ETV Bharat / bharat

ಬಿಯರ್​ ಉತ್ಪಾದನೆಗೆ ಪಡಿತರ ಅಕ್ಕಿ ಬಳಕೆ; ರೈಸ್​ ಮಿಲ್​​ಗಳಿಂದ ಪಾನೀಯ ಕಂಪನಿಗಳಿಗೆ ಸರಬರಾಜು! - RATION RICE DIVERTED FOR BEER

ಪಡಿತರ ಫಲಾನುಭವಿಗಳಿಗೆ ನೀಡುವ ಅಕ್ಕಿಯನ್ನು ಮಧ್ಯವರ್ತಿಗಳು ಕಡಿಮೆ ದರದಲ್ಲಿ ಕೊಂಡು ಅವುಗಳನ್ನು ಬಿಯರ್​ ಉತ್ಪಾದನೆಗೆ ಬಳಕೆ ಮಾಡುತ್ತಿರುವುದು ಕಂಡು ಬಂದಿದೆ.

Ration Rice Diverted for Beer Production: Mills in Telangana Turn Rice into Flour for Beverage Companies
ಸಾಂದರ್ಭಿಕ ಚಿತ್ರ (ಈಟಿವಿ ಭಾರತ್​)
author img

By ETV Bharat Karnataka Team

Published : Feb 21, 2025, 12:53 PM IST

ನಿಜಾಮಾಬಾದ್​/ ಮೆಹಬೂಬಾಬಾದ್​: ಬಿಯರ್​ ಉತ್ಪಾದನೆಗಾಗಿ ಪಡಿತರ ಅಕ್ಕಿಯನ್ನು ಬಳಕೆ ಮಾಡುತ್ತಿರುವ ದಂಧೆ ತೆಲಂಗಾಣದಲ್ಲಿ ಬೆಳಕಿಗೆ ಬಂದಿದೆ. ನಾಗರಿಕ ಪೂರೈಕೆ ವಿಭಾಗದ ಪರಿಶೀಲನೆಯಲ್ಲಿ ಇದು ಬೆಳಕಿದೆ ಬಂದಿದ್ದು, ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿನ ದೊಡ್ಡ ಪ್ರಮಾಣದ ಅಕ್ಕಿಯನ್ನು ಹಿಟ್ಟಾಗಿ ಪರಿವರ್ತಿಸಿ ಅದನ್ನು ತೆಲಂಗಾಣ, ಮಹಾರಾಷ್ಟ್ರ, ಕರ್ನಾಟಕ ಬೇವರೇಜ್​( ಪಾನೀಯ) ಕಂಪನಿಗಳಿಗೆ ಪೂರೈಕೆ ಮಾಡುತ್ತಿರುವುದು ಬಯಲಾಗಿದೆ.

ಈ ರೀತಿ ಅಕ್ರಮ ಸಾಗಣೆಗೆ ಮುನ್ನ ಮಧ್ಯವರ್ತಿಗಳು ಈ ಪಡಿತರ ಅಕ್ಕಿನಲ್ಲಿ ಹಿಟ್ಟಾಗಿ ಪರಿವರ್ತಿಸುತ್ತಿರುವುದು ಕಂಡು ಬಂದಿದೆ. ಗಂಜಿ ಮತ್ತು ಹುದುಕುವಿಕೆಗೆ ಹೆಸರಾಗಿರುವ ದೊಡ್ಡು ಎಂಬ ಅಕ್ಕಿಯನ್ನು ವಿಶೇಷವಾಗಿ ಈ ರೀತಿಯ ಪಾನೀಯಗಳಿಗೆ ಬಳಕೆ ಮಾಡುತ್ತಿದ್ದು, ಇದೇ ಅಕ್ಕಿಗೆ ಬೇವರೇಜ್​ ಕಂಪನಿಗಳು ಬೇಡಿಕೆ ಇಟ್ಟಿವೆ. ಕಡಿಮೆ ಬೆಲೆ ಹೊಂದಿರುವ ಅಕ್ಕಿಯನ್ನು ಕೇವಲ 10 ರೂಗೆ ಖರೀದಿ ಮಾಡಲಾಗುತ್ತಿದ್ದು, ಇದು ಸಾರಾಯಿ ತಯಾರಿಕಾ ಕಂಪನಿಗಳಿಗೆ ಹೆಚ್ಚು ಆಕರ್ಷಣಿಯ ಆಯ್ಕೆಯಾಗಿದೆ ಎಂದು ತಿಳಿದು ಬಂದಿದೆ.

ಹೇಗೆ ನಡೆಯತ್ತೆ ಈ ರಾಕೆಟ್​ ಕಾರ್ಯಚರಣೆ?:

ಸಂಗ್ರಹ: ಪಡಿತರದಾರರಿಗೆ ಬೇಡವಾದ ಈ ಅಕ್ಕಿಯನ್ನು 10 ರೂನಂತೆ ಡೀಲರ್​ಗಳು ಕೊಳ್ಳುತ್ತಾರೆ.

ಪ್ರಕ್ರಿಯೆ: ಈ ಅಕ್ಕಿಯನ್ನು ಮಿಲ್​ಗಳಿಗೆ 15-18 ರೂನಂತೆ ಮಾರಾಟ ಮಾಡಿ, ಹಿಟ್ಟು ಮಾಡಿಸಲಾಗುತ್ತದೆ.

ಬ್ರಾಂಡಿ ತಯಾರಿಕಾ ಕಂಪನಿಗಳಿಗೆ ಮಾರಾಟ: ಈ ಹಿಟ್ಟನ್ನು ಬಳಿಕ 25-35 ಕೆಜಿಯಂತೆ ಬಿಯರ್​ ಉತ್ಪಾದಕರಿಗೆ ಮಾರಾಟ ಮಾಡಲಾಗುತ್ತದೆ.

ಎಲ್ಲ ಕೇಂದ್ರಗಳು ಹಾಟ್​​​ಸ್ಪಾಟ್​: ವರಂಗಲ್ ಜಿಲ್ಲೆಯ ನರಸಂಪೇಟೆ, ಕೇಸಮುದ್ರಂ, ಗುಡೂರು, ಚೆನ್ನರಾಯಪೇಟೆ, ನೆಕ್ಕೊಂಡ ಮತ್ತು ದುಗ್ಗೊಂದಿ ಪ್ರದೇಶಗಳಲ್ಲಿನ ಮಿಲ್​ಗಳು ಹಾಟ್‌ಸ್ಪಾಟ್‌ಗಳೆಂದು ಗುರುತಿಸಲಾಗಿದೆ. ಕಳೆದ ವರ್ಷ ಕೂಡ ಪಡಿತರ ಅಕ್ಕಿ ದುರ್ಬಳಕೆಗೆ ಸಂಬಂಧಿಸಿದಂತೆ 225 ಪ್ರಕರಣಗಳು ದಾಖಲಾಗಿವೆ. ಈ ರೀತಿಯ ಪ್ರಕರಣಗಳು ನಿಜಾಮಾಬಾದ್ ಜಿಲ್ಲೆಯಲ್ಲಿ ಪ್ರತಿವರ್ಷ 150ಕ್ಕೂ ಹೆಚ್ಚು ಕೇಸ್​​​​ ದಾಖಲಾಗುತ್ತಿರುವುದು ವರದಿಯಾಗುತ್ತಿದ್ದು, ಬೋಧನ್, ನಿಜಾಮಾಬಾದ್ ಮತ್ತು ಆರ್ಮೂರ್ ವಿಭಾಗಗಳಲ್ಲಿ ಮಿಲ್​ಗಳು ಹೆಚ್ಚು ಸಕ್ರಿಯವಾಗಿದೆ.

ರೌಡಿಶೀಟರ್​ಗಳಿಂದಲೇ ಇಂತಹ ಪ್ರಕ್ರಿಯೆ: ಈ ರೀತಿಯ ಮಧ್ಯವರ್ತಿಯ ಅಕ್ರಮ ಉದ್ಯಮದಲ್ಲಿ ತೊಡಗಿರುವವರು ರೌಡಿ ಶೀಟರ್​ಗಳಾಗಿದ್ದಾರೆ ಎಂಬುದನ್ನು ಅಧಿಕಾರಿಗಳು ಪತ್ತೆ ಮಾಡಿದ್ದು, ಇದು ಸವಾಲಾಗಿದೆ. ಪಡಿತರ ಫಲಾನುಭವಿಗಳಿಗೆ ಈ ಅಕ್ಕಿ ತಲುಪುವ ಮೊದಲೇ ಅವುಗಳನ್ನು ಬೇರೆಡೆಗೆ ತಿರುಗಿಸಲಾಗುತ್ತಿದೆ. ಕೆಸಮುದ್ರಂ ಮಂಡಲದ ಮಹಮೂದ್‌ಪಟ್ನಂ ಗ್ರಾಮದ ಹೊರವಲಯದಲ್ಲಿರುವ ಅಕ್ಕಿ ಮಿಲ್​ಗಳ ಮೇಲೆ ಇತ್ತೀಚೆಗೆ ದಾಳಿ ನಡೆಸಿ ಹಿಟ್ಟಾಗಿ ಸಂಸ್ಕರಿಸಲು ಸಿದ್ಧವಾಗಿದ್ದ 15 ಕ್ವಿಂಟಲ್ ಪಡಿತರ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ.

ಈ ಅಕ್ರಮವನ್ನು ಮಟ್ಟ ಹಾಕಲು ನಾಗರಿಕ ಪೂರೈಕೆ ವಿಭಾಗ ತೀವ್ರ ಶೋಧ ನಡೆಸಿದ್ದು, ಈ ರೀತಿ ಪಡಿತರ ಅಕ್ಕಿ ದುರ್ಬಳಕೆ ಚಟುವಟಿಕೆ ಕಂಡು ಬಂದರೆ, ತಕ್ಷಣಕ್ಕೆ ಗಮನಕ್ಕೆ ತರುವಂತೆ ಕೂಡ ಜನರಲ್ಲಿ ಮನವಿ ಮಾಡಿದೆ.

ಇದನ್ನೂ ಓದಿ: ಮುಂಬೈನ ಕೊಳೆಗೇರಿ ಪ್ರದೇಶದಲ್ಲಿ ಭಾರಿ ಅಗ್ನಿ ಅವಘಡ: 150-200 ಗುಡಿಸಲುಗಳು ಬೆಂಕಿಗೆ ಆಹುತಿ

ಇದನ್ನೂ ಓದಿ: PM ಮಹತ್ವಾಕಾಂಕ್ಷೆಯ ಅಮೃತ ಭಾರತ ಎಕ್ಸ್‌ಪ್ರೆಸ್ ಪ್ರಾಯೋಗಿಕ ಪರೀಕ್ಷೆ ಇಂದು: ಈ ರೈಲಲ್ಲಿ ಏನೇನೆಲ್ಲಾ ವ್ಯವಸ್ಥೆ ಇದೆ ಗೊತ್ತಾ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.