ಕರ್ನಾಟಕ

karnataka

ETV Bharat / sports

'ಐಸಿಸಿ ಪ್ಲೇಯರ್​ ಆಫ್​ ದಿ ಡಿಸೆಂಬರ್​': ಪ್ಯಾಟ್​ ಕಮಿನ್ಸ್​ ಹಿಂದಿಕ್ಕಿ ಪ್ರಶಸ್ತಿ ಗೆದ್ದ ಟೀಂ ಇಂಡಿಯಾ ಸ್ಟಾರ್​ ಆಟಗಾರ! - ICC PLAYER OF THE MONTH

ICC Player Of The Month Award: ಪ್ಯಾಟ್​ ಕಮಿನ್ಸ್​ ಹಿಂದಿಕ್ಕೆ ಭಾರತದ ಸ್ಟಾರ್​ ಬೌಲರ್​ ಐಸಿಸಿ ಪ್ಲೇಯರ್​ ಆಫ್​ ದಿ ಡಿಸೆಂಬರ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

ICC PLAYER OF THE MONTH AWARD  JASPRIT BUMRAH  ಐಸಿಸಿ ಪ್ಲೇಯರ್​ ಆಫ್​ ದಿ ಡಿಸೆಂಬರ್  ICC AWARD
Team India (IANS)

By ETV Bharat Sports Team

Published : Jan 14, 2025, 7:41 PM IST

ICC Player Of The Month Award: ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ನಡೆದ ಬಾರ್ಡರ್​ ಗವಾಸ್ಕರ್​ ಟ್ರೋಫಿ ಟೆಸ್ಟ್​ ಸರಣಿಯಲ್ಲಿ ಅತೀ ಹೆಚ್ಚು ವಿಕೆಟ್​ ಪಡೆದ ಬೌಲರ್​ ಎನಿಸಿಕೊಂಡಿರುವ ಜಸ್ಪ್ರೀತ್​ ಬುಮ್ರಾ, ಡಿಸೆಂಬರ್ 2024ರ ಐಸಿಸಿ ಪುರುಷರ ತಿಂಗಳ ಆಟಗಾರ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

ಈ ಪ್ರಶಸ್ತಿಗಾಗಿ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮ್ಮಿನ್ಸ್ ಮತ್ತು ಬುಮ್ರಾ ಮಧ್ಯೆ ಭಾರಿ ಪೈಪೋಟಿ ನಡೆದಿತ್ತು. ಅಂತಿಮವಾಗಿ ಬುಮ್ರಾ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ. ಟೀಮ್ ಇಂಡಿಯಾ ಪರ ಹೆಚ್ಚು ವಿಕೆಟ್‌ಗಳನ್ನು ಪಡೆದ ಮತ್ತು ಸರಣಿಯಲ್ಲೂ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿರುವ ಹಿನ್ನೆಲೆ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ.

ಬಾರ್ಡರ್ ಗವಾಸ್ಕರ್ ಸರಣಿಯಲ್ಲಿ ಅದ್ಭುತ ಪ್ರದರ್ಶನ:ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಜಸ್ಪ್ರೀತ್ ಬುಮ್ರಾ ಅದ್ಭುತ ಪ್ರದರ್ಶನ ನೀಡಿದ್ದರು. 5 ಪಂದ್ಯಗಳ 9 ಇನ್ನಿಂಗ್ಸ್‌ಗಳಲ್ಲಿ 13.06 ಸರಾಸರಿಯಲ್ಲಿ ಒಟ್ಟು 32 ವಿಕೆಟ್‌ಗಳನ್ನು ಕಬಳಿಸಿದ್ದರು. ಈ ಅವಧಿಯಲ್ಲಿ ಅವರ ಎಕಾನಮಿ 2.76 ಆಗಿತ್ತು. ಇದಷ್ಟೇ ಅಲ್ಲದೇ 20 ಕ್ಕಿಂತ ಕಡಿಮೆ ಸರಾಸರಿಯಲ್ಲಿ 200 ಟೆಸ್ಟ್ ವಿಕೆಟ್‌ಗಳನ್ನು ಪಡೆದ ವಿಶ್ವದ ಮೊದಲ ಬೌಲರ್ ಕೂಡ ಎನಿಸಿಕೊಂಡಿದ್ದಾರೆ. ಇದರೊಂದಿಗೆ ಟೆಸ್ಟ್​ ರ‍್ಯಾಂಕಿಂಗ್​ನಲ್ಲೂ ಬುಮ್ರಾ ಅಗ್ರಸ್ಥಾನದ ಬೌಲರ್​ ಆಗಿದ್ದಾರೆ.

ಪ್ರಶಸ್ತಿ ಬಗ್ಗೆ ಪ್ರತಿಕ್ರಿಯೆ ನೀಡಿದ ಬುಮ್ರಾ, "ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಗೆ ಆಯ್ಕೆಯಾಗಿರುವುದು ಸಂತೋಷ ತಂದಿದೆ. ನನ್ನ ಕಾರ್ಯಕ್ಷಮತೆಯನ್ನು ಗುರುತಿಸಿರುವುದಕ್ಕೆ ತುಂಬಾ ಖುಷಿಯಾಗಿದೆ. ವಿಶ್ವ ಕ್ರಿಕೆಟ್​ನಲ್ಲಿ ಬಾರ್ಡರ್ - ಗವಾಸ್ಕರ್ ಟ್ರೋಫಿ ಅತ್ಯಂತ ಕಠಿಣ ಸರಣಿಯಾಗಿದೆ. ಇಂತಹ ಸರಣಿಯಲ್ಲಿ ನನ್ನ ದೇಶಕ್ಕಾಗಿ ಉತ್ತಮ ಪ್ರದರ್ಶನ ನೀಡಿದ್ದು ನನಗೆ ಹೆಮ್ಮೆ ಅನಿಸುತ್ತಿದೆ ಎಂದು ತಿಳಿಸಿದ್ದಾರೆ.

ತಿಂಗಳ ಮಹಿಳಾ ಆಟಗಾರ್ತಿ ಪ್ರಶಸ್ತಿ:ಆಸ್ಟ್ರೇಲಿಯಾದ ಅನ್ನಾಬೆಲ್ ಸದರ್ಲ್ಯಾಂಡ್ ಐಸಿಸಿ ತಿಂಗಳ ಮಹಿಳಾ ಆಟಗಾರ್ತಿ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಭಾರತ ಮತ್ತು ನ್ಯೂಜಿಲೆಂಡ್ ವಿರುದ್ಧದ ಸರಣಿಗಳಲ್ಲಿ ಅವರು ಅದ್ಭುತ ಪ್ರದರ್ಶನ ನೀಡಿದ್ದರು. ಕಿವೀಸ್ ವಿರುದ್ಧದ ಸರಣಿಯಲ್ಲಿ ಸತತ ಪಂದ್ಯಶ್ರೇಷ್ಠ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, "ಡಿಸೆಂಬರ್ ನನಗೆ ಅದ್ಭುತವಾದ ತಿಂಗಳು.

ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಕ್ಕೆ ಖುಷಿ ತಂದಿದೆ. ನಮ್ಮ ತಂಡವು ಬಲಿಷ್ಠ ಬ್ಯಾಟಿಂಗ್ ಮತ್ತು ಬೌಲಿಂಗ್ ಘಟಕ ಹೊಂದಿದ್ದು, ಇದರಿಂದಾಗಿ ನನಗೆ ಮುಕ್ತವಾಗಿ ಆಡಲು ಅವಕಾಶ ಸಿಕ್ಕಿತು. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವುದನ್ನು ನೋಡಿ ನನಗೆ ಸಂತೋಷವಾಯಿತು. ಮುಂಬರುವ ವಿಶ್ವಕಪ್‌ಗೆ ಏಕದಿನ ಸರಣಿಗಳು ನಮಗೆ ಬಹಳ ಮುಖ್ಯವಾಗಿವೆ. ಪ್ರಸ್ತುತ ಈ ಪ್ರಶಸ್ತಿ ಗೆಲುವು ನನಗೆ ಹೆಚ್ಚಿನ ಉತ್ಸಾಹವನ್ನು ತುಂಬಿದೆ ಎಂದು ಸದರ್ಲ್ಯಾಂಡ್ ಹೇಳಿದ್ದಾರೆ.

ಇದನ್ನೂ ಓದಿ:6,6,6,6,4,4,4,4,4,4!:​ ಕೊನೆಗೂ ಫಾರ್ಮ್​ಗೆ ಮರಳಿದ RCB ಸ್ಪೋಟಕ ಬ್ಯಾಟರ್​; ಬೆಚ್ಚಿಬಿದ್ದ ಬೌಲರ್ಸ್​!

ABOUT THE AUTHOR

...view details