ನವದೆಹಲಿ: ಬರುವ ಅಂತಾರಾಷ್ಟ್ರೀಯ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಹಲವು ಆಟಗಾರರು ಮೊದಲ ಬಾರಿಗೆ ಕ್ರೀಡಾಂಗಣಕ್ಕೆ ಇಳಿಯಲಿದ್ದಾರೆ. ಹೊಸ ಚಿಗುರು ಹಳೆ ಬೇರು ಎಂಬಂತೆ ಈ ಚುಟುಕು ವಿಶ್ವಕಪ್‌ನಲ್ಲಿ ವಿವಿಧ ದೇಶಗಳ ಅನುಭವಿ ಆಟಗಾರರ ಜತೆಗೆ ಹಲವು ಯುವ ಆಟಗಾರರು ಕೂಡ ಚಮಕ್ ನೀಡುವ ಉತ್ಸಾಹದಲ್ಲಿದ್ದಾರೆ. ಅದರಲ್ಲಿ ಭಾರತ ತಂಡ ಕೂಡ ಹೊರತಾಗಿಲ್ಲ. ಅನುಭವಿ ಆಟಗಾರರ ಜೊತೆ ಯುವ ಆಟಗಾರರು ತಮ್ಮ ಸಾಮರ್ಥ್ಯ ಸಾಬೀತುಪಡಿಸಿಕೊಳ್ಳಲು ಇದೊಂದು ಉತ್ತಮ ಅವಕಾಶ. ಹಾಗಾಗಿ ಯಾವ ಯಾವ ದೇಶದ, ಯಾರೆಲ್ಲ ಆಟಗಾರರು ಇದೇ ಮೊದಲ ಬಾರಿಗೆ ಟಿ20 ವಿಶ್ವಕಪ್ ಆಡುತ್ತಿದ್ದಾರೆ ಅನ್ನೋ ಮಾಹಿತಿ ಇಲ್ಲಿದೆ.
ಯಶಸ್ವಿ ಜೈಸ್ವಾಲ್ (ಭಾರತ): ಟೀಂ ಇಂಡಿಯಾ ಯುವ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ಗೆ ಇದು ಮೊದಲ ಟಿ20 ವಿಶ್ವಕಪ್. ಕಳೆದ ಹಲವು ದಿನಗಳಿಂದ ಉತ್ತಮ ಲಯದಲ್ಲಿರುವ ಜೈಸ್ವಾಲ್, ನಾಯಕ ರೋಹಿತ್ ಶರ್ಮಾ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ. 17 ಪಂದ್ಯಗಳ 16 ಇನ್ನಿಂಗ್ಸ್‌ಗಳಲ್ಲಿ 1 ಶತಕ ಮತ್ತು 4 ಅರ್ಧ ಶತಕಗಳೊಂದಿಗೆ 502 ರನ್ ಗಳಿಸಿರುವ ಜೈಸ್ವಾಲ್, ಟಿ20 ವಿಶ್ವಕಪ್‌ನಲ್ಲಿ ಆಡುವ ನಿರೀಕ್ಷೆ ಹೊಂದಿದ್ದಾರೆ.
ಹ್ಯಾರಿ ಬ್ರೂಕ್ (ಇಂಗ್ಲೆಂಡ್):ಇಂಗ್ಲೆಂಡ್ ಕ್ರಿಕೆಟ್ ತಂಡದ ಅತ್ಯುತ್ತಮ ಬ್ಯಾಟ್ಸ್‌ಮನ್ ಹ್ಯಾರಿ ಬ್ರೂಕ್ ಕೂಡ ಮೊದಲ ಬಾರಿಗೆ T20 ವಿಶ್ವಕಪ್ ಆಡುತ್ತಿರುವ ಕ್ರೀಡಾಪಟು. 25 ವರ್ಷದ ಈ ಬ್ಯಾಟ್ಸ್‌ಮನ್ ಆಕ್ರಮಣಕಾರಿ ಬ್ಯಾಟಿಂಗ್‌ಗೆ ಹೆಸರುವಾಸಿ. ಬ್ರೂಕ್ ಇಂಗ್ಲೆಂಡ್ ಪರ 30 ಪಂದ್ಯಗಳ 27 ಇನ್ನಿಂಗ್ಸ್‌ಗಳಲ್ಲಿ 2 ಅರ್ಧಶತಕಗಳ ಸಹಾಯದಿಂದ 545 ರನ್ ಗಳಿಸಿದ್ದಾರೆ. ತಂಡ ಕೂಡ ಇವರ ಮೇಲೆ ಅಪಾರ ನಂಬಿಕೆ ಇಟ್ಟುಕೊಂಡಿದೆ.
ತೌಹೀದ್ ಹೃದಯ್ (ಬಾಂಗ್ಲಾದೇಶ): ಬಾಂಗ್ಲಾದೇಶ ಕ್ರಿಕೆಟ್ ತಂಡದ ಯುವ ಎಡಗೈ ಬ್ಯಾಟರ್ ತೌಹಿದ್ ಹೃದಯ್ಗೂ ಇದು ಮೊದಲ ವಿಶ್ವಕಪ್. ಬಾಂಗ್ಲಾದೇಶ ಪ್ರೀಮಿಯರ್ ಲೀಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ನಂತರ ಅವರನ್ನು ಟಿ20 ವಿಶ್ವಕಪ್ ತಂಡದಲ್ಲಿ ಸೇರಿಸಲಾಗಿದೆ. ಇವರು ಬಾಂಗ್ಲಾದೇಶ ಪರ 21 ಟಿ20 ಪಂದ್ಯಗಳ 19 ಇನ್ನಿಂಗ್ಸ್‌ಗಳಲ್ಲಿ 2 ಅರ್ಧಶತಕಗಳೊಂದಿಗೆ 454 ರನ್ ಗಳಿಸಿದ್ದಾರೆ.
ಕನ್ವರ್ಪಾಲ್ ತತ್ಗುರ್ (ಕೆನಡಾ): ಕೆನಡಾ ಕ್ರಿಕೆಟ್ ತಂಡದ ಬಲಗೈ ವೇಗದ ಬೌಲರ್ ಕನ್ವರ್ಪಾಲ್ ತತ್ಗುರ್ ಅವರು ತಮ್ಮ ಬೌಲಿಂಗ್ ವೇಗಕ್ಕೆ ಹೆಸರುವಾಸಿ. ಬರುವ ಟಿ20 ವಿಶ್ವಕಪ್‌ನಲ್ಲಿ ಕನ್ವರ್ಪಾಲ್ ತಮ್ಮ ತಂಡಕ್ಕೆ ನಿರೀಕ್ಷಿತ ಗೆಲುವು ತಂದುಕೊಡಬಲ್ಲ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಕನ್ವರ್ಪಾಲ್ ತಮ್ಮ ವೇಗದ ಬೌಲಿಂಗ್ ಮತ್ತು ಅಮೆರಿಕದ ಬೌನ್ಸಿ ಪಿಚ್‌ಗಳಲ್ಲಿ ಬ್ಯಾಟ್ಸ್‌ಮನ್‌ಗಳನ್ನು ಸಾಕಷ್ಟು ಕಾಡಬಹುದು.