆ 197 ಪಂದ್ಯಗಳನ್ನು ಆಡಿ, 104ರಲ್ಲಿ ಗೆಲುವು ಸಾಧಿಸಿದೆ.

5. ದಕ್ಷಿಣ ಆಫ್ರಿಕಾ:ಇದುವರೆಗೂಒಟ್ಟು 194 ಟಿ20 ಪಂದ್ಯಗಳನ್ನು ಆಡಿರುವ ಹರಿಣ ಪಡೆ, 83 ಸೋಲಿನೊಂದಿಗೆ 106 ಗೆಲುವಿನೊಂದಿಗೆ ಒಂದು ಡ್ರಾ ಮತ್ತು ಮೂರು ಪಂದ್ಯ ಫಲಿತಾಂಶವಿಲ್ಲದೆ ಕೊನೆಗೊಂಡಿವೆ.

ಆಸ್ಟ್ರೇಲಿಯಾ (IANS)

4. ಆಸ್ಟ್ರೇಲಿಯಾ:2005ರಲ್ಲಿ ಮೊದಲ ಅಧಿಕೃತ ಟಿ20 ಪಂದ್ಯವನ್ನು ಆಡಿದ್ದ ಆಸ್ಟ್ರೇಲಿಯಾ 2021ರಲ್ಲಿ ಯುಎಇಯಲ್ಲಿ ಮೊದಲ T20 ವಿಶ್ವಕಪ್ ಗೆದ್ದುಕೊಂಡಿತು. ಇದುವರೆಗೆ ಆಸ್ಟ್ರೇಲಿಯಾ 201 ಟಿ20 ಪಂದ್ಯಗಳನ್ನು ಆಡಿ 110ರಲ್ಲಿ ಗೆಲುವು 84ರಲ್ಲಿ ಸೋಲನ್ನು ಕಂಡಿದೆ. ಮೂರು ಪಂದ್ಯ ಟೈ ಮತ್ತು ನಾಲ್ಕು ಫಲಿತಾಂಶವಿಲ್ಲದೆ ಕೊನೆಗೊಂಡಿವೆ.

ನ್ಯೂಜಿಲೆಂಡ್​ (IANS)

3. ನ್ಯೂಜಿಲೆಂಡ್​:ಕಿವೀಸ್​ ಇದುವರೆಗೂಒಟ್ಟು 222 ಪಂದ್ಯಗಳನ್ನು ಆಡಿ 112ರಲ್ಲಿ ಗೆಲುವು, 93ರಲ್ಲಿ ಸೋಲು, ಹತ್ತು ಡ್ರಾ ಮತ್ತು ಏಳು ಪಂದ್ಯ ಫಲಿತಾಂಶವಿಲ್ಲದೇ ಕೊನೆಗೊಂಡಿದೆ.

ಪಾಕಿಸ್ತಾನ (IANS)

2. ಪಾಕಿಸ್ತಾನ:2009ರಲ್ಲಿ ಮೊದಲ ಟಿ20 ಆಡಿದ್ದ ಪಾಕ್​ ಈವರೆಗೂ 246 ಪಂದ್ಯಗಳನ್ನು ಆಡಿದ್ದು,ಇದರಲ್ಲಿ 142 ಪಂದ್ಯ ಗೆಲುವು, 92ರಲ್ಲಿ ಸೋಲನುಭವಿಸಿದೆ. 4ಟೈ ಮತ್ತು 7 ಪಂದ್ಯ ರದ್ದಾಗಿವೆ.

ಟೀಂ ಇಂಡಿಯಾ (IANS)

1. ಭಾರತ:ವಿಶ್ವದ ಅತ್ಯಂತ ಬಲಿಷ್ಠ ತಂಡವಾಗಿರುವ ಟೀಂ ಇಂಡಿಯಾ ಈ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ. 2007ರಲ್ಲಿ ಚೊಚ್ಚಲ T20 ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿದ್ದ ಭಾರತ 2024ರಲ್ಲಿ ಎರಡನೇ ಕಪ್​ ಎತ್ತಿ ಹಿಡಿದು ವಿಶ್ವದ ಅತ್ಯುತ್ತಮ ತಂಡವಾಗಿ ಗುರುತಿಸಿಕೊಂಡಿದೆ.

ಎರಡು ಬಾರಿಯ ವಿಶ್ವ ಚಾಂಪಿಯನ್‌ ಭಾರತ ಇದುವರೆಗೂ 242 ಟಿ20 ಪಂದ್ಯಗಳನ್ನು ಆಡಿದೆ. ಇದರಲ್ಲಿ 160 ಪಂದ್ಯಗಳನ್ನು ಗೆದ್ದುಕೊಂಡಿದೆ. 70 ಪಂದ್ಯಗಳಲ್ಲಿ ಸೋಲನುಭವಿಸಿದೆ. ಆರು ಪಂದ್ಯಗಳು ಟೈ ಮತ್ತು ಆರು ಪಂದ್ಯ ಫಲಿತಾಂಶವಿಲ್ಲದೆ ಕೊನೆಗೊಂಡಿವೆ.

ಇದನ್ನೂ ಓದಿ:IND vs SA 4th T20: ಒಂದೇ ಪಂದ್ಯದಲ್ಲಿ 9 ದಾಖಲೆ ಬರೆದ ಟೀಂ ಇಂಡಿಯಾ, 18 ವರ್ಷದ ಕ್ರಿಕೆಟ್​​ ಇತಿಹಾಸದಲ್ಲೇ ಮೊದಲು!

ABOUT THE AUTHOR

...view details