ಹೈದರಾಬಾದ್: ರತನ್ ಟಾಟಾ ಪ್ರಸಿದ್ಧ ಕೈಗಾರಿಕೋದ್ಯಮಿಯಾದರೂ ಕ್ರಿಕೆಟ್ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದರು. ಭಾರತೀಯ ಕ್ರಿಕೆಟರ್ಗಳಿಗೆ ಉದ್ಯೋಗ ನೀಡಿ ಅವರ ಪಾಲಿಗೆ ಅನ್ನದಾತರಾಗಿದ್ದರು. ಟಾಟಾ ಸಮೂಹದ ವಿವಿಧ ಕಂಪನಿಗಳು ಹಲವಾರು ಕ್ರಿಕೆಟ್ ಆಟಗಾರರ ಬದುಕು ಬೆಳಗಿಸಿವೆ.
ಮಾಜಿ ಕ್ರಿಕೆಟಿಗ ಫಾರೂಕ್ ಅವರಿಗೆ ಟಾಟಾ ಮೋಟಾರ್ಸ್ ವಿಭಾಗದಲ್ಲಿ ನೌಕರಿ ನೀಡಲಾಗಿತ್ತು. ಪ್ರಸ್ತುತ ಬಿಸಿಸಿಐ ಮುಖ್ಯ ಆಯ್ಕೆಗಾರರೂ ಆಗಿರುವ ಅಜಿತ್ ಅಗರ್ಕರ್, ಭಾರತದ ಮಾಜಿ ಸ್ಟಾರ್ ಆಲ್‌ರೌಂಡರ್ ಯುವರಾಜ್ ಸಿಂಗ್, ಹರ್ಭಜನ್ ಸಿಂಗ್, ರಾಬಿನ್ ಉತ್ತಪ್ಪ, ಸಂಜಯ್ ಮಂಜ್ರೇಕರ್, ಶ್ರೀನಾಥ್ ಮತ್ತು ಕೈಫ್ ಅವರಿಗೆ ವಿವಿಧ ವಿಭಾಗಗಳಲ್ಲಿ ನೌಕರಿ ನೀಡಲಾಗಿತ್ತು. ಯುವ ಕ್ರಿಕೆಟಿಗರಾದ ಶಾರ್ದೂಲ್ ಠಾಕೂರ್ ಮತ್ತು ಜಯಂತ್ ಯಾದವ್ ಅವರೂ ಕೂಡಾ ಟಾಟಾ ಗ್ರೂಪ್‌ನಿಂದ ಸಹಾಯ ಪಡೆದಿದ್ದಾರೆ. ಈ ಎಲ್ಲ ಆಟಗಾರರಿಗೆ ಟಾಟಾ ಪವರ್ಸ್, ಸ್ಟೀಲ್ಸ್ ಮತ್ತು ಏರ್‌ವೇಸ್ ಇಲಾಖೆಗಳಲ್ಲಿ ಉದ್ಯೋಗಾವಕಾಶಗಳ ದೊರೆತಿತ್ತು. ಇಷ್ಟು ಮಾತ್ರವಲ್ಲದೇ, ಅವರಿಗೆ ಸ್ಪಾನ್ಸರ್ ಮೂಲಕವೂ ಅವರನ್ನು ಬೆಂಬಲಿಸಲಾಗುತ್ತಿತ್ತು.