ಹೈದರಾಬಾದ್: ಟೀಂ ಇಂಡಿಯಾದ ಸ್ಟಾರ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ಗೆ ವೇಗಿ ಅರ್ಷದೀಪ್ ಸಿಂಗ್ ಕ್ಷಮೆ ಕೇಳಿದ್ದಾರೆ. ಎರಡು ಕಿವಿಗಳನ್ನು ಹಿಡಿದು ಕ್ಷಮಿಸುವಂತೆ ಕೇಳಿದ್ದು ಇದರ ವಿಡಿಯೋವನ್ನು ಬಿಸಿಸಿಐ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಇಷ್ಟಕ್ಕೆ ಚಹಾಲ್ ಬಳಿ ಸಾರಿ ಕೇಳುವಂತಹ ತಪ್ಪು ಅರ್ಷದೀಪ್ ಏನು ಮಾಡಿದ್ದಾರೆ ಮತ್ತು ಏಕೆ ಕ್ಷಮೆ ಕೇಳಿದ್ದಾರೆ ಎಂದು ಇದೀಗ ತಿಳಿಯೋಣ.
ವಾಸ್ತವಾಗಿ, ಬುಧವಾರ ನಡೆದಿದ್ದ ಮೊದಲ ಟಿ20 ಪಂದ್ಯದಲ್ಲಿ ಭಾರತ ಭರ್ಜರಿ ಗೆಲುವು ಸಾಧಿಸಿತ್ತು. ಈ ಪಂದ್ಯದಲ್ಲಿ ಸ್ಟಾರ್ ವೇಗಿ ಅರ್ಷದೀಪ್ ಸಿಂಗ್ ಎರಡು ವಿಕೆಟ್ ಪಡೆದು ತಮ್ಮ ಶಕ್ತಿ ಪ್ರದರ್ಶಿಸಿ ದಾಖಲೆಯನ್ನು ಬರೆದಿದ್ದರು. ಇದರೊಂದಿಗೆ ಭಾರತದ ಪರ ಟಿ20ಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಗೆ ಪಾತ್ರರಾದರು. ಈ ಅನುಕ್ರಮದಲ್ಲಿ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ (96 ವಿಕೆಟ್) ದಾಖಲೆ ಮುರಿದರು.
ಅರ್ಷದೀಪ್ ಕೇವಲ 61 ಪಂದ್ಯಗಳಲ್ಲಿ 97 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಪ್ರಸ್ತುತ ಟಿ20ಯಲ್ಲಿ ಭಾರತದ ಅಗ್ರ ಬೌಲರ್ ಎನಿಸಿಕೊಂಡಿದ್ದಾರೆ. ಈ ಹಿಂದೆ ಚಹಾಲ್ 80 ಪಂದ್ಯಗಳನ್ನು ಆಡಿ 96 ವಿಕೆಟ್ ಪಡೆದಿದ್ದರು. ಫಿಲ್ ಸಾಲ್ಟ್ ಮತ್ತು ಬೆನ್ ಡಕೆಟ್ ಅವರ ವಿಕೆಟ್ ಪಡೆಯುತ್ತಿದ್ದಂತೆ ಅರ್ಷದೀಪ್ ಈ ಸಾಧನೆ ಮಾಡಿದರು. ಅರ್ಷದೀಪ್ ಪ್ರತಿ ಎರಡು ಓವರ್‌ಗಳಲ್ಲಿ 17.90ರ ಸರಾಸರಿಯಲ್ಲಿ ವಿಕೆಟ್ ಪಡೆಯುತ್ತಿದ್ದಾರೆ.