ಕರ್ನಾಟಕ

karnataka

ETV Bharat / sports

ಟಿ20ಯಲ್ಲಿ ಟೀಂ ಇಂಡಿಯಾ 2 ವಿಶ್ವದಾಖಲೆ: ವಿಂಡೀಸ್‌​ ಹೆಸರಲ್ಲಿದ್ದ ಒಂದು ದಾಖಲೆ ಪುಡಿ - TEAM INDIA T20I SIXES IN 2024

ದಕ್ಷಿಣ ಆಫ್ರಿಕಾ ವಿರುದ್ಧ ನಡೆದ 3ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವಿನ ಜೊತೆ ವಿಶ್ವದಾಖಲೆ ಬರೆದಿದೆ.

ಟೀಂ ಇಂಡಿಯಾ
ಟೀಂ ಇಂಡಿಯಾ (IANS)

By ETV Bharat Sports Team

Published : Nov 14, 2024, 11:54 AM IST

Team India Hit Most Sixes In T20: ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಟಿ20 ಸರಣಿಯಲ್ಲಿ ಟೀಂ ಇಂಡಿಯಾ ಭರ್ಜರಿ ಪ್ರದರ್ಶನ ತೋರುತ್ತಿದೆ. 4 ಪಂದ್ಯಗಳ ಈ ಸರಣಿಯಲ್ಲಿ ಈಗಾಗಲೇ ಎರಡು ಪಂದ್ಯಗಳನ್ನು ಗೆದ್ದಿದ್ದು, 2-1 ಅಂತರದಿಂದ ಸರಣಿ ಮುನ್ನಡೆ ಸಾಧಿಸಿದೆ. ನಿನ್ನೆ ನಡೆದ 3ನೇ ಪಂದ್ಯದಲ್ಲಿ ಭಾರತ ವಿಶ್ವದಾಖಲೆಯನ್ನೂ ಬರೆಯಿತು.

ಈ ಪಂದ್ಯದಲ್ಲಿ ಮೊದಲು ಬ್ಯಾಟ್​ ಮಾಡಿದ್ದ ಭಾರತ, ತಿಲಕ್​ ವರ್ಮಾ (107) ಶತಕ ಮತ್ತು ಅಭಿಷೇಕ್​ ಶರ್ಮಾ (50) ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 219 ರನ್​ ಕಲೆ ಹಾಕಿತು. ಈ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ 208 ರನ್​ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ ಟೀಂ ಇಂಡಿಯಾ 11 ರನ್​ಗಳ ಗೆಲುವು ಸಾಧಿಸಿತು.

ಕ್ಯಾಲೆಂಡರ್​ ವರ್ಷದಲ್ಲಿ ಅತೀ ಹೆಚ್ಚು ಸಿಕ್ಸರ್​:ಈ ಪಂದ್ಯದಲ್ಲಿ ಟೀಂ ಇಂಡಿಯಾ ಒಟ್ಟು 13 ಸಿಕ್ಸರ್​​ಬಾರಿಸಿತು. ಇದರೊಂದಿಗೆ ಒಂದೇ ವರ್ಷದಲ್ಲಿ ಅಂದರೆ, 2024ರಲ್ಲಿ ಅತೀ ಹೆಚ್ಚು ಸಿಕ್ಸರ್ ಸಿಡಿಸಿದ ದಾಖಲೆ ಬರೆದಿದೆ. ಇದಕ್ಕೂ ಮೊದಲು ಈ ದಾಖಲೆ ವೆಸ್ಟ್​ ಇಂಡೀಸ್​ ಹೆಸರಲ್ಲಿತ್ತು. ಈ ವರ್ಷ ಒಟ್ಟು 21 ಟಿ20 ಪಂದ್ಯಗಳನ್ನು ಆಡಿರುವ ವೆಸ್ಟ್​ ಇಂಡೀಸ್​ 201 ಸಿಕ್ಸರ್​ಗಳನ್ನು ಸಿಡಿಸಿತ್ತು. ಇದೀಗ ಟೀಂ ಇಂಡಿಯಾ ಇದನ್ನು ಮುರಿಯುವಲ್ಲಿ ಯಶಸ್ವಿಯಾಗಿದೆ. ಒಟ್ಟು 25 ಟಿ20 ಪಂದ್ಯಗಳನ್ನು ಆಡಿರುವ ಭಾರತ 214 ಸಿಕ್ಸರ್‌ ಸಿಡಿಸಿದೆ.

ವಿದೇಶಿ ನೆಲದಲ್ಲಿ 100ನೇ ಗೆಲುವು:ದಕ್ಷಿಣ ಆಫ್ರಿಕಾ ವಿರುದ್ಧ 3ನೇ ಟಿ20 ಪಂದ್ಯ ಗೆಲುವು ಸಾಧಿಸುತ್ತಿದ್ದಂತೆ ಭಾರತ ಮತ್ತೊಂದು ದಾಖಲೆ ಬರೆದಿದೆ. ವಿದೇಶಿ ನೆಲದಲ್ಲಿ ಇದುವರೆಗೂ ಒಟ್ಟು 152 ಪಂದ್ಯಗಳನ್ನು ಆಡಿದ್ದು ಇದರಲ್ಲಿ 100 ಪಂದ್ಯಗಳನ್ನು ಗೆದ್ದುಕೊಂಡಿದೆ. ಈ ಮೂಲಕ ತವರಿನಿಂದ ಹೊರಗೆ ನಡೆದ ಪಂದ್ಯಗಳಲ್ಲಿ ಹೆಚ್ಚು ಗೆಲುವು ಸಾಧಿಸಿದ ಎರಡನೇ ತಂಡವಾಗಿ ಹೊರಹೊಮ್ಮಿದೆ. ಈ ಪಟ್ಟಿಯಲ್ಲಿ ಪಾಕಿಸ್ತಾನ ಅಗ್ರಸ್ಥಾನದಲ್ಲಿದೆ. ಪಾಕ್​ ಇದುವರೆಗೂ ಒಟ್ಟು 203 ಪಂದ್ಯಗಳನ್ನು ಆಡಿದ್ದು 116 ಪಂದ್ಯಗಳಲ್ಲಿ ಜಯಿಸಿದೆ.

ಮೂರನೇ ಸ್ಥಾನದಲ್ಲಿ ಅಫ್ಘಾನಿಸ್ತಾನ ಇದ್ದು ಇದುವೆೃರೆಗೂ ವಿದೇಶಿ ನೆಲದಲ್ಲಿ 138 ಪಂದ್ಯಗಳನ್ನು ಆಡಿದೆ. ಇದರಲ್ಲಿ 84 ಪಂದ್ಯಗಳನ್ನು ಜಯಿಸಿದೆ. ಆಸ್ಟ್ರೇಲಿಯಾ 137 ಪಂದ್ಯಗಳನ್ನಾಡಿ 71 ಗೆಲುವು, ಇಂಗ್ಲೆಂಡ್​ 129 ಪಂದ್ಯಗಳಲ್ಲಿ 67 ಗೆಲುವು ಸಾಧಿಸಿ ಕ್ರಮವಾಗಿ ನಂತರದ ಸ್ಥಾನಗಳಲ್ಲಿವೆ.

ಇದನ್ನೂ ಓದಿ:ಒಂದು ಕಲ್ಲು ಎರಡು ಹಕ್ಕಿ: ಅರ್ಷದೀಪ್​ ದಾಳಿಗೆ ಬುಮ್ರಾ-ಭುವನೇಶ್ವರ್​ ದಾಖಲೆ ಅಪ್ಪಚ್ಚಿ

ABOUT THE AUTHOR

...view details